ರಾವಣ ದಹನಕ್ಕೆ ರಾಮ ನಕಾರ
Team Udayavani, Oct 3, 2017, 6:40 AM IST
ಜೈಪುರ: ದೇವರ ಮೇಲಿನ ಹೂವು ತಪ್ಪಬಹುದು. ಆದರೆ ಉತ್ತರ ಭಾರತದಲ್ಲಿ ದಸರಾ ವೇಳೆ ರಾಮಲೀಲಾ ಪ್ರದರ್ಶನ ಮಾತ್ರ ತಪ್ಪುವುದಿಲ್ಲ. ಶ್ರೀರಾಮಚಂದ್ರ, ರಾವಣನನ್ನು ಸಂಹರಿಸಿದ ಕತೆ ಕಟ್ಟಿಕೊಡುವುದೇ ರಾಮಲೀಲಾ. ಆದರೆ ಈ ರಾಮಲೀಲಾ ವೇದಿಕೆ ರಾಜಕೀಯ ಜಿದ್ದಿನ ಕಣವಾಗಿ ಮಾರ್ಪಟ್ಟರೆ ಹೇಗಿರುತ್ತೆ?
ಹೌದು. ರಾಜಸ್ಥಾನದ ಸಿರೋಹಿ ಪಟ್ಟಣ ಪಂಚಾಯಿತಿ ರಾಮಲೀಲಾ ಆಯೋಜಿಸಿತ್ತು. ಅಲ್ಲಿ ಕೆಲ ರಾಜಕೀಯ ಮುಖಂಡರೂ ಪಾತ್ರಧಾರಿಗಳಾಗಿದ್ದರು. ಆದರೆ ಸಲೀಸಾಗಿ ನಡೆಯುತ್ತಿದ್ದ ನಾಟಕಕ್ಕೆ ಕೊನೇ ಹಂತದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಟ್ವಿಸ್ಟ್ ಸಿಕ್ಕು ಬಿಡೋದೇ! ಶ್ರೀರಾಮಚಂದ್ರ ವೇಷಧಾರಿ ಮಹಾನುಭಾವ, “ನಾನು ರಾವಣನನ್ನು ಕೊಲ್ಲೋದಿಲ್ಲ,’ ಎಂದದ್ದೇ ಆ ಟ್ವಿಸ್ಟ್! ರಾಜಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಐತಿಹಾಸಿಕ ರಾಮಲೀಲಾ ಪ್ರದರ್ಶನಗಳಲ್ಲಿ ಇಂಥ ಟ್ವಿಸ್ಟ್ ಎಂದೂ ಸಿಕ್ಕಿರಲಿಕ್ಕಿಲ್ಲ.
ಆಗಿದ್ದೇನೆಂದರೆ, ಮನೋಜ್ ಕುಮಾರ್ ಮಾಲಿ ಎಂಬಾತ ರಾಮನ ಪಾತ್ರದಲ್ಲಿದ್ದ. ನಾಟಕದ ಕೊನೆಗೆ ಆತ ದುಷ್ಟ ರಾವಣನ ಗೊಂಬೆಗೆ ಬಾಣ ಹೊಡೆದು ಸುಡಬೇಕಿತ್ತು. ಆದರೆ ಬಾಣ ಬಿಡಲು ನಿರಾಕರಿಸಿದ ಆತ, ವೇದಿಕೆ ಮೇಲಿದ್ದ ಸಿರೋಹಿ ಪಟ್ಟಣದ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಸಾಗರ್‌ವನ್ಶಿಯತ್ತ ನೋಡುತ್ತಾ, “ಅಸಲಿ ರಾವಣ ಇಲ್ಲೇ ವೇದಿಕೆ ಮೇಲೆ ಕುಳಿತಿದ್ದಾನೆ. ರಾಮಲೀಲಾ ಆಯೋಜನೆಯಲ್ಲೂ ಈತ ರಾಜಕೀಯ ಮಾಡುತ್ತಾನೆ. 20 ಗರ್ಬಾ ಸಮಿತಿಗಳ ಪೈಕಿ 19ಕ್ಕೆ ತಲಾ 11 ಸಾವಿರ ಅನುದಾನ ಸಿಕ್ಕೆರೆ, ಸುರೇಶನ ತಂಡಕ್ಕೆ 31 ಸಾವಿರ ಸಿಗುತ್ತಿದೆ. ಇಂಥ ಅನ್ಯಾಯ ಸಹಿಸಲು ಸಾಧ್ಯವಿಲ್ಲ,’ ಎಂದು ತನ್ನ ಕಪಿ ಸೇನೆ ಜತೆ ವೇದಿಕೆ ಇಳಿದು ಹೋಗೇಬಿಟ್ಟ. ಆಯೋಜಕರು ಕಡೆಗೆ ಅಲ್ಲೇ ಇದ್ದ ಬಾಲಕನಿಗೆ ರಾಮನ ವೇಷ ಹಾಕಿ, ರಾವಣನನ್ನು ಸುಡಿಸಿ ಶಾಸ್ತ್ರ ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.