ಸ್ಪೀಕ್ ಫಾರ್ ಕಲಾಂ ಭಾಷಣ ಸ್ಪರ್ಧೆ
Team Udayavani, Nov 11, 2018, 12:18 PM IST
ಬೆಂಗಳೂರು: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕನಸಿನಂತೆ ಪ್ರಪಂಚದ ಭವಿಷ್ಯವನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ದಿ ಹಿಂದು ಗ್ರೂಪ್ ಉತ್ತಮ ಅವಕಾಶವೊಂದನ್ನು ಕಲ್ಪಿಸಿದೆ.
9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ “ಸ್ಪೀಕ್ ಫಾರ್ ಕಲಾಂ’ ಎಂಬ ಭಾಷಣ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು, ಪ್ರಪಂಚದ ಭವಿಷ್ಯ ಬದಲಿಸುವ ನಿಟ್ಟಿನಲ್ಲಿ ತಮ್ಮಲ್ಲಿರುವ ಆಲೋಚನೆಗಳನ್ನು ಬಿಚ್ಚಿಡಬಹುದಾಗಿದ್ದು, ಆಸಕ್ತಿಯುಳ್ಳ ಶಾಲಾ ಕಾಲೇಜುಗಳು ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ದಿ ಹಿಂದು ಗ್ರೂಪ್ ಆಯೋಜಿಸುತ್ತಿರುವ ಭಾಷಣ ಸ್ಪರ್ಧೆಯಲ್ಲಿ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಜ್ಯೂನಿಯರ್ ವಿಭಾಗದಲ್ಲಿ ಹಾಗೂ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ನ 2ನೇ ವಾರದಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ನ.23ರಂದು ಅಂತಿಮ ಸ್ಪರ್ಧೆ ನಡೆಯಲಿದೆ.
ಎರಡೂ ವಿಭಾಗಗಳ ಮೊದಲ ಮೂರು ವಿಜೇತರಿಗೆ ಬೈಜುಸ್ ಲರ್ನಿಂಗ್ ಅಪ್ಲಿಕೇಷನ್ ವತಿಯಿಂದ ಟ್ಯಾಬ್‌ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಸ್ಪರ್ಧೆಗಳಿಗೆ ಬೈಜುಸ್, ಕೆಎಂಎಫ್ ನಂದಿನಿ, ಎಂಎಸ್‌ಐಎಲ್ ವಿದ್ಯಾ ಹಾಗೂ ಲೇಖಕ್ ಸಹ ಪ್ರಾಯೋಜಕತ್ವ ವಹಿಸಲಿವೆ. ಮಾಹಿತಿಗೆ 9742345039/8970636149 ಹಾಗೂ ಟ್ರೇಡ್ ಎನ್‌ಕ್ವೆ$çರಿಗಳಿಗಾಗಿ 9880416613 (ರಘುನಂದನ್), 9845529981 (ಗುರುನಾಥ ರೆಡ್ಡಿ) ಸಂಪರ್ಕಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.