Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!
ಮನೆಯಲ್ಲಿ ನಿತ್ಯ ಅಶ್ಲೀಲ ವಿಡಿಯೋ ನೋಡುತ್ತಿದ್ದರು
Team Udayavani, May 22, 2024, 11:16 AM IST
ಬೆಂಗಳೂರು: ಇತ್ತೀಚೆಗೆ ಮುಂಬೈನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ತಮ್ಮನಿಂದಲೇ ಸಹೋದರಿ ಗರ್ಭಿಣಿಯಾಗಿದ್ದ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅಂತಹದ್ದೇ ಘಟನೆ ಯೊಂದು ಬೆಂಗಳೂರಿ ನಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತ ಅಣ್ಣನಿಂದ ಸಹೋ ದರಿ ಮೂರು ತಿಂಗಳ ಗರ್ಭಿಣಿಯಾಗಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಅಪ್ರಾಪ್ತನನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
ಅಪ್ರಾಪ್ತ ಹಾಗೂ ಸಂತ್ರಸ್ತೆ ಅವಳಿ ಸಹೋದರ- ಸಹೋದರಿ ಯಾಗಿದ್ದಾರೆ. ಬಾಗಲ ಗುಂಟೆಯಲ್ಲಿ ಪೋಷಕರೊಂದಿಗೆ ವಾಸವಿದ್ದರು. ಮನೆಯಲ್ಲಿ ಪೋಷಕರು ಇಲ್ಲದಿರುವಾಗ ಇಬ್ಬರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಹೇಳಲಾಗಿದೆ.
ಅದರಿಂದ ಪ್ರಚೋದನೆಗೊಂಡು ಇಬ್ಬರೂ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಅದರಿಂದಾಗಿ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಬಾಲಕಿ ಯಲ್ಲಿ ದೈಹಿಕ ಬದ ಲಾವಣೆ ಕಂಡು ಬಂದಾಗ ಪೋಷ ಕರು ಆಕೆ ಯನ್ನು ಖಾಸಗಿ ಅಸ್ಪತ್ರೆಗೆ ಕರೆ ದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬಾಲಕಿ ಮೂರು ತಿಂಗಳು ಗರ್ಭಿಣಿಯಾಗಿ ರುವುದು ತಿಳಿದು ಬಂದಿದೆ. ತಕ್ಷಣ ವೈದ್ಯರು, ಬಾಗಲಗುಂಟೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂತ್ರಸ್ತೆ ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಸಂತ್ರಸ್ತೆಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.