ಕೆಲವೊಂದು ದಾಖಲೆಗಳು; ಒಂದಿಷ್ಟು ವಿಶೇಷಗಳು
Team Udayavani, Nov 8, 2018, 6:20 AM IST
ಬೆಂಗಳೂರು: ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಾಗ ರಾಜಕೀಯ ಪಕ್ಷಗಳು ಸೇರಿ ನಾಲ್ಕಾರು ತಿಂಗಳ ಅವಧಿಗೆ “ಈ ಚುನಾವಣೆ ಬೇಕಿರಲಿಲ್ಲ’ ಎಂದು ಹೇಳಿದವರೇ ಹೆಚ್ಚು.
ಆದರೆ, ಚುನಾವಣೆಯ ಫಲಿತಾಂಶ ಎಲ್ಲ ಲೆಕ್ಕಚಾರಗಳನ್ನೂ ತಲೆಕೆಳಗೆ ಮಾಡಿಬಿಟ್ಟಿತು.ಇದೇ ವೇಳೆ ಈ ಉಪ ಚುನಾವಣೆ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.
ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳು ದಾಖಲೆ ಅಂತರದ ಗೆಲುವು ಕಂಡಿದ್ದರೆ,ಶಿವಮೊಗ್ಗ ಲೋಕಸಭಾ ಕ್ಷೇತ್ರ ದಾಖಲೆ ಅಂತರದ ಸೋಲಿಗೆ ಸಾಕ್ಷಿಯಾಯಿತು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈವರೆಗಿನ ಅತಿ ಹೆಚ್ಚು ಅಂತರದ ದಾಖಲೆ 1977ರ ಲೋಕಸಭಾ ಚುನಾವಣೆಯಲ್ಲಿ 1,45,544 ಆಗಿತ್ತು. ಇದೀಗ 40 ವರ್ಷಗಳ ದಾಖಲೆ ಹಿಂದಿಕ್ಕಿರುವ ಉಗ್ರಪ್ಪ 2,28,255 ಮತಗಳ ದಾಖಲೆ ಅಂತರದಿಂದ ಗೆದ್ದಿದ್ದಾರೆ.
ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 1998ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಂಬರೀಷ್ 1,80,523 ಮತಗಳ ಅಂತರದಿಂದ ಗೆದ್ದಿದ್ದು, ಈವರೆಗಿನ ದಾಖಲೆಯಾಗಿತ್ತು.ಇದೀಗ ಎಲ್.ಆರ್. ಶಿವರಾಮೇಗೌಡರು 2,89,371 ಮತಗಳ ಅಂತರದಿಂದ ಗೆದ್ದು ಹಿಂದಿನ ದಾಖಲೆ ಮುರಿದಿದ್ದಾರೆ.
ಹಾಗೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಈ ಉಪ ಚುನಾವಣೆ ಭಾರೀ ಕಡಿಮೆ ಅಂತರದ ಸೋಲಿನ ದಾಖಲೆ ಬರೆದಿದೆ. 2009ರಲ್ಲಿ ಬಿ.ವೈ. ರಾಘವೇಂದ್ರ 54,893 ಮತಗಳ ಅಂತರದಿಂದ ಎಸ್. ಬಂಗಾರಪ್ಪ ವಿರುದಟಛಿ ಗೆದ್ದಿದ್ದು, ಇದೀಗ ಬಂಗಾರಪ್ಪ ಪುತ್ರನ ವಿರುದಟಛಿವೂ 52,148 ಮತಗಳ ಅಂತರದಿಂದ ಗೆಲ್ಲುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಈವರೆಗಿನ ಇತಿಹಾಸದ ಕಡಿಮೆ ಅಂತರದ ಗೆಲವಿನ ದಾಖಲೆ ಬರೆದಿದ್ದಾರೆ.
ಇದು ಮೂವರು ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶೇಷತೆ. 1967ರಲ್ಲಿ ಜೆ.ಎಚ್. ಪಟೇಲರು ಈ ಕ್ಷೇತ್ರದಿಂದ ಆಯ್ಕೆಯಾಗಿ, ಸಂಸತ್ತಿನಲ್ಲಿ ಕನ್ನಡ ಭಾಷಣ ಮಾಡಿದ ಮೊದಲಿಗರು ಎಂಬ ಖ್ಯಾತಿ ಗಳಿಸಿದರು. ಅದೇ ರೀತಿ ಎಸ್. ಬಂಗಾರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿ ಮೂವರು ಮಹಿಳೆಯರು ಪ್ರತಿನಿಧಿಸಿದ್ದು ಬಳ್ಳಾರಿ ಲೋಕಸಭಾ ಕ್ಷೇತ್ರದ
ಹಿರಿಮೆಯಾಗಿದೆ. 1999ರಲ್ಲಿ ಸೋನಿಯಾಗಾಂಧಿ ಈ ಕ್ಷೇತ್ರದಿಂದ ಗೆದ್ದಿದ್ದರು. ಅದೇ ರೀತಿ ಬಸವರಾಜೇಶ್ವರಿ ಹಾಗೂ ಜೆ. ಶಾಂತ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ ಇನ್ನಿಬ್ಬರು ಮಹಿಳೆಯರಾಗಿದ್ದಾರೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು 1980ರಲ್ಲಿ ಪ್ರತಿನಿಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.