ಕೃಷಿ ಉತ್ಪನ್ನಗಳ ದರದಲ್ಲಿ ಗಣನೀಯ ಇಳಿಮುಖ


Team Udayavani, Jan 12, 2018, 8:18 AM IST

12-4.jpg

ಬೆಂಗಳೂರು: ವರ್ಷದ ಹಿಂದೆ ಜಾರಿಗೊಳಿಸಿದ ನೋಟು ನಿಷೇಧದ ವ್ಯತಿರಿಕ್ತ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಈಗಲೂ ಮುಂದುವರಿದಿದ್ದು, ಕೃಷಿ ಉತ್ಪನ್ನಗಳ ದರ ಗಣನೀಯವಾಗಿ ಇಳಿಮುಖವಾಗಿದೆ. ಅಷ್ಟೇ ಅಲ್ಲ, ಇದು ಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ!. ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗ ನಡೆಸಿದ ಬೆಲೆ ಮುನ್ಸೂಚನೆ ಅಧ್ಯಯನದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ನೋಟು ಅಮಾನ್ಯಿàಕರಣದಿಂದ ನಗದು
ಹಣದ ತೀವ್ರ ಕೊರತೆ ದೇಶಾದ್ಯಂತ ಉಂಟಾಗಿದ್ದು, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿ, ಶೇಖರಣೆ, ಸಾಗಾಣಿಕೆಯಲ್ಲಿ ತೀವ್ರ ಅಡಚಣೆಯಾಯಿತು. ಇದರ ಪರಿಣಾಮ ಮಾರುಕಟ್ಟೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಕೃಷಿ
ಉತ್ಪನ್ನಗಳನ್ನು ಖರೀದಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಹಾಗಾಗಿ, ರೈತರು ಮತ್ತಷ್ಟು ನಷ್ಟ ಅನುಭವಿಸುವುದು ಬಹುತೇಕ ಖಚಿತವಾಗಿದೆ.

ಕಳೆದ ವರ್ಷ ಉತ್ಪಾದನೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಉತ್ಪಾದನೆ ಕಡಿಮೆ ಇದ್ದಾಗ, ಹೆಚ್ಚು ಬೇಡಿಕೆಯಿಂದ ದರ ಏರಿಕೆ ಆಗಬೇಕಿತ್ತು. ಆದರೆ, ಅಧಿಕ ಮೌಲ್ಯದ ನೋಟಿನ ಅಮಾನ್ಯಿಕರಣದಿಂದ ಖರೀದಿದಾರರು ಇಲ್ಲವಾಯಿತು. ಇದರಿಂದ ಶೇಖರಣೆ ಪ್ರಮಾಣ ಹೆಚ್ಚಳವಾಯಿತು. ನಂತರದ ದಿನಗಳಲ್ಲಿ ಖರೀದಿ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದ್ದಂತೆ ಮಾರುಕಟೆಯಲ್ಲಿ ಆವಕ ಅಧಿಕವಾಯಿತು. ಈ ಅಕಾಲಿಕ ಸಂದರ್ಭದಲ್ಲಿ ಬಂದ
ಆವಕವು ಧಾರಣೆ ಕುಸಿಯಲು ಕಾರಣವಾಯಿತು ಎಂದು ವರದಿ ಸ್ಪಷ್ಟಪಡಿಸಿದೆ.

ತೊಗರಿ; ಶೇ. 254ರಷ್ಟು ಅಧಿಕ ಆವಕ!: 2016ರ ನವೆಂಬರ್‌ 9ರಂದು ನೋಟು ನಿಷೇಧಿಸಲಾಗಿದೆ. ಇದರ ನಂತರದಲ್ಲಿ ಅಂದರೆ 2017ರ ಜನವರಿ-ನವೆಂಬರ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳ ಆವಕದಲ್ಲಿ ಸಾಕಷ್ಟು ಏರುಪೇರು ಆಗಿದೆ. ದ್ವಿದಳಧಾನ್ಯಗಳು ಶೇ.25ರಷ್ಟು ಹೆಚ್ಚು ಆವಕವಾಗಿದ್ದು,
ಇದರಿಂದ ಶೇ.30ರಷ್ಟು ಬೆಲೆ ಇಳಿಕೆಯಾಯಿತು. ಸಾಂಬಾರು ಬೆಳೆಗಳು ಶೇ.7ರಷ್ಟು ಹೆಚ್ಚಾಗಿದ್ದು, ಪರಿಣಾಮ ಶೇ. 13ರಷ್ಟು ದರ ಕುಸಿಯಿತು. ತೊಗರಿ ಆಗಸ್ಟ್‌ ಒಂದೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಶೇ.254ರಷ್ಟು ಹೆಚ್ಚು ಮಾರುಕಟ್ಟೆಗೆ ಬಂದಿದೆ. ಇದರಿಂದ ಶೇ.34ರಷ್ಟು ಬೆಲೆ ಕುಸಿಯಿತು. ಒಟ್ಟಾರೆಯಾಗಿ ತೊಗರಿ ಧಾರಣೆ ಶೇ.49ರಷ್ಟು ಕುಸಿತಗೊಂಡಿತು. ಅಂದಹಾಗೆ, ಸರ್ಕಾರವು ತೊಗರಿ ಕ್ವಿಂಟಲ್‌ಗೆ 5,600 ರೂ.ಬೆಂಬಲ ಬೆಲೆ ಘೋಷಿಸಿತ್ತು. ವಿಚಿತ್ರವೆಂದರೆ, ಬಹುತೇಕ ಈ ಎಲ್ಲ ಬೆಳೆಗಳ ವಿಸ್ತೀರ್ಣ ಮತ್ತು ನಿರೀಕ್ಷಿತ ಉತ್ಪಾದನೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಳೆದ ಸಾಲಿಗಿಂತ (2016ಕ್ಕಿಂತ) ಕಡಿಮೆ ಇದೆ. ಉದಾಹರಣೆಗೆ ಮುಸುಕಿನಜೋಳದ ಉತ್ಪಾದನೆ ರಾಜ್ಯದಲ್ಲಿ ಶೇ.6ರಷ್ಟು, ತೊಗರಿ ಶೇ.42, ಹೆಸರು ಶೇ.20ರಷ್ಟು ಕಡಿಮೆ ಉತ್ಪಾದನೆಯಾಗಿದೆ. ಆದಾಗ್ಯೂ ಧಾರಣೆ ಕುಸಿದಿದೆ ಎಂದು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ಪನ್ನಗಳ ಧಾರಣೆ ಮತ್ತು ಖರೀದಿಯನ್ನು ಕಾನೂನಿನ ವ್ಯಾಪ್ತಿಗೆ ತರುವ ಅಗತ್ಯವಿದೆ. ಅದರಂತೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಖರೀದಿ ಮಾಡುವಂತಿಲ್ಲ ಎಂಬ ನಿಯಮ ಬರುತ್ತದೆ. ಆಗ ರೈತರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. 

ಎಫ್ಪಿಒ ಉತ್ಪನ್ನ ಮೇಲೆ ತೆರಿಗೆ ವಿನಾಯ್ತಿಗೆ ಒತ್ತಾಯ: ರೈತ ಉತ್ಪಾದಕರ ಸಂಘ (ಎಫ್ಪಿಒ)ಗಳು ತಯಾರಿಸುವ ಬ್ರ್ಯಾಂಡಿಂಗ್‌ ಉತ್ಪನ್ನಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ವಿನಾಯ್ತಿ ನೀಡುವಂತೆ ಜಿಎಸ್‌ಟಿ ಪರಿಷತ್ತಿಗೆ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗ ಸಿದ್ಧ ಇದೆ ಎಂದು ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ತಿಳಿಸಿದರು. ಕೃಷಿ ಇಲಾಖೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಕೃಷಿಯ ಮೇಲೆ ಜಿಎಸ್‌ಟಿ ಮತ್ತು ನೋಟು ಅಮಾನ್ಯಿàಕರಣ ಪರಿಣಾಮ’ ಕುರಿತು ಅಧಿಕಾರಿಗಳು, ತಜ್ಞರು ಹಾಗೂ ರೈತ ಮುಖಂಡರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಎಫ್ಪಿಒಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಆದರೆ, ಆ ಎಫ್ ಪಿಒಗಳ ಮೂಲಕ ಮಾರುಕಟ್ಟೆಗೆ ಬರುವ ಬ್ರ್ಯಾಂಡಿಂಗ್‌ ಉತ್ಪನ್ನಗಳಿಗೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದು ಒಂದು ರೀತಿ ಹಿನ್ನಡೆಗೆ ಕಾರಣವಾಗುತ್ತದೆ. ಅಲ್ಲದೆ, ಕೃಷಿ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದಂತಾಗುತ್ತದೆ ಎಂಬ ಒಕ್ಕೊರಲ ಅಭಿಪ್ರಾಯಗಳು ಸಂವಾದದಲ್ಲಿ ಕೇಳಿ ಬಂತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ಕಮ್ಮರಡಿ, ಎಫ್ಪಿಒ ಬ್ರ್ಯಾಂಡ್‌ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಜಿಎಸ್‌ಟಿ ಪರಿಷತ್ತಿಗೆ ಪ್ರಸ್ತಾವನೆ ಸಲ್ಲಿಸಲು ಆಯೋಗ ಸಿದ್ಧ. ಅಷ್ಟೇ ಅಲ್ಲ, ಕೃಷಿ ಯಂತ್ರೋಪಕರಣಗಳಿಗೂ ತೆರಿಗೆ ವಿನಾಯ್ತಿ ನೀಡುವಂತೆ ಕೋರಲಾಗುವುದು ಎಂದರು.
ಸಂವಾದದಲ್ಲಿ ಕೃಷಿ ಬೆಲೆ ಆಯೋಗದ ಸದಸ್ಯ ಹನುಮನಗೌಡ ಬೆಳಗುರ್ಕಿ, ಕೃಷಿ ಇಲಾಖೆ ಆಯುಕ್ತ ಜಿ. ಸತೀಶ್‌, ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು. 

ಯಾವ್ಯಾವ ಉತ್ಪನ್ನಗಳ ಆವಕ ಎಷ್ಟು ಹೆಚ್ಚಳ ಮತ್ತು ಅದರಿಂದ ಧಾರಣೆ ಮೇಲಾದ ಪರಿಣಾಮ
ಬೆಳೆಗಳು                  ಆವಕ ಹೆಚ್ಚಳ                              ದರ ಇಳಿಕೆ
                           (ಶೇಕಡಾವಾರು)                         (ಶೇಕಡಾವಾರು)
ತೊಗರಿ                      80                                            49
ದ್ವಿದಳ ಧಾನ್ಯ               25                                            30
ಸಾಂಬಾರು ಬೆಳೆ            7                                               13
ಒಟ್ಟು ಕೃಷಿ ಬೆಳೆಗಳು       21                                           13
ಎಣ್ಣೆಕಾಳುಗಳು              –                                             14
ಏಕದಳ ಧಾನ್ಯ              24                                           –

„ ನೋಟು ನಿಷೇಧ; ಉತ್ಪನ್ನಗಳ ಬೆಲೆ ಕುಸಿತ 
„ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ; ಬೆಲೆ ಆಯೋಗ
„ ಉತ್ಪಾದನೆ ಕಡಿಮೆ ಇದ್ದರೂ ಆವಕ ಹೆಚ್ಚು!

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.