ನಿರ್ಗತಿಕ ಮಕ್ಕಳಿಗಾಗಿ ತಲೆಯೆತ್ತುತ್ತಿದೆ “ಚಿಣ್ಣರ ಧಾಮ”
300 ಹೆಣ್ಣು ಮಕ್ಕಳಿಗೆ ಆಶ್ರಯ ನೀಡುವ ಗುರಿ ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯ ತರಬೇತಿ
Team Udayavani, Oct 22, 2021, 11:17 AM IST
ಬೆಂಗಳೂರು: ಜಾಗತಿಕ ಮಹಾಮಾರಿ ಕೊರೊನಾ ಹಾವಳಿಯಲ್ಲಿ ಅದೆಷ್ಟೋ ಮಕ್ಕಳು ಅನಾಥವಾದರು. ಅನೇಕರು ಶಾಲೆಗಳನ್ನು ತೊರೆದರು. ಕೆಲ ಪೋಷಕರು ತಮ್ಮ ದುಡಿಮೆ ಸಾಕಾಗದೆ ಅನಿವಾರ್ಯವಾಗಿ ಮಕ್ಕಳನ್ನು ದುಡಿಮೆಗೆ ಹಚ್ಚಿದರು. ಇಂತಹ ಹಲವು ಕಹಿ ಘಟನೆಗಳಿಗೆ ಕೊರೊನಾ ಕಾರಣವಾಯಿತು. ಈಗ ಅಂತಹ ಮಕ್ಕಳಿಗೆ “ಚಿಣ್ಣರ ಧಾಮ’ ಆಶ್ರಯ ನೀಡಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಕೆಐಎಎಫ್)ವು ಸ್ಪರ್ಶ ಟ್ರಸ್ಟ್ ಮತ್ತು ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಲಿ., ಸಹಯೋಗದಲ್ಲಿ ನಗರದ ಹೊರವಲಯದಲ್ಲಿ “ಚಿಣ್ಣರ ಧಾಮ’ ತಲೆಯೆತ್ತುತ್ತಿದೆ. ಹೆಸರೇ ಸೂಚಿಸುವಂತೆ ಇದು ಮಕ್ಕಳ ಶಿಕ್ಷಣ, ವಸತಿ, ಆರೋಗ್ಯ ಸೇರಿದಂತೆ ಸಮಗ್ರ ಬೆಳವಣಿಗೆ ವೇದಿಕೆ ಆಗಲಿದೆ.
ಈ ಕಾರ್ಯಕ್ರಮದಡಿ ಸುಮಾರು 300 ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ಕೆಐಎಎಫ್ ಸೇರಿದಂತೆ ಮೂರೂ ಸಂಸ್ಥೆಗಳು ಮಕ್ಕಳ ಧಾಮ ಅಥವಾ ಚಿಣ್ಣರ ಧಾಮವನ್ನು ಬೆಟ್ಟಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿವೆ.
ಅಲ್ಲಿ “ನಮ್ಮ ಶಿಕ್ಷಣ’ ಆರಂಭಿಕ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುತ್ತಿದ್ದು, ಮಕ್ಕಳಿಗೆ ಸಾಮಾಜಿಕ ಮತ್ತು ಮಾನ ಸಿಕ ಸ್ಥೈರ್ಯ ತುಂಬುವುದರ ಜತೆಗೆ ಬಿಐಎಎಲ್ ದತ್ತುಪಡೆದ ಯಾವುದಾದರೂ ಶಾಲೆಯಲ್ಲಿ ಹೆಸರು ನೋಂದಣಿ ಮಾಡಿಸಿ, ಗುಣಮಟ್ಟದ ಶಿಕ್ಷಣ ಒದಗಿ ಸಲಾಗುವುದು ಎಂದು ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ತಿಳಿಸಿದೆ.
ಉದ್ದೇಶಿತ ಧಾಮಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿದ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್, ಕೋವಿಡ್ ಸಂದರ್ಭದಲ್ಲಿ ಅಸಂಖ್ಯಾತ ಮಕ್ಕಳು ಅನಾಥವಾಗಿವೆ. ಅಷ್ಟೇ ಅಲ್ಲ, ಪೋಷಕರು, ತಮ್ಮ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲಿಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:- ರಾಜ್ಯೋತ್ಸವ: ಸರಳ ಆಚರಣೆಗೆ ನಿರ್ಧಾರ
ಕಲಿಕೆಯಿಂದ ಹಿಡಿದು ಹಲವು ಅವಕಾಶಗಳಿಂದ ವಂಚಿತರಾಗಿದ್ದಾರೆ. ಅಂತಹವರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಚಿಣ್ಣರ ಧಾಮಕ್ಕೆ ಬಿಐಎಎಲ್ ಮುಂದಾಗಿದೆ. ಇದರಡಿ 300 ಹೆಣ್ಣು ಮಕ್ಕಳನ್ನು ಬೆಳೆಸಿ, ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲಾಗುವುದು’ ಎಂದು ಹೇಳಿದರು. ಸ್ಪರ್ಶ ಟ್ರಸ್ಟ್ ಆಡಳಿತ ಸಮಿತಿ ಸದಸ್ಯ ಜಿ. ರಾಘವನ್ ಉಪಸ್ಥಿತರಿದ್ದರು.
2 ಎಕರೆಯಲ್ಲಿ ನಿರ್ಮಾಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ಈ ಚಿಣ್ಣರ ಧಾಮ ನಿರ್ಮಿಸಲಾ ಗುತ್ತಿದ್ದು, ಇದರ ಮೊದಲ ಹಂತದ ನಿರ್ಮಾಣ ಕಾರ್ಯವು 2021ರ ಅಕ್ಟೋಬರ್ ಅಂತ್ಯ ದೊಳಗೆ ಪೂರ್ಣಗೊಳಿಸುವ ಗುರಿ ಹೊಂದ ಲಾಗಿದೆ.
ಸಂಪೂರ್ಣವಾಗಿ 2022ರ ಜೂನ್‌ಗೆ ಮುಗಿಯಲಿದೆ. ಮಕ್ಕಳ ವಾಸಕ್ಕೆ ವಸತಿ, ಆಹಾರ, ಆರೋಗ್ಯ, ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ ಮತ್ತಿತರ ಸೌಲಭ್ಯಗಳನ್ನು ಇದು ಒಳಗೊಂಡಿರಲಿದೆ. ರಾಜ್ಯದ ಯಾವುದೇ ಹೆಣ್ಣುಮಗುವಿಗೆ ಇಲ್ಲಿ ಆಶ್ರಯ ನೀಡಲಾಗು ತ್ತದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡ ವನ್ನು ರಚಿಸಲಾಗಿದ್ದು, ಅದರಲ್ಲಿ ಉದ್ಯಮಿಗಳು, ಕಾರ್ಪೋರೇಟ್ ಪ್ರತಿನಿಧಿಗಳು, ರಕ್ಷಣಾ ವಲ ಯದ ಅನುಭವಿಗಳು ಮತ್ತಿತರರು ತಮ್ಮನ್ನು ತಾವು ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.