ಎಚ್‌ಡಿಕೆ, ಡಿಕೆಶಿ, ಅಶೋಕ್ ಯಾರಾದ್ರೂ ಸಿಎಂ ಆಗಿ
Team Udayavani, Sep 3, 2017, 6:15 AM IST
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್,ಆರ್.ಅಶೋಕ್ ಯಾರಾ ದರೂ ಮುಖ್ಯ ಮಂತ್ರಿ ಆಗಲಿ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಮೂಲಕ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಪರೋಕ್ಷ ಸಂದೇಶ ರವಾನಿ ಸಿದ್ದಾರೆ.
ಜತೆಗೆ,ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ನಿಮ್ಮನ್ನೆಲ್ಲ ಬಿಡುತ್ತಾರೆಂದು ತಿಳಿದುಕೊಳ್ಳಬೇಡಿ. ನಾನು ಅನುಭವಿಸಿದ್ದನ್ನು ಹೇಳುತ್ತಿದ್ದೇನೆ.ನಾವು ಎರಡನೇ ದರ್ಜೆಯಲ್ಲಿದ್ದೇವೆ.ಮೊದಲ ದರ್ಜೆಗೆ ಹೋಗೋಕೆ ನಮ್ಮನ್ನು ಬಿಡುವುದಿಲ್ಲ,ಆದರೆ, ಪ್ರಯತ್ನ ಬಿಡಬಾರದು ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಕೃಷಿಕ್ ಸರ್ವೋದಯ ಫೌಂಡೇಶನ್ ನಗರದ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಎಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಆರ್.ಅಶೋಕ್ ಯಾರಾದರೂ ಮುಖ್ಯಮಂತ್ರಿಯಾಗಲಿ. ಅವರವರ ಹಣೆಬರಹ ಹೇಗಿದೆಯೋ ಹಾಗೆ ಆಗಲಿ ಎಂದರು. ಆಗ ವೇದಿಕೆಯಲ್ಲಿದ್ದ ಸಚಿವ ಶಿವಕುಮಾರ್ ಕೈ ಜೋಡಿಸಿ ನಮಸ್ಕರಿಸುತ್ತಾ ಮುಗುಳ್ನಕ್ಕರು.
ಇದೇ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ಸನ್ಮಾನಿ ಸುವಾಗಹಾರ ಹಾಕಿದ ಶಿವಕುಮಾರ್ ಅವರು ಗೌಡರ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷ.
ನಂತರ ತಮ್ಮ ಭಾಷಣದಲ್ಲಿ ದೇವೇಗೌಡರನ್ನು ಹೊಗಳಿದ ಡಿ.ಕೆ.ಶಿವಕುಮಾರ್,ದೇವೇಗೌಡರು ಸಾಧನೆ ಮಾಡಿ ಪ್ರಧಾನಿ ಸ್ಥಾನ ಪಡೆದರು. ಇದು ಅಷ್ಟು ಸುಲಭದ ಅಲ್ಲ.ಅವರು ಅಷ್ಟು ದೊಡ್ಡ ಸ್ಥಾನ ಅಲಂಕರಿಸಲು ಎಷ್ಟು ಉಳಿ ಏಟು ತಿಂದಿರ ಬಹುದು, ಎಷ್ಟೆಲ್ಲಾ ತೊಂದರೆ ಎದುರಿಸಿದ್ದಾರೋ ಅವರಿಗೇ ಗೊತ್ತು, 50 ವರ್ಷದ ರಾಜ ಕಾರಣದಲ್ಲಿ ಎಷ್ಟೆಲ್ಲಾ ಸಮಸ್ಯೆ ಅನುಭವಿಸಿರಬೇಕು ಎಂದು ಹೇಳಿದರು.
ನಾನು ಮೂವತ್ತು ವರ್ಷಗಳಿಂದ ರಾಜ ಕಾರಣ ಮಾಡುತ್ತಿದ್ದೇನೆ. ನನಗೂ ಎಲ್ಲ ರೀತಿ ಪೆಟ್ಟು ಬಿದ್ದಿವೆ. ಉಳಿ ಏಟು, ಅಗರಿ ಏಟು ಬಿದ್ದಿವೆ. ನಾನಾಗಿರೋದಕ್ಕೆ ಏಟು ತಿಂದ್ರೂ ಇಲ್ಲಿ ನಿಂತಿದ್ದೇನೆ. ಬೇರೆ ಯವರಾಗಿದ್ದರೆ ಏನಾಗುತ್ತಿತ್ತು. ದೇವೇ ಗೌಡರು ಮಾರ್ಮಿಕವಾಗಿ ಮಾತನಾಡಿದರು, ಇದರ ಬಗ್ಗೆ ನಾನು ಮಾತಾಡಿದ್ರೆ ಬೆಳಗ್ಗೆಯೇ ದೊಡ್ಡ ಸುದ್ದಿ ಆಗುತ್ತದೆ. ನನ್ನ ಕಷ್ಟದಲ್ಲಿ ಎಲ್ಲರೂ ನಿಂತಿದ್ದೀರಿ ಎಲ್ಲರಿಗೂ ಧನ್ಯವಾದಗಳು ಎಂದು ದೇವೇಗೌಡರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಸತಿ ಎಂ.ಕೃಷ್ಣಪ್ಪ , ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಿವೃತ್ತ ಉಪಲೋಕಾಯುಕ್ತ ನ್ಯಾ. ಚಂದ್ರಶೇಖರಯ್ಯ, ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ಫೌಂಡೇಷನ್ ಅಧ್ಯಕ್ಷ ಡಾ.ವೈ.ಕೆ.ಪುಟ್ಟಸೋಮೇಗೌಡ, ಕಾರ್ಯದರ್ಶಿ ಎನ್.ಸಂಪಂಗಿ ಇತರರು ಉಪಸ್ಥಿತರಿದ್ದರು.
ಜೀವನದ ಕೊನೆಯ ದಿನಗಳಲ್ಲಿ ಒಕ್ಕಲಿಗ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸುತ್ತಿದ್ದೇನೆ. ಕಾವೇರಿ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿನ ಎರಡೂವರೆ ಕೋಟಿ ಜನರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.
-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.