ಜಾತಿ, ಧರ್ಮಗಳ ಒಡೆಯ ಹೊರಟ ಮಹಾಪುರುಷ ಸಿದ್ದರಾಮಯ್ಯ
Team Udayavani, Jul 29, 2017, 11:51 AM IST
ಬೆಂಗಳೂರು: ಧರ್ಮ, ಜಾತಿಗಳನ್ನು ಒಟ್ಟುಗೂಡಿಸಿದ ಮಹಾಪುರುಷರನ್ನು ಹೊಂದಿರುವ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ, ಧರ್ಮಗಳನ್ನು ಒಡೆಯಲು ಹೊರಟ ಮಹಾಪುರುಷರಾಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹು°ನಾರ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದಲ್ಲಿ ವಿಷಬೀಜ ಬಿತ್ತುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.
ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ಮತ್ತು ಮೊದಲು ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಸಾಕಷ್ಟು ಮಂದಿ ಮಾಡಿದರೂ ಅವರು ನಾಶವಾದರೇ ಹೊರತು ಪ್ರಯತ್ನ ಕೈಗೂಡಲಿಲ್ಲ. ಇಂದಿರಾಗಾಂಧಿಯಂತವರೇ ಈ ಕೆಲಸದಲ್ಲಿ ವಿಫಲರಾದರು. ಹೀಗಿರುವಾಗ ಸಿದ್ದರಾಮಯ್ಯ ಯಾವ ಲೆಕ್ಕ. ಒಂದು ವೇಳೆ ಆ ಪ್ರಯತ್ನ ಮಾಡಿದರೆ ಸಿದ್ದರಾಮಯ್ಯ ಅವರೇ ಒಡೆದುಹೋಗುತ್ತಾರೆ ಎಂದೂ ಹೇಳಿದರು.
ಯಾವುದೇ ಜಾತಿಗಳನ್ನು ಧರ್ಮವಾಗಿ ಮಾರ್ಪಾಡು ಮಾಡಲು ಆ ಜಾತಿಯ ಧರ್ಮಗುರುಗಳು, ಸಾಧು-ಸಂತರು, ಸಂಘ ಸಂಸ್ಥೆಗಳಿವೆ. ಅದು ರಾಜಕೀಯ ಪಕ್ಷದ ಕೆಲಸ ಅಲ್ಲ. ಒಂದು ಜಾತಿಯವರು ಪ್ರತ್ಯೇಕ ಧರ್ಮ ಕೇಳಿದರು ಎಂದು ರಾಜಕೀಯ ಪಕ್ಷವೊಂದು ಈ ಕೆಲಸ ಮಾಡಲು ಹೊರಟರೆ ನಾಳೆ ಕುರುಬರು, ದಲಿತರು, ತಿಗಳರು ಹೀಗೆ ಎಲ್ಲಾ ಜಾತಿಯವರೂ ತಾವು ಅಲ್ಪಸಂಖ್ಯಾತರಾಗಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ಧರ್ಮ ಕೇಳಬಹುದು. ಆಗ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರತ್ಯೇಕ ಧರ್ಮ ಸ್ಥಾಪನೆಗೆ ಹೊರಟಿರುವ ಕಾಂಗ್ರೆಸ್‌ನವರು ಅರಿತಿದ್ದಾರೆಯೇ ಎಂದು ಪ್ರಶ್ನಿಸಿದರು.
ದೇಶಾದ್ಯಂತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಬರುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಾಗದೆ ಜಾತಿ, ಧರ್ಮವನ್ನು ಒಡೆಯುವ ಮೂಲಕ ಪರಸ್ಪರ ಎತ್ತಿಕಟ್ಟಲು ಮುಂದಾಗಿದ್ದಾರೆ. ಇನ್ನೊಂದೆಡೆ ಹಿಂದುತ್ವದ ಪರ ಇರುವ ಸರ್ಕಾರಿ ಅಧಿಕಾರಿಗಳನ್ನು ಮಟ್ಟ ಹಾಕುತ್ತೇನೆ ಎನ್ನುತ್ತಿದ್ದಾರೆ. ಇದಕ್ಕೆಲ್ಲಾ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಾತಿ ಗಣತಿ ವರದಿ ಪ್ರಕಟಿಸಿ: ರಾಜ್ಯ ಸರ್ಕಾರ ಸುಮಾರು 180 ಕೋಟಿ ರೂ. ವೆಚ್ಚ ಮಾಡಿ, ಸಾವಿರಾರು ಸರ್ಕಾರಿ ನೌಕರರನ್ನು ಬಳಸಿಕೊಂಡು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಗಣತಿ ಮಾಡಿಸಿದೆ. ಕಳೆದ ನವೆಂಬರ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಡಿಸೆಂಬರ್ ಅಥವಾ ಜನವರಿಯಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಈ ಗಡುವು ಮುಗಿದು ಅನೇಕ ತಿಂಗಳು ಕಳೆದರೂ ವರದಿ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕೂಡಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಅಂಗವಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮಾವೇಶ ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ಉದ್ಘಾಟನೆ ಎಂದು ವ್ಯಂಗ್ಯವಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದರಲ್ಲೇ ಆನಂದ. ಅದಕ್ಕಾಗಿ ಈ ಸಮಾವೇಶ ಹಮ್ಮಿಕೊಂಡಿದ್ದರು ಎಂದು ಹೇಳಿದರು.
ವಿನಯ್-ಸಂತೋಷ್ ಪ್ರಕರಣ ರಾಜಕೀಯ ಷಡ್ಯಂತ್ರ
ಬೆಂಗಳೂರು: ತಮ್ಮ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡುವೆ ಹುಳಿ ಹಿಂಡುವ ಕೆಲಸ ಮಾಡಲು ವಿಫಲರಾದವರು ಇದೀಗ ತಮ್ಮಿಬ್ಬರ ಆಪ್ತರಾದ ವಿನಯ್ ಮತ್ತು ಸಂತೋಷ್ ಅವರ ಮೂಲಕ ವೈಷಮ್ಯ ಮೂಡಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಈ ಹಿಂದೆ ಸ್ನೇಹಿತರಾಗಿದ್ದ ವಿನಯ್ ಮತ್ತು ಸಂತೋಷ್ ಮಧ್ಯೆ ಏನೋ ಸಮಸ್ಯೆ ಬಂದಿದೆ. ಆದರೆ, ನನಗೆ ಮತ್ತು ಯಡಿಯೂರಪ್ಪ ಅವರಿಗೆ ಇದರ ಮಾಹಿತಿ ಇಲ್ಲ. ಹೀಗಿದ್ದರೂ ಪೊಲೀಸರು ರಾತ್ರೋರಾತ್ರಿ ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರೆ ಇದರ ಹಿಂದೆ ಕಾಂಗ್ರೆಸ್‌ನ ಷಡ್ಯಂತ್ರ ಇರುವುದು ಸ್ಪಷ್ಟ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನಾನು ಮತ್ತು ಯಡಿಯೂರಪ್ಪ ಒಟ್ಟಾಗಿ ಮತ್ತು ಚೆನ್ನಾಗಿರುವುದು ಕೆಲವರಿಗೆ, ಅದರಲ್ಲೂ ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ. ಹೀಗಾಗಿ ನಮ್ಮ ಆಪ್ತ ಸಹಾಯಕರ ಹೆಸರಿನಲ್ಲಿ ಇಬ್ಬರೂ ಬಡಿದಾಡಿಕೊಳ್ಳಲಿ ಎಂದು ಸಂತೋಷ್ ಮತ್ತು ವಿನಯ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಬಿಟ್ಟು ಕಾನೂನು ರೀತಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.