ವೇಶ್ಯಾವಾಟಿಕೆಗೆ ಜಾಲತಾಣದಲ್ಲಿದ್ದ ಯುವತಿಯ ಫೋಟೋಗಳ ಬಳಕೆ: ಆರು ಮಂದಿ ಬಂಧನ
Team Udayavani, Jan 17, 2023, 12:11 PM IST
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ ಹಾಗೂ ಇತರೆ ತಾಣಗಳಲ್ಲಿ ದೊರೆಯುವ ಯುವತಿಯ ಫೋಟೋಗಳನ್ನು ಕದ್ದು ಲೊಕ್ಯಾಂಟೋ ಎಂಬ ಡೇಟಿಂಗ್ ವೆಬ್ ಸೈಟ್ನಲ್ಲಿ ನಕಲಿ ಪ್ರೊಫೈಲ್ ಸಿದ್ಧಪಡಿಸಿ ಗ್ರಾಹಕರಿಗೆ ವಂಚಿಸಿ, ಅಕ್ರಮವಾಗಿ ಹಣ ಗಳಿಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಸಂಜು, ಮಲ್ಲಿಕಾರ್ಜುನಯ್ಯ, ಮಂಜುನಾಥ್ ಅಲಿಯಾಸ್ ಬುಳ್ಳೆ , ಮೋಹನ್, ಹನುಮೇಶ್ ಮತ್ತು ರಾಜೇಶ್ ಅಲಿಯಾಸ್ ಕೋತಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದಾರೆ. ಫೇಸ್ಬುಕ್, ಟ್ವಿಟರ್ ಹಾಗೂ ಇತರೆಡೆ ಸಿಗುವ ಯುವತಿಯ ಫೋಟೋಗಳನ್ನು ಲೊಕ್ಯಾಂಟೋ ವೆಬ್ಸೈಟ್ ನಲ್ಲಿ ಹಾಕಿ, ಅವರ ಹೆಸರಿನಲ್ಲಿ ಪ್ರೊಫೈಲ್ ಸಿದ್ಧಪಡಿಸುತ್ತಿದ್ದರು. ಅದನ್ನು ಕೆಲ ನಿರ್ದಿಷ್ಟ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಅಲ್ಲದೆ, ವೆಬ್ ಸೈಟ್ ಅಥವಾ ಆ್ಯಪ್ನಲ್ಲಿ ಯುವತಿಯರ ಪೋಟೋ ಕಂಡ ಗ್ರಾಹಕರು ಮುಂಗಡವಾಗಿ ಆ ಯುವತಿಯನ್ನು ಬುಕ್ ಮಾಡಿಕೊಳ್ಳಲು ಅಡ್ವಾನ್ಸ್ ಹಣ ವರ್ಗಾವಣೆ ಮಾಡುತ್ತಿದ್ದರು. ಮಾತುಕತೆಯಂತೆ ಗೊತ್ತುಪಡಿಸಿದ ಯುವತಿಯರನ್ನು ಕಳುಹಿಸದೇ ಬೇರೆ ಯುವತಿಯರನ್ನು ಕಳುಹಿಸುತ್ತಿದ್ದರು. ಮತ್ತೂಂದೆಡೆ ಹಣ ವರ್ಗಾ ವಣೆ ಆಗುತ್ತಿದ್ದಂತೆ ಆ ಪ್ರೊಫೈಲ್ ಡಿಲೀಟ್ ಮಾಡುತ್ತಿದ್ದರು. ಅದನ್ನು ಗ್ರಾಹಕರು ಪ್ರಶ್ನಿದರೆ ಬೆದರಿಕೆ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿ ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ: ವೇಶ್ಯಾವಾಟಿಕೆ ಜಾಲದಲ್ಲಿ ಹಲವು ವರ್ಷಗಳಿಂದ ತೊಡಗಿಸಿ ಕೊಂಡಿರುವ ಆರೋಪಿಗಳು ಮಹಿಳೆಯರ ನಕಲಿ ಪೊ›ಫೈಲ್ ಸೃಷ್ಟಿಸುವುದು, ಸರ್ವೀಸ್ ನೀಡುವುದಕ್ಕೆ ಪ್ರತ್ಯೇಕ ತಂಡ ರಚಿಸಿ ಸಂಘಟಿ ತವಾಗಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಇತ್ತೀಚೆಗೆ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದಾಗ, ಈ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.