ಬಾರ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧ
Team Udayavani, Aug 30, 2018, 12:36 PM IST
ಬೆಂಗಳೂರು: ಸಾರ್ವಜನಿಕ ಸ್ಥಳಗಳು, ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸಬೇಕೆಂದು ಬಿಬಿಎಂಪಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರ ಆರೋಗ್ಯದ ಹೆಚ್ಚಿನ ಪರಿಣಾಮ ಬೀರುತ್ತಿರುವುದು “ಜಾಗತಿಕ ವಯಸ್ಕ ತಂಬಾಕು ಸರ್ವೆ-2′ (ಜಿಎಟಿಎಸ್) ರಿಂದ ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು, ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧಿಸಬೇಕೆಂಬ ಆದೇಶ ಹೊರಡಿಸಲಾಗಿದೆ.
ಪರೋಕ್ಷ ಧೂಮಪಾನದಿಂದ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಪರಿಣಾಮ ತಡೆಯುವ ಉದ್ದೇಶದಿಂದ ಪ್ರತಿಯೊಂದು 30ಕ್ಕಿಂತ ಹೆಚ್ಚಿನ ಆಸನಗಳಿರುವ ಬಾರ್ ಹಾಗೂ ರೆಸ್ಟೋರೆಂಟ್, ಹೋಟೆಲ್, ಪಬ್ ಹಾಗೂ ಕ್ಲಬ್‌ಗಳಲ್ಲಿ “ಧೂಮಪಾನ ಪ್ರದೇಶ’ ನಿರ್ಮಿಸಲು ಅವಕಾಶ ನೀಡಲಾಗಿದೆ. ಇಂತಹ ಪ್ರದೇಶ ನಿರ್ಮಾಣ ವೇಳೆ ಕೆಲವೊಂದು ನಿಯಮಗಳನ್ನು ಸಹ ಅನುಸರಿಸುವುದು ಕಡ್ಡಾಯವಾಗಿದೆ.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ -2003 (ಕೋಟಾ³) ಪ್ರಕಾರ ಧೂಮಪಾನ ಪ್ರದೇಶಕ್ಕೆ ಅಪ್ರಾಪ್ತರಿಗೆ ಹಾಗೂ ಧೂಮಪಾನ ಮಾಡದವರಿಗೆ ಪ್ರವೇಶ ನೀಡಬಾರದು. ಜತೆಗೆ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ-ಕಾಫಿ ಇತ್ಯಾದಿ ತಿಂಡಿ ಪದಾರ್ಥಗಳನ್ನು ಸರಬರಾಜು ಅಥವಾ ಸೇವೆ ನೀಡಬಾರದು ಎಂದು ನಿಯಮ ವಿಧಿಸಲಾಗಿದೆ.
ಇದರೊಂದಿಗೆ ಧೂಮಪಾನ ಪ್ರದೇಶದಲ್ಲಿ ಕುರ್ಚಿ ಅಥವಾ ಟೇಬಲ್, ಬೆಂಕಿ ಪೊಟ್ಟಣ, ಆಶ್‌ಟ್ರೇ ಇತ್ಯಾದಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಬಾರದು. ಜತೆಗೆ ಇಂತಹ ಪ್ರದೇಶ ನಿರ್ಮಿಸಲು ಪಾಲಿಕೆಯ ತಂಬಾಕು ನಿಯಂತ್ರಣ ಕೋಶದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ ಎಂದು ಆಯುಕ್ತರ ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ನಿಯಮ ಉಲ್ಲಂ ಸಿದರೆ ಲೈಸೆನ್ಸ್ ರದ್ದು: ಕರ್ನಾಟಕದ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳು (ಕೆಎಸ್‌ಎಫ್ಇಎಸ್) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದರಿಂದ ಬೆಂಕಿ ಅವಘಡಗಳಿಂದ ಸಾರ್ವಜನಿಕರಿಂದ ಎಂದು ತಿಳಿಸಿದೆ.
ಹೀಗಾಗಿ ಬಾರ್, ರೆಸ್ಟೋರೆಂಟ್, ಹೋಟೆಲ್, ಪಬ್ ಹಾಗೂ ಕ್ಲಬ್‌ಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶವನ್ನು ಸ್ಥಾಪಿಸದಿದ್ದರೆ ಅಂತಹ ಉದ್ದಿಮೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದ್ದು, ಅಂತಹವರ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಆದೇಶ ಹೊರಡಲಾಗಿದೆ.
ತಿಂಗಳಿಗೆ ಸಿಗರೇಟ್‌ಗಾಗಿ 1,802 ರೂ. ವೆಚ್ಚ: ರಾಜ್ಯದಲ್ಲಿ ನಿತ್ಯ ಸಿಗರೇಟ್ ಸೇದುವವರು ಪ್ರತಿ ತಿಂಗಳು ಸರಾಸರಿ 1,802 ರೂ.ಗಳನ್ನು ಖರ್ಚು ಮಾಡುತ್ತಿರುವುದು ವರದಿಯಿಂದ ತಿಳಿದುಬಂದಿದೆ. ಈ ಹಿಂದೆ 2009-10ರಲ್ಲಿ ಧೂಮಪಾನಿಗಳು ಪ್ರತಿ ತಿಂಗಳು 642 ರೂ. ಮಾತ್ರ ವ್ಯಯಿಸುತ್ತಿದ್ದರು ಎಂಬ ಅಂಶ ವರದಿಯಲ್ಲಿ ಉಲ್ಲೇಖೀಸಲಾಗಿದೆ. ನಿತ್ಯ ಬೀಡಿ ಸೇದುವವರು ಮಾಸಿಕ 352 ರೂ. ಖರ್ಚು ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಾಗತಿಕ ವಯಸ್ಕ ತಂಬಾಕು ಸರ್ವೆ-2ಯ ಪ್ರಮುಖ ಅಂಶಗಳು
* ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಪ್ರಮಾಣ ಶೇ.23.9
* ಹೋಟೆಲ್, ಬಾರ್, ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ನಿಯಮ ಸಂಪೂರ್ಣ ಉಲ್ಲಂಘನೆ
* ಧೂಮಪಾನದಿಂದ ಪರೋಕ್ಷವಾಗಿ ಶೇ.60ರಷ್ಟು ಜನರಿಗೆ ತೊಂದರೆ
* ಶಾಲೆಗಳಿಂದ 100 ಮೀಟರ್‌ನಲ್ಲಿ ತಂಬಾಕು ಪದಾರ್ಥ ಮಾರಾಟ ನಿಷೇಧ
* ವಿಶ್ವದಾದ್ಯಂತ 13.5 ಲಕ್ಷ ಜನರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ
ಅಂಕಿ-ಅಂಶಗಳು
– 35 ಲಕ್ಷ – ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ ತಂಬಾಕು ತ್ಯಾಜಿಸಿದವರ ಸಂಖ್ಯೆ
– 1.50 ಕೋಟಿ – ರಾಜ್ಯದಲ್ಲಿ ತಂಬಾಕು ಉತ್ಪನ್ನ ಬಳಸುವವರ ಸಂಖ್ಯೆ
– 10 ಲಕ್ಷ – ದೇಶದಲ್ಲಿ ತಂಬಾಕು ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆ
ಪರೋಕ್ಷ ಧೂಮಪಾನದ ಪರಿಣಾಮ ಪಡೆಯುವ ಉದ್ದೇಶದಿಂದ ಪಾಲಿಕೆಯಲ್ಲಿ ತಂಬಾಕು ನಿಯಂತ್ರಣ ಕೋಶ ಆರಂಭಿಸಲಾಗಿದೆ. ಜತೆಗೆ ಕಳೆದ ವರ್ಷ ಅನಧಿಕೃತ ಧೂಮಪಾನ ಪ್ರದೇಶಗಳನ್ನು ತೆರವುಗೊಳಿಸಲಾಗಿತ್ತು. ಮುಂದಿನ ದಿನಗಳಲ್ಲಿ ಧೂಮಪಾನ ಪ್ರದೇಶ ನಿರ್ಮಿಸುವವರು ಕಡ್ಡಾಯವಾಗಿ ಪಾಲಿಕೆಯ ಕೋಶದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.