ಸೈಲೆಂಟ್ ಸುನೀಲನ ಕಿವಿ ಹಿಂಡಿದ ಅಲೋಕ್
Team Udayavani, Apr 13, 2019, 3:00 AM IST
ಬೆಂಗಳೂರು: ಇವುಂದು ಏನಿದೆ ತೆಗೀರಿ… ಯಾರ್ಯಾರಿಗೆ ಥೆಟ್ ಮಾಡಿದಾನೆ ನೋಡಿ ಕೇಸ್ ಹಾಕಿ… ಸೊಕ್ಕಾ… ಈ ಕಡೆ ನೋಡೋ.. ಜಾಸ್ತಿ ಆಗಿದೆಯಾ…. ಕಣ್ ತೋರಿಸ್ತಿಯಾ… ಇವನಿಗೆ… ಲಾಕಪ್‌ಗೆ ಹಾಕಿ..
ಚಾಮರಾಜಪೇಟೆಯ ಸಿಸಿಬಿ ಕಚೇರಿ ಬಳಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲನಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಬೆಂಡೆತ್ತಿದ ಪರಿಯಿದು.
ಲೋಕಸಭೆ ಚುನಾವಣೆಯ ಶಾಂತಿಯುತ ಮತದಾನ ನಡೆಸುವ ಉದ್ದೇಶದಿಂದ ನಗರದ ರೌಡಿಶೀಟರ್‌ಗಳ ಎಚ್ಚರಿಗೆ ನೀಡುವ ಸಲುವಾಗಿ ನಡೆದ ಪರೇಡ್‌ನಲ್ಲಿ ನಗರದ 400ಕ್ಕೂ ಹೆಚ್ಚು ರೌಡಿಗಳು ಪಾಲ್ಗೊಂಡಿದ್ದರು. ಈ ವೇಳೆ ಸೈಲೆಂಟ್ ಸುನೀಲ ನೋಡುತ್ತಿದ್ದ ಪರಿಗೆ ಕೆಂಡಾಮಂಡಲರಾದ ಅಲೋಕ್, ಏನೋ ಹಾಗೆ ನೋಡ್ತೀಯಾ…
ಎನ್ನುತ್ತಾ ಸುನೀಲನ ಕಿವಿ ಹಿಂಡಿದರು. ಇವನಿಗೆ ಸೊಕ್ಕು ಜಾಸ್ತಿ ಆಗಿದೆ. ಲಾಕಪ್‌ಗೆ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಸುನೀಲ, ಕುಣಿಗಲ್ ಗಿರಿ, ಮಾರನಹಳ್ಳಿ ಜಗ್ಗನನ್ನು ವಶಕ್ಕೆ ಪಡೆದರು.
ಇದಕ್ಕೂ ಮುನ್ನ, ಅಲೋಕ್ ಕುಮಾರ್ ಅವರು, ಡಿಸಿಪಿ ಗಿರೀಶ್ ಹಾಗೂ ರೌಡಿ ನಿಗ್ರಹ ದಳದ ಎಸಿಪಿ ಬಾಲರಾಜ್ ಅವರೊಂದಿಗೆ, 400 ರೌಡಿಗಳ ವಿಚಾರಣೆ ನಡೆಸಿದರು. ಪ್ರಮುಖವಾಗಿ ರಾಬರಿ ಗಿರಿ, ಡಬಲ್ ಮೀಟರ್ ಮೋಹನ್, ಸೈಲೆಂಟ್ ಸುನೀಲ,
ಮಾರ್ಕೆಟ್ ವೇಡಿ, ಡಾಬರ್ ಮೂರ್ತಿ, ಕುಣಿಗಲ್ ಗಿರಿ, ಕೆ.ಆರ್.ಪುರ ರಮೇಶ್ ಮತ್ತು ಮಾರನಹಳ್ಳಿ ಜಗ್ಗ ಸೇರಿದಂತೆ ಇನ್ನಿತರ ಪ್ರಮುಖ ರೌಡಿಶೀಟರ್‌ಗಳಿಗೆ ಯಾವುದೇ ಪಕ್ಷದ ಜತೆ ಅಥವಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದನ್ನು ಸಹಿಸುವುದಿಲ್ಲ.
ರಾಜಕಾರಣಿಗಳಿಂದ ಹಣ ಪಡೆದು, ಮತ ಚಲಾಯಿಸುವಂತೆ ಜನರಿಗೆ ಬೆದರಿಸುವುದು, ಧಮ್ಕಿ ಹಾಕುವುದು ಗಮನಕ್ಕೆ ಬಂದರೆ ಬೇರೆ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ರೌಡಿಶೀಟರ್‌ಗಳ ಜೇಬುಗಳನ್ನು ಚೆಕ್ ಮಾಡಿದ ಅಧಿಕಾರಿಗಳು, “ಉದ್ದುದ್ದ ಕುಂಕುಮ ಇಟ್ಟು, ಕೂದಲು ಬಿಟ್ಟುಕೊಂಡು ರಾಕ್ಷಸರಂತೆ ವರ್ತಿಸುವುದನ್ನು ಬಿಟ್ಟು ಬಿಡಿ. ಮುಂದಿನ ಸಲ ಇದೇ ಅವತಾರಗಳಲ್ಲಿ ನಮ್ಮ ಕಣ್ಣಿಗೆ ಬಿದ್ದರೆ ಕ್ರಮ ಜರುಗಿಸುತ್ತೇವೆ. ಸಮಾಜದಲ್ಲಿ ಕಾಡು ಪ್ರಾಣಿಗಳಂತೆ ಇರುವುದನ್ನು ಬಿಟ್ಟು, ಹೆಂಡತಿ ಮಕ್ಕಳ ಜತೆ ಮನುಷ್ಯರಂತೆ ಶಿಸ್ತಿನ ಜೀವನ ನಡೆಸಿ ಎಂದು ಹೇಳಿದರು.
ಚುನಾವಣೆ ಸಂಧರ್ಭಧಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗದ ಮೇರೆಗೆ ರೌಡಿಗಳ ಪರೇಡ್ ಮಾಡಿ ಎಚ್ಚರಿಕೆ ನೀಡಿದ್ದೇವೆ.ಪ್ರಮುಖ 25 ಜನ ರೌಡಿಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.
-ಅಲೋಕ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.