ಐದು ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ
Team Udayavani, Jun 14, 2017, 12:43 PM IST
ವಿಧಾನಸಭೆ: ರಾಜ್ಯದಲ್ಲಿ ಕೈಗಾರಿಕೆಗಳು ಸೇರಿದಂತೆ ಉದ್ಯಮದಾರರ ಬೇಡಿಕೆಗೆ ತಕ್ಕಂತೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಒದಗಿಸಲು ಪ್ರಸಕ್ತ ವರ್ಷ 5 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಬಿ.ಎ.ಬಾವಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗುವುದು. ಅದರ ಉಸ್ತುವಾರಿ ನಾನೇ ವಹಿಸುತ್ತೇನೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ 7,8, 9 ನೇ ತರಗತಿ ವ್ಯಾಸಂಗ ಮಾಡಿರುವವರಿಗೆ ಮೊದಲ ಹಂತದಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು.
15 ದಿನಗಳಿಂದ 6 ತಿಂಗಳವರೆಗೆ ತರಬೇತಿ ನೀಡಿ ಪ್ರೋತ್ಸಾಹ ಧನ ಸಹ ನೀಡಲಾಗುವುದು,’ಎಂದು ತಿಳಿಸಿದರು. “ತರಬೇತಿ ಕಾರ್ಯಕ್ರಮಕ್ಕೆ 6 ಲಕ್ಷ ಅರ್ಜಿಗಳು ಬಂದಿವೆ. ಉತ್ತಮ ಸ್ಪಂದನೆ ದೊರೆತಿದೆ. ತರಬೇತಿ ನೀಡಲು ಕೇಂದ್ರ ಸರ್ಕಾರದ 160 ಕೋಟಿ ರೂ. ನೆರವಿನ ಜತೆಗೆ ರಾಜ್ಯ ಸರ್ಕಾರದಿಂದ 1330 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ,’ ಎಂದು ಹೇಳಿದರು.
ಕುಲ ಕಸುಬೇ ಮಾಡಬೇಕಾ?: ಬಿಜೆಪಿಯ ಗೋವಿಂದ ಕಾರಜೋಳ, “ಗ್ರಾಮೀಣ ಭಾಗದಲ್ಲಿ ಕುಲಕಸುಬುಗಳು ಮರೆಯಾಗುತ್ತಿವೆ. ಅಂತವರಿಗೆ ಕೌಶಲ್ಯ ತರಬೇತಿ ನೀಡುವಾಗ ಹೆಚ್ಚಿನ ಆದ್ಯತೆ ನೀಡಿ,’ ಎಂದು ಸಲಹೆ ನೀಡಿದರು.
ಅದಕ್ಕೆ ಸಿದ್ದರಾಮಯ್ಯ ಅವರು, “ಕಾರಜೋಳ್ ಅವರೇ ಕುಲಕಸುಬು ಯಾರೂ ಮಾಡುತ್ತಿಲ್ಲ. ತಲೆಮಾರುಗಳಿಂದ ಮಾಡುವ ಕಸುಬೇ ಈಗಲೂ ಮುಂದುವರಿಸಬೇಕಾ? ಶಿಕ್ಷಣ ಹಾಗೂ ಉತ್ತಮ ಕೌಶಲ್ಯ ತರಬೇತಿ ಪಡೆದು ಮೇಲಿನ ಹಂತದ ಉದ್ಯೋಗಕ್ಕೆ ಹೋಗಲಿ ಬಿಡಿ,’ ಎಂದರು.
“ಚಮ್ಮಾರಿಕೆ ಮಾಡೋರು ಅದೇ ಮಾಡಬೇಕು, ಕುಂಬಾರಿಕೆ ಮಾಡೋರು ಅದೇ ಮಾಡಬೇಕು ಎಂಬ ಭಾವನೆ ಬೇಡ. ಅದರಿಂದಲೇ ಜಾತಿ ವ್ಯವಸ್ಥೆ ಜಾಸ್ತಿ. ಇವನಾರವ ಇವನಾರವ ಎನ್ನದಿರಯ್ಯ , ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂಬ ಬಸವಣ್ಣನವರ ವಚನ ಹೇಳುತ್ತಲೇ ನಿಮ್ಮ ಜಾತಿ ಯಾವುದು ಎಂದು ಕೇಳುವ ಸ್ಥಿತಿ ಈಗಲೂ ಇದೆ,’ ಎಂದು ಹೇಳಿದರು.
ಹುಡ್ಗಿàರು ಮಾಡೋ ಹೇರ್‌ಕಟ್‌ಗೆ ದುಡ್ಡು ಜಾಸ್ತಿ: ಕೌಶಲ್ಯ ತರಬೇತಿ ಪ್ರಸ್ತಾಪದ ಸಂದರ್ಭದಲ್ಲಿ ಹೇರ್‌ಕಟ್ ವಿಚಾರದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ “ದೆಹಲಿಯಲ್ಲಿ ಹತ್ತು ವರ್ಷದ ಹಿಂದೆ ಪಂಚತಾರಾ ಹೋಟೆಲ್‌ಗೆ ನಾನು ಹೇರ್‌ಕಟ್ ಮಾಡಿಸಿಕೊಳ್ಳಲು ಹೋದಾಗ 200 ರೂ. ಪಡೆದರು. ನಮ್ಮ ಊರಲ್ಲಿ ಆಗ ತುಂಬಾ ಕಡಿಮೆ ಕೊಡುತ್ತಿದ್ದೆ. ಅಷ್ಟು ದರ ನೋಡಿ ಆಗಲೇ ಅಚ್ಚರಿಗೊಂಡಿದ್ದೆ,’ ಎಂದರು.
ಆಗ ಬಿಜೆಪಿಯ ಸಿ.ಟಿ.ರವಿ, “ಈಗ ಇನ್ನೂ ಜಾಸ್ತಿ ತಗೋತಾರೆ, ಎಂ.ಬಿ.ಪಾಟೀಲ್ ಅಥವಾ ಜಾರ್ಜ್ ಅವರನ್ನು ಕೇಳಿ,’ ಎಂದು ಚಟಾಕಿ ಹಾರಿಸಿಸದರು. ಅದಕ್ಕೆ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ, “ಸಾರ್, ಈಗ ಸ್ಟಾರ್ ಹೋಟೆಲ್‌ಗಳಲ್ಲಿ ಹುಡುಗೀರು ಕಟಿಂಗ್ ಮಾಡಿದರೆ ಜಾಸ್ತಿ ದುಡ್ಡು, ಹುಡುಗರು ಮಾಡಿದರೆ ಕಡಿಮೆ ದುಡ್ಡು ಸಾರ್,’ ಎಂದು ಹೇಳಿದಾಗ ಸದನದಲ್ಲಿ ನಗೆ ಅಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.