ಸಿದ್ಧಗಂಗಾ ಶ್ರೀಗೆ ಭಾರತರತ್ನ ನೀಡಲು ಮನವಿ
Team Udayavani, Jan 25, 2018, 6:05 AM IST
ಬೆಂಗಳೂರು: ತ್ರಿವಿಧ ದಾಸೋಹ ಮೂರ್ತಿ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ನೀಡುವಂತೆ ಭಕ್ತ ಸಮೂಹದಿಂದ ಒಕ್ಕೊರಲ ಬೇಡಿಕೆ ಕೇಳಿಬರುತ್ತಿದೆ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲ ನಾಯಕರು, ಸಮುದಾಯಗಳು ಒಪ್ಪುವ ಕಾಯಕ ಯೋಗಿ ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಕೊಡುವುದರಿಂದ ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂಬುದೂ ನಿರ್ವಿವಾದ. ಎಲ್‌ಕೆಜಿಯಿಂದ ಎಂಬಿಬಿಎಸ್, ಎಂಜಿನಿಯರಿಂಗ್ ವರೆಗೆ 125 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ನಿತ್ಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯೊಂದಿಗೆ ಅನ್ನ ದಾಸೋಹ ಕಲ್ಪಿಸಿ ಜಗತ್ತಿಗೆ ಮಾದರಿಯಾಗಿರುವುದು ಶ್ರೀ ಸಿದ್ಧಗಂಗಾ ಕ್ಷೇತ್ರ. ಈ ಕ್ಷೇತ್ರದ ಸರ್ವೋಚ್ಚ ಶಕ್ತಿಯೇ ಶ್ರೀಗಳು.
ಸಿದ್ಧಗಂಗಾ ಕ್ಷೇತ್ರದ ಕೀತಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದವರು ಪದ್ಮಭೂಷಣ,
ಕರ್ನಾಟಕ ರತ್ನ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಉದ್ದಾನ ಶಿವಯೋಗಿಗಳ ಶುದಟಛಿ ಸಂಕಲ್ಪಕ್ಕೆ ಅನುಗುಣವಾಗಿ ಸಿದ್ಧಗಂಗಾ ಕ್ಷೇತ್ರವನ್ನು ಅನ್ನ ಮತ್ತು ಭಕ್ತಿ, ಜ್ಞಾನಕ್ರಿಯೆಗಳ ಮಹಾಮನೆಯನ್ನಾಗಿ ರೂಪಿಸಿದ ವಿಶ್ವವಿಭೂತಿ ಚೇತನ ಪೂಜ್ಯ ಶ್ರೀಗಳವರು.
ಸರ್ವಧರ್ಮ ಸಮನ್ವಯಕ್ಕೆ ಜೀವಂತ ಸಾಕ್ಷಿಯಾಗಿರುವ ಶ್ರೀ ಕ್ಷೇತ್ರದಲ್ಲಿ 132 ಕ್ಕೂ ಹೆಚ್ಚು ವಿವಿಧ ಜಾತಿ ವರ್ಗಗಳಿಗೆ ಸೇರಿದ ಬಡ ಕುಟುಂಬಗಳ 9 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ವ್ಯಾಸಂಗ ಮಾಡಲು ಆಶ್ರಯ ಕಲ್ಪಿಸಿ ಮಠಗಳಿಗೆ
ಮಾದರಿಯಾಗಿಸಿದವರು ಡಾ.ಶಿವಕುಮಾರ ಸ್ವಾಮಿಗಳು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಸಹಿತ ಗಣ್ಯಾತಿಗಣ್ಯರು ಶ್ರೀ ಗಳ ದರ್ಶನ ಪಡೆದು ಪಾವನರಾಗಿದ್ದಾರೆ.
ಇಂತಹ ಸಾಧಕ ಶ್ರೀಗಳಿಗೆ ಭಾರತರತ್ನ ಕೊಡುವಂತೆ ಇತ್ತೀಚೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ಸಹಿತ ರಾಜ್ಯದ ಸಮಸ್ತ ಮುಖಂಡರು ಶ್ರೀಗಳಿಗೆ ಭಾರತ ರತ್ನ ದೊರಕಲಿ ಎಂಬ ಆಶಯ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.