ಸಿದ್ದರಾಮಯ್ಯ ಟ್ವೀಟ್ಗೆ ರಾಜ್ಯ ಬಿಜೆಪಿ ತಿರುಗೇಟು
Team Udayavani, Aug 27, 2018, 6:25 AM IST
ಬೆಂಗಳೂರು: ಕೊಡಗು ಭೇಟಿಯ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಸಾ.ರಾ. ಮಹೇಶ್ ನಡುವೆ ನಡೆದ ವಿವಾದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ಗೆ ಬಿಜೆಪಿ ತಿರುಗೇಟು ನೀಡಿದೆ.
ಕೊಡಗಿಗೆ ಭೇಟಿ ನೀಡಿದ್ದ ರಕ್ಷಣಾ ಮಂತ್ರಿಗಳು ನಷ್ಟ ಅಂದಾಜು ಮಾಡುವ ಬದಲಿಗೆ, ರಾಜ್ಯ ಸಚಿವರ ಮೇಲೆ ಪ್ರಾಬಲ್ಯ ಸಾಧಿಸುವುದರಲ್ಲೇ ನಿರತರಾಗಿದ್ದರು. ಪರಿಹಾರ ನಿಧಿ ಬಿಡುಗಡೆಯಲ್ಲಿ ಪ್ರಧಾನ ಮಂತ್ರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ಕರ್ನಾಟಕ ಬಗ್ಗೆ ಹೊಂದಿರುವ ಉದಾಸೀನತೆಯನ್ನು ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಶನಿವಾರ ಟ್ವೀಟ್ ಮಾಡಿದ್ದರು. ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ನಿಭಾಯಿಸುತ್ತಿದ್ದು,ಕೊಡಗು ಮರು ನಿರ್ಮಾಣದಲ್ಲಿ ಕೊಡಗು ಜನರೊಂದಿಗೆ ನಿಲ್ಲಲಿದೆ. ಸಿದ್ದರಾಮಯ್ಯ ಅವರೇ, ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುವುದನ್ನು ಬಿಟ್ಟು, ಮೈತ್ರಿ ಸರ್ಕಾರದ ಜತೆ ಸಮನ್ವಯ ಸಭೆ ನಡೆಸಿ ಸರ್ಕಾರದಿಂದ ಕೊಡಗು ಜನರಿಗೆ ಏನು ಮಾಡುತ್ತೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ತಿರುಗೇಟು ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.