ಅಂಬಿ ನಿವಾಸದದಲ್ಲಿ ನೀರವ ಮೌನ
Team Udayavani, Nov 28, 2018, 12:09 PM IST
ಬೆಂಗಳೂರು: ಆ ತಿಳಿಹಸಿರು ಬಣ್ಣದ ನಿವಾಸದ ಬಳಿ ಬರುತ್ತಿದ್ದಂತೆ ಹುಬ್ಬೇರಿಸುತ್ತಿದ್ದ ಸಾರ್ವಜನಿಕರು. ಹಿಂದೆಲ್ಲಾ ಹೀಗೆ ಕುತೂಹಲದಿಂದ ಅರೆಕ್ಷಣ ನಿಂತು ಇಣುಕು ನೋಡುವಾಗ ನೆಚ್ಚಿನ ನಟನನ್ನು ಅಪ್ಪಿತಪ್ಪಿ ಕಾಣುವ ಆಶಾಭಾವನೆ ಇರುತ್ತಿತ್ತು. ಆದರೆ ಮಂಗಳವಾರ ಬೀರುತ್ತಿದ್ದ ನೋಟದಲ್ಲಿ ಭರವಸೆಗಿಂತ ವಿಷಾದವಿತ್ತು.
ಇದು ಜಯನಗರದ ಮಾರೇನಹಳ್ಳಿ ಸಿಗ್ನಲ್ ಸಮೀಪದ ಆದರ್ಶ ಪ್ಯಾಲೇಸ್ ಪಕ್ಕದಲ್ಲಿರುವ ಹಿರಿಯ ನಟ ಅಂಬರೀಶ್ ಅವರ ನಿವಾಸದ ಬಳಿ ಮಂಗಳವಾರ ಕಂಡು ಬಂದ ದೃಶ್ಯ. ಹಿಂದೆಲ್ಲಾ ಮನೆಯ ಬಳಿ ಸಡಗರದ ವಾತಾವರಣವಿರುತ್ತಿತ್ತು. ಸಾಕು ನಾಯಿಗಳ ಗಾಂಭೀರ್ಯ ಓಡಾಟವು ಗಮನ ಸೆಳೆಯುತ್ತಿತ್ತು. ಆದರೆ, ಮಂಗಳವಾರ ಮುಂಜಾನೆ ಆ ಯಾವ ರೀತಿಯ ಸಹಜ ವಾತಾವರಣ ಕಾಣಲಿಲ್ಲ. ಮನೆಯ ಒಳಾಂಗಣ ಮಾತ್ರವಲ್ಲದೆ ಹೊರ ಆವರಣವೂ ಬೀಕೋ ಎನ್ನುತ್ತಿತ್ತು.
“ಮಂಡ್ಯದ ಗಂಡು’ ಅವರ ನಿವಾಸದ ಬಳಿ ನೀರವ ಮೌನ ಆವರಿಸಿತ್ತು. ಕೆಲ ಅಭಿಮಾನಿಗಳು ಮನೆಯ ಬಳಿ ನಿಂತು ದಿಕ್ಕುತೋಚದಂತೆ ಗದ್ಗದಿತರಾಗಿದ್ದರು. ಮನೆಯ ಪ್ರವೇಶ ದ್ವಾರದ ಬಳಿಯಿದ್ದ ಕಾವಲುಗಾರ, ಚಲೋ, ಬೈಯ್ನಾ ಚಲೋ ಎಂದು ಹಿಂದಿಯಲ್ಲಿ ಬಂದವರನ್ನು ಕಳುಹಿಸುತ್ತಿದ್ದ. ಮಂಡ್ಯ, ಮಳವಳ್ಳಿ, ಕನಕಪುರ ಭಾಗದ ಸಾಕಷ್ಟು ಅಭಿಮಾನಿಗಳು ಮನೆ ಬಳಿಯೇ ಜಮಾಯಿಸಿದ್ದರು.
ಶ್ವಾನಗಳ ಮೌನ: ಅಂಬರೀಶ್ ಅವರು ಇದ್ದಾಗ ಮನೆ ಮುಂಭಾಗದ ಗೇಟ್ ಸಮೀಪ ಕಟ್ಟಿ ಹಾಕಲಾಗಿದ್ದ “ಕನ್ವರ್’ ಮತ್ತು “ಬುಲ್ ಬುಲ್’ ಹೆಸರಿನ ನಾಯಿಗಳು ಸದ್ದು ಜೋರಾಗಿರುತ್ತಿತ್ತು. ಆದರೆ ಆ ಶ್ವಾನಗಳು ಎರಡು ದಿನದಿಂದ ಮಂಕಾಗಿವೆ. ಅಂಬರೀಶ್ ಅಣ್ಣಾ ಅವರು ನಿತ್ಯ ಆ ನಾಯಿಗಳನ್ನು ಮುದ್ದಿಸುತ್ತಿದ್ದರು. ಬೆಳಗ್ಗೆ 8 ಗಂಟೆಗೆ ಅವರೇ ಊಟ ಹಾಕುತ್ತಿದ್ದರು.
ಆದರೆ ಅಣ್ಣನನ್ನು ಕಾಣದೆ ಕನ್ವರ್ ಮತ್ತು ಬುಲ್ ಬುಲ್ ಮಂಕಾಗಿವೆ ಎಂದು ಮನೆಯ ಸಿಬ್ಬಂದಿಯೊಬ್ಬರು ತಿಳಿಸಿದರು. ಮನೆಯ ಸಿಬ್ಬಂದಿ ಎರಡೂ ಶ್ವಾನಗಳನ್ನು ರಸ್ತೆಯಲ್ಲಿ ನಡೆದಾಡಿಸುವಾಗ ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದರು. ಮಧ್ಯಾಹ್ನದ ವೇಳೆ ಪುತ್ರ ಅಭಿಷೇಕ್ ಅವರು ಶ್ವಾನಗಳನ್ನು ಮುದ್ದಿಸಿದ್ದು ಕಂಡುಬಂತು.
ಬೆಳಗುತ್ತಿರುವ ಅಮರಜ್ಯೋತಿ: ಜೆಪಿ ನಗರದಲ್ಲಿರುವ ಅಂಬರೀಶ್ ಅವರ ಹೊಸ ನಿವಾಸದಲ್ಲಿ ಇರಿಸಲಾಗಿದ್ದ ಕಲಿಯುಗದ ಕರ್ಣನ ಭಾವ ಚಿತ್ರದ ಮುಂದೆ ಜ್ಯೋತಿ ಬೆಳಗುತ್ತಿತ್ತು. ಸೋಮವಾರ ರಾತ್ರಿ ಜೆ.ಪಿ. ನಗರದ ನಿರ್ಮಾಣ ಹಂತದ ಹೊಸ ನಿವಾಸಕ್ಕೆ ಆಗಮಿಸಿದ್ದ ಅಂಬರೀಶ್ ಅವರ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಕುಟುಂಬದವರು ಅಂಬರೀಶ್ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ದೀಪ ಹಚ್ಚಿ ತೆರಳಿದ್ದರು. ಆ ದೀಪ ಮಂಗಳವಾರ ಬೆಳಗ್ಗೆಯೂ ಉರಿಯುತ್ತಿತ್ತು. ಹೀಗಾಗಿ, ಕೆಲ ಅಭಿಮಾನಿಗಳು ಈ ಭಾವಚಿತ್ರಕ್ಕೆ ಕೈ ಮುಗಿದು ಹೊರಬಂದರು.
ಅಣ್ಣನನ್ನು ನೋಡಲಾಗಲಿಲ್ಲ: ಅಂಬರೀಶ್ ಅಣ್ಣಾ ಎಂದರೆ ಪ್ರೀತಿ. ಅವರ ಬೈಗುಳವೆಂದರೆ ಖುಷಿ. ಮಂಡ್ಯದ ಮಣ್ಣಿನಲ್ಲಿ ಅಂತಹ ಗಂಡುಗಲಿ ಮತ್ತೆ ಹುಟ್ಟುವುದಿಲ್ಲ. ಒರಟಾಗಿ ಬೈದರೂ ಮಗುವಿನಂತ ಮನಸ್ಸು ಅವರದು. ಕೇಳಿದವರಿಗೆ ಸಹಾಯ ಮಾಡುತ್ತಿದ್ದರು. ಅವರು, ಇಲ್ಲದೆ ಅನಾಥ ಭಾವನೆ ಕಾಡುತ್ತಿದೆ. ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತ್ಯಕ್ರಿಯೆಗೆ ಹೋಗಲು ಆಗಲಿಲ್ಲ. ರಾತ್ರಿಯಿಡೀ ನಿದ್ರೆ ಬರಲಿಲ್ಲ.
ಹೀಗಾಗಿ ಅಣ್ಣ ವಾಸವಿದ್ದ ಮನೆಯನ್ನಾದರೂ ಕಣ್ತುಂಬಿಕೊಳ್ಳೋಣ ಎಂದು ಬಂದಿದ್ದೇನೆ ಎಂದು ಮಳವಳ್ಳಿಯಅಭಿಮಾನಿ ಸೋಮಣ್ಣ ಕಲ್ಲಾಪುರ ಕಣ್ಣೀರಿಟ್ಟರು. ಅಣ್ಣ ವಾಸಲಿದ್ದು ಮನೆ ನೋಡಿ ಈಗ ಸ್ವಲ್ಪ ನೆಮ್ಮದಿ ತಂದಿದೆ. ಕಂಠೀರವ ಸ್ಟುಡಿಯೋಗೆ ಹೋಗಿ ಅಲ್ಲಿಂದ ಊರಿನತ್ತ ಮುಖ ಮಾಡುವುದಾಗಿ ನುಡಿದರು. ತುಮಕೂರಿನಿಂದ ಬಂದಿದ್ದ ಅಭಿಮಾನಿಯೊಬ್ಬರು ಅಂಬರೀಶ್ ಅವರ ಪುತ್ರನ್ನು ನೋಡಲು ಇಲ್ಲಿಗೆ ಬಂದಿರುವೆ. ಆದರೆ, ಅವರು ಕಾಣಿಸುತ್ತಿಲ್ಲ ಎಂದು ದುಃಖೀತರಾದರು.
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.