ಸ್ಮಾರ್ಟ್‌ ಪಾರ್ಕಿಂಗ್‌ “ಪ್ರಯೋಗ’ ಶುರು


Team Udayavani, Dec 15, 2019, 3:10 AM IST

smart-park

ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ “ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆಗೆ ಮೇಯರ್‌ ಎಂ.ಗೌತಮ್‌ಕುಮಾರ್‌, ಕಸ್ತೂರಬಾ ರಸ್ತೆಯಲ್ಲಿ ಶನಿವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಒಂದು ತಿಂಗಳ ಕಾಲ ಉಚಿತವಾಗಿ ಸೇವೆ ನೀಡಲಾಗುವುದು ಎಂದರು.

ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಜತೆಗೆ ಪಾಲಿಕೆಗೆ ಪ್ರತಿ ವರ್ಷ 31 ಕೋಟಿ ರೂ. ಆದಾಯ ಬರಲಿದೆ. ಸ್ಮಾರ್ಟ್‌ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನಗಳು ನಿಂತರೆ ಮಾತ್ರ ಸೆನ್ಸರ್‌ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ನಗರದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ ಎಂದು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ “ನಮ್ಮ ಬೆಂಗಳೂರು ಆ್ಯಪ್‌’ ಅಭಿವೃದ್ಧಿಪಡಿಸುತ್ತಿದ್ದು, ಸಾರ್ವಜನಿಕರು ಮನೆ ಬಿಡುವ ಮುನ್ನವೇ ಈ ಆ್ಯಪ್‌ ಪಾರ್ಕಿಂಗ್‌ಗೆ ಎಲ್ಲಿ ಸ್ಥಳಾವಕಾಶವಿದೆ ಎಂದು ತಿಳಿದುಕೊಳ್ಳಲು ಸಹಾಯವಾಗಲಿದೆ.

ನಗರದ 85 ಕಡೆಗಳಲ್ಲಿ ಪ್ರಾರಂಭವಾಗುವ ಸ್ಮಾರ್ಟ್‌ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಕಂಟ್ರೋಲ್‌ ರೂಮ್‌ ಸ್ಥಾಪನೆ ಆಗಲಿದೆ ಎಂದು ಮಾಹಿತಿ ನೀಡಿದರು. ಸಿಲಿಕಾನ್‌ ಸಿಟಿಯ ಹೃದಯ ಭಾಗದಲ್ಲಿನ ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ಗೆ ಅನುವು ಮಾಡಿಕೊಡಲಾಗುತ್ತಿದೆ. ಈ ರಸ್ತೆಗಳನ್ನು “ಎ’ (ಪ್ರೀಮಿಯಂ), “ಬಿ’ (ವಾಣಿಜ್ಯ) ಮತ್ತು “ಸಿ’ (ಸಾಮಾನ್ಯ) ಎಂಬ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ವರ್ಗದ ರಸ್ತೆಗಳಿಗೆ ಅನುಗುಣವಾಗಿ ಪಾರ್ಕಿಂಗ್‌ ಶುಲ್ಕ ನಿಗದಿಪಡಿಸಲಾಗಿದೆ.

ಈ ರಸ್ತೆಗಳಲ್ಲಿ ಒಟ್ಟು 3333 ಕಾರುಗಳು, 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಯೋಜನೆ ಅಧಿಕೃತವಾಗಿ ಜಾರಿಗೆ ಬಂದ ನಂತರ ಪಾರ್ಕಿಂಗ್‌ ತಾಣಗಳಲ್ಲಿ ಸುಮಾರು 13,500 ವಾಹನಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ಸೌಲಭ್ಯ ಕಲ್ಪಿಸುವ ಸಲುವಾಗಿ ಒಟ್ಟು 85 ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಡ್‌ ಮೂಲಕವೂ ಶುಲ್ಕ ಪಾವತಿ: ಪಾರ್ಕಿಂಗ್‌ ತಾಣಗಳಲ್ಲಿ ಪ್ರತಿ ಅಂಕಣಕ್ಕೂ ಪ್ರತ್ಯೇಕ ಸಂಖ್ಯೆ ನಮೂದಿಸಿ, ಎಲೆಕ್ಟ್ರಾನಿಕ್‌ ಸೆನ್ಸರ್‌ಗಳನ್ನು ಅಳವಡಿಸಲಾಗಿರುತ್ತದೆ. ವಾಹನ ಬಂದು ನಿಂತ ಸಮಯ, ಎಷ್ಟು ತಾಸು ನಿಲುಗಡೆ ಮಾಡಲಾಗಿದೆ ಎಂಬ ಮಾಹಿತಿಯು ಎಲೆಕ್ಟ್ರಾನಿಕ್‌ ಸೆನ್ಸರ್‌ ಮೂಲಕ ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ವಾಹನ ನಿಲುಗಡೆ ತಾಣಗಳಲ್ಲಿ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ.

ವಾಹನ ನಿಲುಗಡೆ ಮಾಡಿದ ಬಳಿಕ ಖುದ್ದು ಸವಾರರೇ ಮೀಟರ್‌ ಬಳಿ ತೆರಳಿ ಅಂಕಣದ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಮತ್ತು ನಿಲುಗಡೆ ಅವಧಿ ದಾಖಲಿಸಬೇಕು. ಬಳಿಕ ನಿಗದಿತ ಶುಲ್ಕ ಪಾವತಿಸಿದರೆ, ಮುದ್ರಿತ ಚೀಟಿ ಬರುತ್ತದೆ. ಬಳಿಕ ನಗದು, ಡೆಬಿಟ್‌ ಇಲ್ಲವೇ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾರ್ಕಿಂಗ್‌ ಶುಲ್ಕ ಪಾವತಿ ಮಾಡಬಹುದು.

24 ಗಂಟೆ ಸೌಲಭ್ಯ: ಸ್ಮಾರ್ಟ್‌ ಪಾರ್ಕಿಂಗ್‌ ಸೌಲಭ್ಯ ದಿನದ 24 ಗಂಟೆಯೂ ಬಳಸಿಕೊಳ್ಳಬಹುದು. ಒಂದೊಮ್ಮೆ ಕನಿಷ್ಠ ಶುಲ್ಕ ಪಾವತಿಸದೆ ವಾಹನ ನಿಲುಗಡೆ ಮಾಡಿ ಹೋಗಿದ್ದರೆ, ಆ ಮಾಹಿತಿಯು ಕ್ಷಣ ಮಾತ್ರದಲ್ಲಿ ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ಬಳಿಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಚಕ್ರಗಳಿಗೆ ಕ್ಲಾಂಪ್‌ ಹಾಕುತ್ತಾರೆ.

ಎಲ್ಲೆಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ
“ಎ’ ಪ್ಯಾಕೇಜ್‌ ರಸ್ತೆಗಳು: ಅವೆನ್ಯೂ ರಸ್ತೆ, ಎಸ್‌ಸಿ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಡಿಕನ್‌ಸನ್‌ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜರಾಂಮೋಹನ್‌ ರಾಯ್‌ ರಸ್ತೆ, ವಿಠಲ ಮಲ್ಯ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್‌ ರಸ್ತೆ, ಎನ್‌.ಆರ್‌.ರಸ್ತೆ.

“ಬಿ’ ಪ್ಯಾಕೇಜ್‌ ರಸ್ತೆಗಳು: ಎಸ್‌.ಪಿ.ರಸ್ತೆ, ಧನ್ವಂತರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಅರಮನೆ ರಸ್ತೆ, ಎಸ್‌.ಸಿ.ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟ್ರಿಕ್ಟ್ ಆಫೀಸ್‌ ರಸ್ತೆ, ರಾಮಚಂದ್ರ ರಸ್ತೆ, ಲಿಂಕ್‌ ರಸ್ತೆ, ಕಾಳಿದಾಸ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಮೇನ್‌ಗಾರ್ಡ್‌ ರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲರ್ ರಸ್ತೆ, ಮಿಲ್ಲರ್ ಟ್ಯಾಂಕ್‌ ಬಂಡ್‌ ರಸ್ತೆ, ಅಲಿ ಅಸರ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಕೆನ್ಸಿಂಗ್‌ಟನ್‌ ರಸ್ತೆ, ವೀರಪಿಳ್ಳೆ ಸ್ಟ್ರೀಟ್‌, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್‌ ಸ್ಟ್ರೀಟ್‌, ಮೀನಾಕ್ಷಿ ದೇವಸ್ಥಾನ ಮಾರ್ಗ, ನಾರಾಯಣ ಪಿಳ್ಳೈ ರಸ್ತೆ, ಸೆಪ್ಪಿಂಗ್ಸ್‌ ರಸ್ತೆ, ಧರ್ಮರಾಯ ದೇವಸ್ಥಾನ ರಸ್ತೆ, ಹೇನ್ಸ್‌ ರಸ್ತೆ, ಆಸ್ಪತ್ರೆ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ವುಡ್‌ ಸ್ಟ್ರೀಟ್‌ ಬ್ರಂಟನ್‌ ರಸ್ತೆ, ಕ್ಯಾಸ್ಟಲ್‌ ಸ್ಟ್ರೀಟ್‌, ಲ್ಯಾವೆಲ್ಲೆ ರೋಡ್‌, ಸೇಂಟ್‌ ಮಾರ್ಕ್ಸ್ ರಸ್ತೆ, ಚರ್ಚ್‌ಸ್ಟ್ರೀಟ್‌, ಗ್ರಾಂಟ್‌ ರಸ್ತೆ, ಹೇಯ್ಸ ರಸ್ತೆ, ಕಾನ್ವೆಂಟ್‌ ರೋಡ್‌, ಪಂಪ ಮಹಾಕವಿ ರಸ್ತೆ, 2ನೇ ಮುಖ್ಯರಸ್ತೆ, ಮಿಷನ್‌ ರಸ್ತೆಯ 3ನೇ ಕ್ರಾಸ್‌.

“ಸಿ’ ಪ್ಯಾಕೇಜ್‌ ರಸ್ತೆಗಳು: ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎಎಸ್‌ ಚಾರ್‌ ಸ್ಟ್ರೀಟ್‌, ಬಳೇಪೇಟೆ ಮುಖ್ಯರಸ್ತೆ, ಬನ್ನಪ್ಪ ಉದ್ಯಾನ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಆಸ್ಪತ್ರೆ ರಸ್ತೆ, ಕೆವಿ ದೇವಸ್ಥಾನ ರಸ್ತೆ, ಕಿಲಾರಿ ಸ್ಟ್ರೀಟ್‌, ನಗರ್ತಪೇಟೆ ಮುಖ್ಯರಸ್ತೆ, ಪೊಲೀಸ್‌ ಠಾಣೆ ರಸ್ತೆ, ಆರ್‌ಟಿ ಸ್ಟ್ರೀಟ್‌, ಸುಲ್ತಾನ್‌ಪೇಟೆ ಮುಖ್ಯರಸ್ತೆ, ಸ್ಯಾಂಕಿ ರಸ್ತೆ, 8ನೇ ಮುಖ್ಯರಸ್ತೆ, ಜಸ್ಮಾಭವನ ರಸ್ತೆ, ಎಡ್ವರ್ಡ್‌ ಸ್ಟ್ರೀಟ್‌, ಅಣ್ಣಾಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್‌ವೇ ರಸ್ತೆ, ಸೇಂಟ್‌ ಜಾನ್ಸ್‌ ರಸ್ತೆ, ಶಿವಾಜಿ ರಸ್ತೆ, ಚಿಕ್‌ ಬಜಾರ್‌ ರಸ್ತೆ, ಜೈನ್‌ ಟೆಂಪಲ್‌ ರಸ್ತೆ.

ಸ್ಮಾರ್ಟ್‌ ಪಾರ್ಕಿಂಗ್‌ ಶುಲ್ಕ
ವರ್ಗ ಶುಲ್ಕ (ಗಂಟೆಗೆ)
ವಾಣಿಜ್ಯ ಪ್ರದೇಶ 30 ರೂ.
ಬಿ ಜೋನ್‌ 20 ರೂ.
ಸಿ ಜೋನ್‌ 10 ರೂ.

ಟಾಪ್ ನ್ಯೂಸ್

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

13-bng

Bengaluru: ಕೆಂಗೇರಿಯ ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌ ಮೃತ್ಯುಕೂಪ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sullia: ಅಸ್ವಸ್ಥ ಮಹಿಳೆ ಸಾವು

Sullia: ಅಸ್ವಸ್ಥ ಮಹಿಳೆ ಸಾವು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್‌ ಹೆಡ್‌ ಓಪನಿಂಗ್‌?

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.