ಧೂಮಪಾನ ನಿಷೇಧ ಸ್ವಾಗತಿಸಿದ ನಾಗರಿಕರು
Team Udayavani, Nov 20, 2018, 12:06 PM IST
ಬೆಂಗಳೂರು: ಹೊಟೇಲ್, ಬಾರ್, ರೆಸ್ಟೊರೆಂಟ್, ಕ್ಲಬ್ ಹಾಗೂ ಪಬ್‌ಗಳಲ್ಲಿ ಸಂಪೂರ್ಣ ಧೂಮಪಾನ ನಿಷೇಧಿಸಲು ಮುಂದಾಗಿರುವ ರಾಜ್ಯ ಸರ್ಕಾರ ನಡೆಯನ್ನು ವೈದ್ಯರು, ಹೋಟೆಲ್ ಉದ್ಯಮ ವಲಯ ಸೇರಿದಂತೆ ನಗರದ ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ಧೂಮಪಾನದಿಂದ ಅಕ್ಕಪಕ್ಕದವರ(ಪ್ಯಾಸೀವ್ ಸ್ಮೋಕರ್)ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೊಗ್ಯ ರಕ್ಷಣೆ ಕಾಯ್ದೆ 2001 ರ ಪ್ರಕಾರ ಧೂಮಪಾನಕ್ಕೆ ನಿಷೇಧ ಹೇರಿ ಕಾನೂನು ಜಾರಿಗೊಳಿಸಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂ ಸಿದರೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದಿದ್ದಾರೆ.
ಸಚಿವ ತೆಗೆದುಕೊಂಡಿರುವ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಹಾಗೂ ತಿದ್ದುಪಡಿ ಮಾಡಲು ಮುಂದಾಗಬಾರದು ಎಂಬ ಕೋರಿಕೆಯ ಜತೆಗೆ ಶಾಶ್ವತವಾಗಿ ಸಿಗರೇಟ್ ಮಾರಾಟವನ್ನೇ ನಿಷೇಧಕ್ಕೆ ಸರ್ಕಾರ ಮುಂದಾಗಬೇಕಿತ್ತು ಎಂಬ ಎಂಬ ಸಲಹೆಯನ್ನು ಸಾರ್ವಜನಿಕ ವಲಯ ನೀಡಿದೆ.
ಕ್ಯಾನ್ಸರ್ ಪ್ರಮಾಣ ಕುಗ್ಗಿಸಲು ಉತ್ತಮ ನಡೆ: ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಿದ್ವಾಯಿ ಕ್ಯಾನ್ಸರ್ ಗಂಥಿ ಸಂಸ್ಥೆಯು ಮೆಚ್ಚುಗೆ ವ್ಯಕ್ತಪಡೆಸಿದೆ. ಶೇ.50 ರಷ್ಟು ಕ್ಯಾನ್ಸರ್‌ಗೆ ಧೂಮಪಾನವೇ ಮುಖ್ಯಕಾರಣ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲಿಯೇ ಶ್ವಾಸಕೋಶ, ಗಂಟಲು, ಬಾಯಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ. 27 ವರ್ಷದ ಯುವಕರು ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿರು ಪ್ರಕರಣಗಳಿವೆ. ಧೂಮಪಾನದಿಂದ ಅಕ್ಕಪಕ್ಕದವರ ಆರೋಗ್ಯದ ಮೇಲೆ ಹಾನಿ ಹೆಚ್ಚಾಗುತ್ತಿದೆ.
ಅದರಲ್ಲೂ ಪುರುಷರು ಮಾಡುವ ಧೂಮಪಾನದಿಂದ ಅವರ ಪತ್ನಿಗೆ ಬಾಯಿ ಹಾಗೂ ಶ್ವಾಸಕೋಶ ಕ್ಯಾನ್ಸರ್ ಬರುತ್ತಿದೆ. ಹೀಗಾಗಿ, ಧೂಮಪಾನ ನಿಷೇಧ ತೀರ್ಮಾನವನ್ನು ಕಿದ್ವಾಯಿ ಸಂಸ್ಥೆ ಸ್ವಾಗತಿಸುತ್ತದೆ. ಜತೆಗೆ ಗುಟ್ಕ ಮತ್ತು ತಂಬಾಕುನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸತ್ತೇನೆ ಎಂದು ಕಿದ್ವಾಯಿ ಕ್ಯಾನ್ಸರ್ ಗಂಥಿ ಸಂಸ್ಥೆ ನಿರ್ದೇಶಕ ರಾಮಚಂದ್ರ ತಿಳಿಸಿದರು.
ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಬಾರ್‌ಗಳಲ್ಲಿ ಸಿಗರೇಟ್ ಮಾರಾಟಕ್ಕೆ ಅವಕಾಶವಿಲ್ಲ. ಆದರೆ, ನಮ್ಮ ಗ್ರಾಹಕರು ಹೊರಗಿನಿಂದ ತಂದು ಸೇದಿದರೆ ನಾವು ವಿರೋಧಿಸಿ ಗ್ರಾಹಕರೊಡನೆ ಜಗಳ ಮಾಡಲಾಗದು. ಏಕಾಏಕಿ ಧೂಮಪಾನ ನಿಷೇಧ ಮಾಡಿರುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ.
ಒಂದು ಕಡೆ ಲಿಕ್ಕರ್ ಖರೀದಿ ಜಾಸ್ತಿ ಮಾಡಿ ಎಂದು ಒತ್ತಡ ಹಾಕುತ್ತಾರೆ. ಇನ್ನೊಂದೆಡೆ ಇಂತಹ ಕಾನೂನು ಜಾರಿ ಮಾಡುತ್ತಾರೆ. ಇದರ ಬದಲು ಸಿಗರೇಟ್ ಉತ್ಪಾದನೆ ಹಾಗೂ ಮಾರಾಟವನ್ನೇ ನಿಷೇಧಿಸಬಹುದಲ್ಲ ಎಂದು ರಾಜ್ಯ ಮದ್ಯಮಾರಾಟಗಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಜನರ ಆರೋಗ್ಯ ಮುಖ್ಯ. ನಾವು ಧೂಮಪಾನ ನಿಷೇಧದ ಪರವಾಗಿದ್ದೇವೆ. ಈಗಾಗಲೇ ನಮ್ಮ ಎಲ್ಲ ರೆಸ್ಟೋರೆಟ್, ಸಸ್ಯಹಾರಿ – ಮಾಂಸಹಾರಿ ಹೋಟೆಲ್, ದರ್ಶಿನಿ, ಬೇಕರಿಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಗರೇಟ್ ನಿಷೇಧಿಸಿದರೆ ಉತ್ತಮ.
-ಚಂದ್ರಶೇಖರ್ ಹೆಬ್ಟಾರ್, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.