ರಸೆಲ್ ಮಾರುಕಟ್ಟೆಗೆ ಸ್ಮಾರ್ಟ್ ಟಚ್
Team Udayavani, Jan 17, 2022, 11:30 AM IST
ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಕಬ್ಬನ್ ಪಾರ್ಕ್, ಕೆ.ಆರ್.ಮಾರುಕಟ್ಟೆಗೂ ಹೊಸ ರೂಪ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಶಿವಾಜಿ ನಗರದ ಐತಿಹಾಸಿಕ ರಸೆಲ್ ಮಾರುಕಟ್ಟೆಯ ಕಟ್ಟಡ ಮೂಲ ಅಸ್ತಿತ್ವಕ್ಕೆ ಯಾವುದೇ ಕುಂದು ಬಾರದ ರೀತಿಯಲ್ಲಿ ಹೊಸ ಸ್ಪರ್ಶ ನೀಡಲು ಬಿಬಿಎಂಪಿ ಮುಂದಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಕಟ್ಟಡ ಹೊರಾಂಗಣಕ್ಕೆ ಆಧುನಿಕ ಸ್ಪರ್ಶ ನೀಡಲಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 7 ಕೋಟಿ ರೂ. ವೆಚ್ಚ ಮಾಡಲಿದೆ. ಈಗಾಗಲೇ ಶೇ.10ರಷ್ಟು ಕಾಮ ಗಾರಿಆರಂಭವಾಗಿದ್ದು ಏಪ್ರಿಲ್ ಅಂತ್ಯದ ವೇಳೆಗೆ ರಸೆಲ್ ಮಾರುಕಟ್ಟೆ ಹೊಸತನ ದೊಂದಿಗೆ ಕಂಗೊಳಿಸಲಿದೆ. ಚರ್ಚ್ ಮತ್ತು ಚಾಂದಿನಿ ಚೌಕ್‌ವರೆಗಿರುವ ರಸೆಲ್ ಮಾರುಕಟ್ಟೆಯ ಮುಂಭಾಗದ ಖಾಲಿ ಸ್ಥಳದ ಒಟ್ಟು 150 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿನ ಹೊರಾಂಗಣ ಪ್ರದೇಶದಲ್ಲಿ 7 ಪ್ಲಾಜಾಗಳು ನಿರ್ಮಾಣವಾಗಲಿವೆ.
ಹಾಗೆಯೇ ಚರ್ಚ್ ಮುಂಭಾಗದ ಚಾಂದಿನಿ ಚೌಕ್‌ನಿಂದ ಮಾರು ಕಟ್ಟೆ ಪ್ರವೇಶಿಸುವ ಭಾಗದಲ್ಲಿ 3 ಮೀಟರ್ ಎತ್ತರದ ಭೂ ಪ್ರದೇಶದಲ್ಲಿರುವ ಇಳಿಜಾರು ಪ್ರದೇಶದಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದುಸ್ಮಾರ್ಟ್‌ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ವಿನಾಯಕ್ ಸೂಗೂರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ರಸೆಲ್ ಮಾರುಕಟ್ಟೆ ಹೊಸ ರೂಪ ನೀಡುವ ಕೆಲಸ ಸಾಗಿದೆ. ಶೀಘ್ರದಲ್ಲೇ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.
ಬಣ್ಣ ಬಣ್ಣಗಳ ಗ್ರಾನೈಟ್‌ಗಳಿಂದ ವಿನ್ಯಾಸ: ಮಾರುಕಟ್ಟೆಯ ಮುಂಭಾಗದ ನಿರ್ಮಾಣವಾಗುವಪ್ಲಾಜಾಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು.ಸಾರ್ವಜನಿಕರನ್ನು ಸೆಳೆಯುವ ನಿಟ್ಟಿನಲ್ಲಿ ವಾಕಿಂಗ್ ಆವರಣ ನಿರ್ಮಾಣ ಮಾಡಲಾಗುವುದು. ಮಕ್ಕಳ ಮನೋರಂಜನೆಗೂ ಆದ್ಯತೆ ನೀಡಲಾಗುವುದು. ಮಾರುಕಟ್ಟೆಗೆ ಭೇಟಿ ನೀಡುವ ಗ್ರಾಹಕರಿಗೆ ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಹಾಗೆಯೇ ಚರ್ಚ್ ಸಮೀಪ ಮಾರುಕಟ್ಟೆ ಇರುವುದರಿಂದ ಕ್ರಿಸ್‌ಮಸ್‌ಹಾಗೂ ಇತರೆ ಕಾರ್ಯಕ್ರಮವನ್ನು ನಡೆಸಲುನಿರ್ದಿಷ್ಟ ಪ್ರದೇಶಕ್ಕೆ ಗ್ರಾನೈಟ್ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಾಂದಿನಿ ಚೌಕ್ ವೃತ್ತದಲ್ಲಿರುವ ಹಳೆ ಕಾಲದ ವಿದ್ಯುತ್ ದೀಪದ ಕಂಬಕ್ಕೆ ಹೊಸ ರೂಪನೀಡಲಾಗುತ್ತದೆ. ಈ ಕಂಬದ ಸುತ್ತಲಿನ ನೆಲವನ್ನು ಬಣ್ಣ ಬಣ್ಣದ ಗ್ರಾನೈಟ್‌ಗಳಿಂದ ವಿನ್ಯಾಸಗೊಳಿಸಲಾಗುವುದು. ಹಾಗೆಯೇ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ವಿದ್ಯುತ್ ದೀಪದಕಂಬಗಳು, ವಿವಿಧ ಅಲಂಕಾರಿಕ ಗಿಡಗಳನ್ನುಹಾಕಲಾಗುತ್ತದೆ. ಮಾರುಕಟ್ಟೆಗೆ ಹೊಂದಿ ಕೊಂಡಿರುವಹಳೆಯ ಬಾವಿಯನ್ನು ಸ್ವತ್ಛಗೊಳಿಸಿ, ನೀರಿನ ಪೂರೈಕೆ ಮಾಡುವ ಕಾರ್ಯ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.
83 ವರ್ಷದ ಹಳೆಯ ಮಾರುಕಟ್ಟೆ : ಸುಮಾರು 83 ವರ್ಷಗಳ ಇತಿಹಾಸವುಳ್ಳ ಈ ಕಟ್ಟಡ 1927ರಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ವಿವಿಧ ರೀತಿಯಹೂ, ಹಣ್ಣು, ತರಕಾರಿ, ಮಾಂಸ, ಮೀನು, ಆಟಿಕೆಅಂಗಡಿಗಳು ಸೇರಿದಂತೆ ಸುಮಾರು 481 ಮಳಿಗೆಗಳು ಇಲ್ಲಿವೆ.
ರಸೆಲ್ ಮಾರುಕಟ್ಟೆ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಕಾಮಗಾರಿ ಪ್ರಾರಂಭಿಸಲಾಗಿದೆ.ಕೊರೊನಾದಿಂದಾಗಿ ಕಾಮಗಾರಿತಡೆಯಾಗುತ್ತಿದ್ದು, ಈಗಾಗಲೇ ಶೇ.10ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. –ಪಿ.ರಾಜೇಂದ್ರ ಚೋಳನ್, ಬೆಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆ ಯೋಜನಾ ನಿರ್ದೇಶಕ
ಸ್ಮಾರ್ಟ್ ಸಿಟಿ ಯೋಜನೆಯಡಿ ರಸೆಲ್ ಮಾರುಕಟ್ಟೆ ಅಭಿವೃದ್ಧಿಯಾದರೆ ವ್ಯಾಪಾರ ಹೆಚ್ಚಾಗಲಿದೆ. ಸುವ್ಯವಸ್ಥಿತ ವಾಹನ ನಿಲುಗಡೆ ಹಾಗೂ ಸ್ವತ್ಛತೆಗೆ ಪ್ರಾಮಖ್ಯತೆ ನೀಡುವುದರಿಂದ ಹೆಚ್ಚು ಜನರು ಮಾರುಕಟ್ಟೆ ಬರುವ ಸಾಧ್ಯತೆಗಳಿವೆ. – ಜಾವೀಸೇಟ್, ಕಾರ್ಯದರ್ಶಿ, ರಸೆಲ್ ಮಾರುಕಟ್ಟೆ
– ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.