ಸರ್ಕಾರಿ ಕಚೇರಿಗಳಲ್ಲಿ ಸ್ಮಾರ್ಟ್‌ ಟ್ಯಾಪ್‌?


Team Udayavani, Jul 9, 2019, 3:10 AM IST

sarjkaari

ಬೆಂಗಳೂರು: ನಗರದಲ್ಲಿ ಆಗುತ್ತಿರುವ ನೀರಿನ ಪೋಲು ಮತ್ತು ಹೆಚ್ಚುತ್ತಿರುವ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕಡಿಮೆ ನೀರು ಹೊರಹಾಕುವ ಟ್ಯಾಪ್‍ಗಳ ಬಳಕೆಗೆ ಚಿಂತನೆ ನಡೆಸಿದ್ದು, ಪ್ರಾಯೋಗಿಕವಾಗಿ ಸರ್ಕಾರಿ ಕಚೇರಿಗಳಲ್ಲಿ ಈ ಮಾದರಿಯ ಸ್ಮಾರ್ಟ್ ಟ್ಯಾಪ್‍ಗಳನ್ನು ಪರಿಚಯಿಸಲು ಸರ್ಕಾರ ಉದ್ದೇಶಿಸಿದೆ.

ಒಂದೆಡೆ ನೀರಿನ ಬೇಡಿಕೆ ಹೆಚ್ಚುತ್ತಲೇ ಇದ್ದರೆ, ಮತ್ತೂಂದೆಡೆ ಇದಕ್ಕೆ ತದ್ವಿರುದ್ಧವಾಗಿ ಲಭ್ಯತೆ ಕಡಿಮೆ ಆಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಎಲ್ಲ ರೀತಿಯಿಂದ ನೀರಿನ ಉಳಿತಾಯ ಮಾಡಲು ಪ್ರಯತ್ನಗಳು ನಡೆದಿದೆ. ಇದರಲ್ಲಿ ಹೊಸ ಅಪಾರ್ಟ್‍ಮೆಂಟ್‌ ನಿರ್ಮಾಣ ಯೋಜನೆಗೆ ನಿಷೇಧ, ಈಗಾಗಲೇ ಇರುವ ಅಪಾರ್ಟ್‍ಮೆಂಟ್‌ಗಳಿಗೆ ಮೀಟರ್‌ ಅಳವಡಿಕೆ, ತ್ಯಾಜ್ಯ ನೀರು ಸಂಸ್ಕರಣೆ ಜತೆಗೆ ಇದರ ಮುಂದುವರಿದ ಭಾಗವಾಗಿ ಕಡಿಮೆ ನೀರು ಹೊರಚೆಲ್ಲುವ ಟ್ಯಾಪ್‍ಗಳನ್ನು ಅಳವಡಿಸಲು ಚಿಂತನೆ ನಡೆದಿದೆ.

ಈ ಮಾದರಿಯ ಟ್ಯಾಪ್‍ಗಳನ್ನು ಪ್ರಾಯೋಗಿಕವಾಗಿ ಸರ್ಕಾರಿ ಕಚೇರಿಗಳಲ್ಲಿ ಪರಿಚಯಿಸುವ ಚಿಂತನೆ ಇದೆ. ನಗರದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಾವಿರಾರು ಕಚೇರಿಗಳಿವೆ. ಅಲ್ಲೆಲ್ಲಾ ಈ ಮಾದರಿಯ ಟ್ಯಾಪ್‍ಗಳನ್ನು ಅಳವಡಿಸಲು ಸಾಧ್ಯವಾದರೆ, ಈಗ ಆ ಕಚೇರಿಗಳಲ್ಲಿ ಬಳಕೆ ಮಾಡುತ್ತಿರುವ ನೀರಿನ ಪೈಕಿ ಶೇ.30ರಿಂದ 40ರಷ್ಟು ನೀರು ಉಳಿತಾಯ ಮಾಡಬಹುದು ಎಂದು ಜಲಮಂಡಳಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಅದರಲ್ಲೂ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲೇ ಈ ಟ್ಯಾಪ್‍ಗಳನ್ನು ಅಳವಡಿಸುವ ಯೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ಪಿಡಬ್ಲ್ಯೂಡಿ ಜತೆ ಚರ್ಚೆ: ಅತ್ಯಾಧುನಿಕ ಟ್ಯಾಪ್‍ಗಳ ಅಳವಡಿಕೆಯಿಂದ ಖಂಡಿತ ನೀರಿನ ಉಳಿತಾಯ ಆಗಲಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚೆ ನಡೆಸುವ ಯೋಚನೆ ಇದೆ. ಅಷ್ಟೇ ಅಲ್ಲ, ನಗರದ ಅಪಾರ್ಟ್‍ಮೆಂಟ್‌ಗಳು ಸೇರಿದಂತೆ ಮನೆಗಳಲ್ಲೂ ಈ ಮಾದರಿಯ ಟ್ಯಾಪ್‍ಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜಲ ಮಂಡಳಿ ವತಿಯಿಂದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ನೀರಿನ ಮಿತ ಬಳಕೆ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಆಗ ಇಂತಹ ಟ್ಯಾಪ್‍ಗಳನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸಲಾಗುವುದು ಎಂದು ಜಲ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ನಗರದಲ್ಲಿ ಅಪಾರ್ಟ್‍ಮೆಂಟ್‌ಗಳು ಸೇರಿದಂತೆ ಸಗಟು ಗ್ರಾಹಕರು (bulk consumers) ಸುಮಾರು 23 ಸಾವಿರ. ಆ ಪೈಕಿ ಸ್ಮಾಟ್‌ ಟ್ಯಾಪ್‌ ಅಥವಾ ಮಿತ ಬಳಕೆಯ ಟ್ಯಾಪ್‍ಗಳನ್ನು ಅಳವಡಿಸಿರುವವರ ಪ್ರಮಾಣ ಎಷ್ಟು ಎಂಬ ಮಾಹಿತಿ ಇಲ್ಲ. ಅಂತಹ ಗ್ರಾಹಕರ ಸಂಖ್ಯೆ ತುಂಬಾ ವಿರಳ. ಈ ಗ್ರಾಹಕರಿಗೆ ಕಡ್ಡಾಯವಾಗಿ ಇಂತಹದ್ದೇ ಟ್ಯಾಪ್‍ಗಳನ್ನು ಬಳಸಿ ಎಂದು ಹೇಳುವುದು ಕಷ್ಟ. ಆದರೆ, ಮನವೊಲಿಸಬಹುದಾಗಿದೆ. ಇದರಿಂದ ಗ್ರಾಹಕರಿಗೂ ಉಳಿತಾಯ ಆಗಲಿದೆ.

ಹೇಗೆಂದರೆ, ನೀರು ಮಿತ ಬಳಕೆಯಿಂದ ನೀರಿನ ಬಿಲ್‌ ಕಡಿಮೆ ಆಗುತ್ತದೆ. ಮಾರುಕಟ್ಟೆಗಳಲ್ಲಿ ಒಂದು ನಿಮಿಷಕ್ಕೆ 6 ಲೀ., 9 ಲೀ. ಮತ್ತು 15 ಲೀ. ನೀರು ಹೊರಚೆಲ್ಲುವಂತಹ ವಿವಿಧ ಪ್ರಕಾರ ಟ್ಯಾಪ್‍ಗಳಿವೆ. ಸ್ಮಾರ್ಟ್‍ ಟ್ಯಾಪ್‍ಗಳು ದುಬಾರಿ ಎನಿಸಿದವರು, ಈ ಮಾದರಿಯ ಟ್ಯಾಪ್‍ಗಳನ್ನು ಅಳವಡಿಸಿಕೊಳ್ಳಬಹುದು ಎಂದು ಜಲಮಂಡಳಿ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ.

ಚರ್ಚೆ ಪ್ರಾಥಮಿಕ ಹಂತದಲ್ಲಿ; ಲೋಕೋಪಯೋಗಿ ಇಲಾಖೆ: “ಪ್ರಸ್ತುತ ನಾವು ಬಳಕೆ ಮಾಡುವ ಸಾಮಾನ್ಯ ನಲ್ಲಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಹೊರಬರುತ್ತದೆ. ಸ್ಮಾರ್ಟ್‍ ಟ್ಯಾಪ್‍ಗಳು ಅಥವಾ ಅಗತ್ಯಕ್ಕೆ ತಕ್ಕಷ್ಟೇ ನೀರು ಹೊರಚೆಲ್ಲುವ ಅತ್ಯಾಧುನಿಕ ಟ್ಯಾಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಪರಿಚಯಿಸಲು ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಅಷ್ಟೇ ಅಲ್ಲದೆ, ಫ್ಲಶ್‌ಗಳ ನೀರನ್ನು ಕೂಡ ಶುದ್ಧೀಕರಿಸಿ, ಅದೇ ಫ್ಲಶ್‌ಗಳಿಗೆ ಮರುಬಳಕೆ ಮಾಡುವ ತಂತ್ರಜ್ಞಾನವೂ ಬಂದಿದೆ. ಈ ಸಂಬಂಧ ಅಮೆರಿಕದ ಕಂಪೆನಿಯೊಂದು ಪ್ರಾತ್ಯಕ್ಷಿಕೆ ನೀಡುವುದರ ಜತೆಗೆ ಚರ್ಚೆ ನಡೆಸಿದೆ. ಆದರೆ, ಈ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಸಬ್ಸಿಡಿ ನೀಡುವುದು ಅಗತ್ಯ – ತಜ್ಞರು: ನೀರಿನ ಮಿತ ಬಳಕೆಗೆ ಪೂರಕವಾದ ಟ್ಯಾಪ್‍ಗಳ ಅಳವಡಿಕೆಗೆ ಜನರನ್ನು ಪ್ರೋತ್ಸಾಹಿಸಲು ಸರ್ಕಾರಗಳಿಂದ ಸಬ್ಸಿಡಿ ನೀಡುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅತ್ಯಾಧುನಿಕ ಟ್ಯಾಪ್‍ಗಳನ್ನು ಅಳವಡಿಸಿಕೊಳ್ಳಲು ಜನ ಮುಂದೆಬರುವುದಿಲ್ಲ. ಈ ಟ್ಯಾಪ್‍ಗಳು ದುಬಾರಿ ಎಂಬುದು ಇದಕ್ಕೆ ಕಾರಣ. ಆದರೆ, ನಂತರದ ದಿನಗಳಲ್ಲಿ ಪರೋಕ್ಷವಾಗಿ ಬಳಕೆದಾರರಿಗೇ ಇದರಿಂದ ಉಳಿತಾಯ ಆಗುತ್ತದೆ. ಅದೇನೇ ಇರಲಿ, ಜನ ಸ್ವಯಂಪ್ರೇರಿತರಾಗಿ ಮುಂದೆಬರಲು ಸಬ್ಸಿಡಿ ನೀಡಿ ಪ್ರೋತ್ಸಾಹಿಸಬೇಕು. ಈ ಸಂಬಂಧ ರಾಜ್ಯ ಅಥವಾ ಕೇಂದ್ರ ಸರ್ಕಾರ ನೀತಿ ರೂಪಿಸುವ ಅವಶ್ಯಕತೆ ಇದೆ ಎಂದು ತಜ್ಞರು ಪ್ರತಿಪಾದಿಸುತ್ತಾರೆ.

* ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.