ಕುಳಿತಲ್ಲೇ ವಿದ್ಯುತ್ ಬಿಲ್ ಕಟ್ಟಿ
Team Udayavani, Dec 21, 2017, 11:07 AM IST
ಬೆಂಗಳೂರು: ಬೆಸ್ಕಾಂ ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದರಿಂದ ವಿದ್ಯುತ್ ಬಳಕೆ ವಿವರ, ಇತರೆ ಮಾಹಿತಿ ಪಡೆಯುವ ಜತೆಗೆ ಕುಳಿತಲ್ಲೇ ಆನ್‌ಲೈನ್ ಬಿಲ್ ಪಾವತಿ, ದೂರು ಸಲ್ಲಿಕೆ ಸೌಲಭ್ಯವುಳ್ಳ ಸೇವೆಗೆ ಚಾಲನೆ ದೊರಕಿದೆ.
ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಹಾಗೂ ಐಒಎಸ್ ಮೊಬೈಲ್ ಬಳಕೆದಾರರು ಆ್ಯಪ್ ಸ್ಟೋರ್‌ನಲ್ಲಿ “ಬೆಸ್ಕಾಂ ಮಿತ್ರ’ ಆ್ಯಪ್ ಡೌನ್‌ಲೋಡ್ ಮಾಡಿ ಕೊಳ್ಳಬೇಕು. ನಂತರ ಮೊಬೈಲ್ ಸಂಖ್ಯೆ ನಮೂದಿಸಿದಾಗ ಪಡೆಯುವ ಒಟಿಪಿ ನಮೂದಿಸಿ ನೋಂದಣಿಯಾಗಬೇಕು. ಬಳಿಕ ವಿದ್ಯುತ್ ಬಿಲ್‌ನಲ್ಲಿ ನಮೂದಾದ ಅಕೌಂಟ್ ಐಡಿ ನಮೂದಿಸಿದರೆ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ನಂತರ ಆ್ಯಪ್ ಸೇವೆ ಬಳಸಬಹುದು.
ಸಂದೇಶ ರವಾನೆ:“ಬೆಸ್ಕಾಂ ಮಿತ್ರ’ ಮೊಬೈಲ್ ಆ್ಯಪ್‌ನಲ್ಲಿ ಗ್ರಾಹಕರಿಗೆ ಅಗತ್ಯವಾದ ಸೇವೆಗಳನ್ನು ಕಲ್ಪಿಸಲಾಗಿದೆ. ಮುಖ್ಯವಾಗಿ ವಿದ್ಯುತ್ ಬಳಕೆ ಬಿಲ್ ವಿವರ ಸಿಗಲಿದೆ. ಬಿಲ್ ಪಾವತಿ ಗಡುವು ದಿನ ಸಮೀಪಿಸುತ್ತಿದ್ದಂತೆ ಅಲರ್ಟ್ ಸಂದೇಶ ಕೂಡ ರವಾನೆ ಯಾಗಲಿದೆ. ಆನ್‌ಲೈನ್‌ನಲ್ಲೇ ಬಿಲ್ ಪಾವತಿ ಅವಕಾಶ ವಿರಲಿದೆ ಎಂದು ಬೆಸ್ಕಾಂ ಡಿಜಿಎಂ (ಟೆಕ್ನಿಕಲ್ ಇನ್ನೋವೇಷನ್ ಸೆಂಟರ್) ಅನಿಲ್ ಡಿಸೋಜಾ ತಿಳಿಸಿದರು.
ವಿದ್ಯುತ್ ಬಳಕೆ ವಿವರ: ಮೊಬೈಲ್ ಆ್ಯಪ್ ನಲ್ಲಿ 12 ತಿಂಗಳ ವಿದ್ಯುತ್ ಬಳಕೆ ವಿವರ, ಬಿಲ್ ವಿವರ ಲಭ್ಯವಿರಲಿದೆ. ತುರ್ತು
ನಿರ್ವಹಣೆಗಾಗಿ ವಿದ್ಯುತ್ ವ್ಯತ್ಯಯ ಮಾಹಿತಿಯೂ ಸಿಗಲಿದೆ. ಪವರ್ ಕ್ಯಾಲ್ಕುಲೇಟರ್ ನಲ್ಲಿ ಆಯ್ದ ಉಪಕರಣದ ವಿದ್ಯುತ್ ಬಳಕೆ ವಿವರವೂ ಗೊತ್ತಾಗಲಿದೆ. ದೂರು ಸಲ್ಲಿಕೆಗೂ ಅವಕಾಶವಿದೆ. ಜಿಪಿಎಸ್ ಲೋಕೇಷನ್ ವ್ಯವಸೆ ಇದ್ದು, ಇದರಿಂದ ಸಮಸ್ಯೆ ತಲೆದೋರಿದ ಸ್ಥಳವನ್ನು ನಿಖರವಾಗಿ ಪತ್ತೆ ಹಚ್ಚಲು ಅನುಕೂಲವಾಗಲಿದೆ. ಬೆಸ್ಕಾಂ ನಿಂದ ನಿಯಮಿತ ಸಂದೇಶ, ಮಾಹಿತಿಯೂ ರವಾನೆಯಾಗಲಿದೆ. ಒಟ್ಟಾರೆ ಗ್ರಾಹಕರ ಅಗತ್ಯಗಳನ್ನು ಗಮನ ದಲ್ಲಿಟ್ಟು ಕೊಂಡು ಆ್ಯಪ್ ರೂಪುಗೊಂಡಿದೆ ಎಂದು ಹೇಳಿದರು.
ನಗರದಲ್ಲಿ ಬುಧವಾರ ನಡೆದ “ಬೆಸ್ಕಾಂ ಮಿತ್ರ’ ಮೊಬೈಲ್ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇಂಧನ
ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಾನಾ ಸೇವೆಗಳಿಗೆ ಸಂಬಂಧ ಪಟ್ಟಂತೆ ಮೊಬೈಲ್ ಆ್ಯಪ್‌ಗ್ಳಿದ್ದು, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿಲ್ಲ. ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ರೂಪಿಸಿರುವ ಮೊಬೈಲ್ ಆ್ಯಪ್‌ಅನ್ನು ಗ್ರಾಹಕರು ಡೌನ್‌ಲೋಡ್ ಮಾಡಿಕೊಂಡು ಬಳಸಬೇಕು. ಆ್ಯಪ್ ಸೇವೆಯಿಂದ ಗ್ರಾಹಕರು ಕಚೇರಿ ಗಳಿಗೆ ಅಲೆದಾಡುವುದು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, “ದೇಶದಲ್ಲಿಂದು ಆನ್‌ಲೈನ್ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಬೆಸ್ಕಾಂ ಆ್ಯಪ್ ಅಭಿವೃದ್ಧಿಪಡಿಸಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಅಧಿಕಾರಿಗಳು ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೌಲಭ್ಯ ಕಲ್ಪಿಸಲು ಸಹಕಾರ ನೀಡಬೇಕು. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲ ಸಮಸ್ಯೆಗಳಿದ್ದು, ಪರಿಹರಿಸಲು ಗಮನ ಹರಿಸಬೇಕು. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾದರೆ ಕೈಗಾರಿಕೆಗಳಿಗೆ ವಿದ್ಯುತ್ ದರ ಇಳಿಕೆ ಬಗ್ಗೆಯೂ ಚಿಂತಿಸಬೇಕು ಎಂದು ಮನವಿ ಮಾಡಿದರು.
ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.