ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ


Team Udayavani, Jul 11, 2018, 12:02 PM IST

rajya-sar.jpg

ಬೆಂಗಳೂರು: ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸದೇ ಇರುವ ಕರ್ನಾಟಕಕಕ್ಕೆ ಸುಪ್ರೀಂಕೋರ್ಟ್‌ 1 ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ  ರಾಜ್ಯಗಳು ಯಾವುದೇ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ನಿಯಮ ಹೊಂದಿರದೇ ಇರುವ ಬಗ್ಗೆ ನ್ಯಾ.ಎಂ.ಬಿ.ಲೋಕುರ್‌ ಮತ್ತು ನ್ಯಾ.ದೀಪಕ್‌ ಗುಪ್ತಾ  ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಅಚ್ಚರಿ ವ್ಯಕ್ತಪಡಿಸಿದೆ.

ಕರ್ನಾಟಕದ ಜತೆಗೆ, ಬಿಹಾರ, ಛತ್ತೀಸ್‌ಗಡ, ಗೋವಾ, ಹಿಮಾಚಲ ಪ್ರದೇಶ,  ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ, ಪಂಜಾಬ್‌, ಲಕ್ಷದ್ವೀಪ ಮತ್ತು ಪುದುಶೆರಿಗಳಿಗೂ 1 ಲಕ್ಷ ರೂ.ದಂಡ ವಿಧಿಸಿದೆ  ಸುಪ್ರೀಂಕೋರ್ಟ್‌. ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ಅವಕಾಶ ನೀಡಿದರೂ ಅವರು ಅದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಅವುಗಳ ಮುಖ್ಯ  ಕಾರ್ಯದರ್ಶಿಗಳನ್ನು ಕರೆಯಿಸಿ, ಭಾರತಕ್ಕೆ ಅನ್ವಯವಾಗುವ ನಿಯಮಗಳು ಈ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲವೇ  ಎಂದು ಪ್ರಶ್ನೆ ಮಾಡಬೇಕಾಗುತ್ತದೆ’ ಎಂದು ನ್ಯಾಯಪೀಠ ಕಟುವಾಗಿ ಪ್ರಶ್ನಿಸಿದೆ. 

ಮಂಗಳವಾರದಿಂದ ಎರಡು ವಾರದ ಒಳಗಾಗಿ ದಂಡದ ಮೊತ್ತವನ್ನು  ಸುಪ್ರೀಂಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯ ಹೆಸರಲ್ಲಿ ಪಾವತಿ ಮಾಡಬೇಕು ಎಂದು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಪೀಠ  ತಾಕೀತು ಮಾಡಿದೆ. ನವದೆಹಲಿಯಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ನಗರ ಮುಳುಗಿ ಹೋಗುತ್ತಿದೆ.

ಈ ಪರಿಸ್ಥಿತಿಯಲ್ಲಿ ನಮಗೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರ್ಕಾರಗಳೇ ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ ಎಂದು  ಪ್ರಶ್ನಿಸಿದೆ ನ್ಯಾಯಪೀಠ ನವದೆಹಲಿಯಲ್ಲಿರುವ ಓಖಾ, ಭಲ್ಸಾ ಮತ್ತು ಘಾಜಿಪುರಗಳಲ್ಲಿರುವ ತ್ಯಾಜ್ಯದ ಪರ್ವತಗಳಿಗೆ ಯಾರು ಹೊಣೆ ಎಂಬ ಬಗ್ಗೆ  ಬುಧವಾರದ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ದೆಹಲಿ ಸರ್ಕಾರ ಮತ್ತು ಲೆμrನೆಂಟ್‌ ಗವರ್ನರ್‌ಗೆ ನ್ಯಾಯಪೀಠ ಸೂಚಿಸಿದೆ 

“ಮೂರನೇ ಎರಡರಷ್ಟು ರಾಜ್ಯಗಳು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲನೆ ಮಾಡುವ ಬಗ್ಗೆ ಕಿಂಚಿತ್ತು ಯೋಚನೆ ಮಾಡಿಲ್ಲ ಎಂದು ದುಃ ಖದಾಯಕ. ಜತೆಗೆ ಕೇಂದ್ರ ಅರಣ್ಯ,  ಪರಿಸರ ಮತ್ತು ಹವಾಮಾನ ಬದಲು ಸಚಿವಾಲಯ ನೀಡಿದ ನಿರ್ದೇಶನಗಳನ್ನೂ ಪಾಲನೆ ಮಾಡುತ್ತಿಲ್ಲ. ಇದು ಬೇಸರ ತರುವುದು ಮಾತ್ರವಲ್ಲ, ಆಘಾತ  ವನ್ನುಂಟು ಮಾಡುತ್ತದೆ’ ಎಂದು ಸುಪ್ರೀಂಕೋರ್ಟ್‌ ಪ್ರಬಲವಾಗಿ ಆಕ್ಷೇಪ ಮಾಡಿದೆ. 

ನ್ಯಾಯಾಂಗದ ಬಗ್ಗೆ ಆಕ್ಷೇಪ: “ಸಾರ್ವಜನಿಕರಿಗೆ ತೊಂದರೆಯಾಗುವ  ವಿಚಾರಗಳಲ್ಲಿ ಕೋರ್ಟ್‌ಗಳು ಮಧ್ಯಪ್ರವೇಶಿಸಿದರೆ ನ್ಯಾಯಾಂಗ ಅಗತ್ಯಕ್ಕಿಂತ ಹೆಚ್ಚು ಮಧ್ಯಪ್ರವೇಶ ಮಾಡುತ್ತಿದೆ. ನ್ಯಾಯಾಂಗ ಹೆಚ್ಚಿನ ರೀತಿಯಲ್ಲಿ  ಕ್ರಿಯಾಶೀಲವಾಗಿದೆ ಎಂದು ನಮ್ಮ ಮೇಲೆ ಟೀಕಾ ಪ್ರಹಾರ ನಡೆಸಲಾಗುತ್ತಿದೆ ಎಂದು ಮಾತನಾಡಲಾಗುತ್ತದೆ.

ಕಾರ್ಯಾಂಗದ ಕರ್ತವ್ಯದ ಮೇಲೆ  ನ್ಯಾಯಾಂಗ ಅತಿಕ್ರಮಿಸುತ್ತಿದೆ ಎಂದು ವಿಮರ್ಶೆ ಮಾಡಲಾಗುತ್ತದೆ’ ಎಂದು ನ್ಯಾಯಪೀಠ ಖಾರವಾಗಿ ನುಡಿದಿದೆ. ಸಂಸತ್‌ನಲ್ಲಿ ರಚನೆಯಾಗಿರುವ  ಕಾನೂನುಗಳನ್ನು ರಾಜ್ಯಗಳು ಪಾಲಿಸುತ್ತಿಲ್ಲ.

ರಾಜ್ಯಗಳು ಏನೂ ಕೆಲಸ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ ಎಂದು ಸುಪ್ರೀಂಕೋರ್ಟ್‌ ಖಡಕ್‌ ಆಗಿ ಕೇಳಿದೆ. ಯಾವುದೇ ವಿಚಾರಗಳಿಗೆ ಯಾರನ್ನೇ ಆಗಲಿ ಉತ್ತರದಾಯಿತ್ವತೆಯೇ ಇಲ್ಲದಂತೆ ಮಾಡಿದರೆ ಹೇಗೆ ಎಂದು ಹೆಚ್ಚುವರಿ ಸಾಲಿಸಟರ್‌  ಜನರಲ್‌ ಎ.ಎನ್‌. ಎಸ್‌.ನಾಡಕರ್ಣಿ ಅವರನ್ನು ಪ್ರಶ್ನೆ ಮಾಡಿದೆ ನ್ಯಾಯಪೀಠ. 

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.