ಗುಣಮಟ್ಟ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ
Team Udayavani, Jun 15, 2017, 11:32 AM IST
ವಿಧಾನಸಭೆ: ರಾಜ್ಯದ ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಧಾರವಾಡದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಅಕಾಡೆಮಿ ಸ್ಥಾಪಿಸಲಾಗಿದ್ದು,ಬೋಧಕರಿಗೆ ಅಗತ್ಯ ತರಬೇತಿ ನೀಡುವ ಜತೆಗೆ ಕೌಶಲ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಜೆ.ಆರ್. ಲೋಬೋ ಪ್ರಶ್ನೆಗೆ ಉತ್ತರಿಸಿದ ಅವರು, ಪಠ್ಯಕ್ರಮ, ಸಂಶೋಧನೆ, ಶಿಕ್ಷಣ, ನಾವಿನ್ಯ ಇನ್ನಿತರ ವಿಷಯಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾಲಯಗಳು ಇಂಗ್ಲೆಂಡ್ ನ ಬೋಲ್ಟನ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಜೊತೆಗೆ ಸರ್ಕಾರದ ವತಿಯಿಂದಲೂ ಅಧ್ಯಾಪಕರಿಗೆ ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣ, ಸಂಶೋಧನಾ ಯೋಜನೆಗಳಿಗೆ ಪ್ರಾಶಸ್ತ್ಯ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ 8 ವಿಶ್ವವಿದ್ಯಾ ಲಯಗಳು ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳು ಕೇಂದ್ರ ಮಾನವ ಸಂಪನ್ಮೂಲ ಮಂತ್ರಾ ಲಯದಿಂದ ರಾಷ್ಟ್ರೀಯ ಗುಣ ಮಟ್ಟದ ರ್‍ಯಾಂಕಿಂಗ್ ಪಡೆದಿವೆ. ಆ ಪೈಕಿ ಇಂಡಿಯನ್ ಇನ್ಸ್‌ಟಿ ಟ್ಯೂಟ್ ಆಫ್ ಸೈನ್ಸ್, ಮಣಿ ಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮೈಸೂರು ವಿಶ್ವವಿದ್ಯಾಲಯ, ಸುರತ್ಕಲ್‌ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರಿನ ಜಗದ್ಗುರು ಶಿವರಾತ್ರೀಶ್ವರ ವಿಶ್ವ ವಿದ್ಯಾಲಯ, ಬೆಳಗಾವಿಯ ಕೆಎಲ್‌ಇ ಅಕಾ ಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ಸೇರಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಲೋಬೋ, ನಮ್ಮಲ್ಲಿ ಸಾಕಷ್ಟು ಮೂಲಸೌಕರ್ಯ ಮತ್ತು ಸಮರ್ಪಕ ವ್ಯವಸ್ಥೆ ಇದರೂ ನಮ್ಮ ವಿಶ್ವವಿದ್ಯಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ರ್‍ಯಾಂಕಿಂಗ್ ಪಡೆಯುತ್ತಿಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶೇ.50 ವೇತನ ಬಿಡುಗಡೆಗೆ ಕ್ರಮ
ವಿಧಾನ ಪರಿಷತ್ತು: ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 2013 ನೇ ಸಾಲಿನಲ್ಲಿ ನೇಮಕಗೊಂಡ 1763 ಉಪನ್ಯಾಸಕರ ಪೈಕಿ ನಿಯಮಾನುಸಾರ ಬಿ.ಇಡಿ ಕೋರ್ಸ್‌ಗೆ ಸೇರಿಕೊಂಡವರಿಗೆ ಶೇ.50 ರಷ್ಟು ವೇತನ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಚಿವ ತನ್ವೀರ್ ಸೇs… ಭರವಸೆ ನೀಡಿದರು. ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 2013ರಲ್ಲಿ ನೇಮಕಾತಿ ಸಂದರ್ಭದಲ್ಲೇ ಬಿಇಡಿ ಪದವಿ ಪಡೆದಿಲ್ಲದ 733 ಉಪನ್ಯಾಸಕರಿಂದ ನಾಲ್ಕು ವರ್ಷದೊಳಗೆ ಪದವಿ ಪಡೆಯಬೇಕು ಎಂದು ಮುಚ್ಚಳಿಕೆ ಪಡೆಯಲಾಗಿತ್ತು. ಅದರಂತೆ ಶೇ.50ರಷ್ಟು ವೇತನ ನೀಡಲಾಗುವುದು ಎಂದು ಹೇಳಿದರು. ಪಿಯು ಉಪನ್ಯಾಸಕ ಹುದ್ದೆಗೆ 2008ರಲ್ಲಿ ಬಿ.ಇಡಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು.
2009ನೇ ಸಾಲಿನಲ್ಲಿ ನೇಮಕಗೊಂಡವರಿಗೆ ಒಂದು ಬಾರಿಗೆ ವಿನಾಯ್ತಿ ನೀಡಿ ಬಳಿಕ ಕಡ್ಡಾಯವಾಗಿ ಬಿ.ಇಡಿ ಪದವಿ ಪಡೆಯಲು ಸೂಚಿಸಲಾಗಿತ್ತು. ಹಾಗಾಗಿ 2013ರಲ್ಲಿ ನೇಮಕಗೊಂಡವರಿಗೆ ಈ ಹಿಂದೆ ನೀಡಿದಂತೆ ಪೂರ್ಣ ವೇತನ ಕೊಡಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.