ಶೀಘ್ರ ಕಾಮಗಾರಿ ಪೂರ್ಣಕ್ಕೆ ತಾಕೀತು: ಅಧಿಕಾರಿಗಳ ಜತೆ ಗೌರವ್‌ ಗುಪ್ತ ಮಾತುಕತೆ

ಸಂಗೊಳ್ಳಿರಾಯಣ್ಣ ಪ್ರತಿಮೆ, ಸ್ಟೀಲ್‌ ಬ್ರಿಡ್ಜ್, ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

Team Udayavani, Aug 13, 2021, 2:29 PM IST

ಶೀಘ್ರ ಕಾಮಗಾರಿ ಪೂರ್ಣಕ್ಕೆ ತಾಕೀತು: ಅಧಿಕಾರಿಗಳ ಜತೆ ಗೌರವ್‌ ಗುಪ್ತ ಮಾತುಕತೆ

ಬೆಂಗಳೂರು: ನಗರದ ವಿವಿಧೆಡೆ ನಡೆಯುತ್ತಿರುವ ಪ್ರತಿಮೆ, ಮೇಲ್ಸೆತುವೆ, ರಸ್ತೆ ಕಾಮಗಾರಿಯ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯ ಬಳಿ ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ವೃತ್ತದಲ್ಲಿರುವ ಕಿರು ಉದ್ಯಾನದ ಸುತ್ತಲು ಅಳವಡಿಸಿರುವ ಕಂಬಗಳು ಹಳೆಯದಾಗಿದ್ದು, ಇನ್ನು ಕೆಲವು ಹಾಳಾಗಿವೆ. ಅದನ್ನೆಲ್ಲಾ ದುರಸ್ತಿಪಡಿಸಿ. ಅಲ್ಲದೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬೃಹತ್‌ ವಿದ್ಯುತ್‌ ಕಂಬದಲ್ಲಿರುವ ಎಲ್ಲಾ ದೀಪಗಳನ್ನು ಸರಿಪಡಿಸಲು ಸೂಚಿಸಿದ ಅವರು , ರಸ್ತೆಗೆ ಡಾಂಬರೀಕರಣ ಮಾಡಿ ಲೈನ್‌ ಮಾರ್ಕಿಂಗ್‌ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಓಕಳಿಪುರ ಅಷ್ಟಪಥಕಾರಿಡಾರ್‌ ಬಳಿ ತುಮಕೂರು ಕಡೆಗೆ ಹೋಗುವ ರೈಲ್ವೆ ಟ್ರಾಕ್‌ ಅಡಿ ರೈಲ್ವೆ ಇಲಾಖೆ ವತಿಯಿಂದ ಬಾಕ್ಸ್‌ ಪುಶಿಂಗ್‌ ಕಾಮಗಾರಿ
ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ
ಸೂಚಿಸಿದರು.

ಚೆನ್ನೈ ಕಡೆ ಹೋಗುವ ರೈಲ್ವೆ ಹಳಿ ಕೆಳಗೆ ಎರಡು ಬಾಕ್ಸ್‌ ಬರಲಿದ್ದು, ರೈಲ್ವೆ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದೆ. ರಸ್ತೆ ಬದಿ ಭಗ್ನಾವೇಶಗಳು ಬಿದ್ದಿರುವುದನ್ನು ತೆರವುಗೊಳಿಸಲು ಹೇಳಿದರು.ವಾಹನ ಸಂಚಾರಕ್ಕೆ ಬಳಕೆಯಾಗದಿರುವ ರಸ್ತೆಯನ್ನು ಕೂಡಲೆ ವಾಹನ ಸಚಾರ ಓಡಾಟಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ:ಶಾಲಾ, ಕಾಲೇಜು ಪುನರಾರಂಭ: ಟಾಸ್ಕ್ ಫೋರ್ಸ್ ಆಕ್ಷೇಪ, ಮಹಾ ಸರ್ಕಾರ ಯೂ ಟರ್ನ್

ವೈ ಜಂಕ್ಷನ್‌ ಭೇಟಿ: ಬೆಂಗಳೂರು ಹಳೇ ಮೈಸೂರು ರಸ್ತೆ(ಮಾಗಡಿ ರಸ್ತೆ) ಹಾಗೂ ವಾಟಾಳ್‌ ನಾಗರಾಜ್‌ ರಸ್ತೆ (ಸುಜಾತ ಟಾಕೀಸ್‌) ವೈ ಜಂಕ್ಷನ್‌ ನಲ್ಲಿ ಗ್ರೇಡ್‌ ಸೆಪರೇಟರ್‌ ಯೋಜನೆಯು 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರವು ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅನುದಾನದಲ್ಲಿ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತರು ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೈ ಜಂಕ್ಷನ್‌ ವಾಟಾಳ್‌ ನಾಗರಾಜ್‌ ರಸ್ತೆಯು ತುಮಕೂರು ರಸ್ತೆ ಮತ್ತು ಡಾ. ರಾಜ್‌ಕುಮಾರ್‌ ರಸ್ತೆಗೆ ಲಿಂಕ್‌ ರಸ್ತೆಯಾಗಿದ್ದು, ಇದು ಹೊರ ಪ್ರದೇಶಕ್ಕೆ ಹೋಗುವ ಪ್ರಮುಖ ರಸ್ತೆಯಾಗಿರುತ್ತದೆ. ಮೆಜೆಸ್ಟಿಕ್‌ ಮತ್ತು ರಾಜಾಜಿನಗರ ಕಡೆಯಿಂದ ಬರುವ ವಾಹನಗಳು ಸದರಿ ಜಂಕ್ಷನ್‌ ನಲ್ಲಿ ಹಾಲಿ ಸಿಗ್ನಲ್‌ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನ ದಟ್ಟಣೆಯನ್ನು ನಿವಾರಿಸಲು ವಾಟಾಳ್‌ ನಾಗರಾಜ್‌ ರಸ್ತೆ ಮತ್ತು ಮಾಗಡಿ ಡಿವೈಷನ್‌ ರಸ್ತೆ(ಹಳೇ ಮೈಸೂರು ರಸ್ತೆ) ವೈ ಜಂಕ್ಷನ್‌ ನಲ್ಲಿ ಮೆಜೆಸ್ಟಿಕ್‌ ಮತ್ತು ರಾಜಾಜಿನಗರ ಕಡೆ ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.67 ಕಾಮಗಾರಿ ಮುಗಿದಿದೆ. ಕೆಳಸೇತುವೆ ಕಾಮಗಾರಿ ಪುರ್ಣಗೊಂಡ ಬಳಿಕ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ
ಅನುಮಾಡಿ ಮೇಲುಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ

ಶಿವಾನಂದ ವೃತ್ತ ಮೇಲುಸೇತುವೆ ಪರಿಶೀಲನೆ
ನಗರದ ಶಿವಾನಂದ ವೃತ್ತದಲ್ಲಿ ನಡೆಯುತ್ತಿರುವ ಮೇಲು ಸೇತುವೆ ಕಾಮಗಾರಿಯನ್ನು ಮುಖ್ಯ ಆಯುಕ್ತ ಗೌರವ್‌ ಗುಪ್ತ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರವರು ಗುರುವಾರ ಜಂಟಿ ಪರಿಶೀಲನೆ ನಡೆಸಿದರು. ಈ ಸ್ಥಳದಲ್ಲಿ ಮೇಲುಸೇತುವೆ ಕಾಮಗಾರಿಗೆ579 ಚ.ಮೀ
ಭೂಸ್ವಾಧೀನವಾಗಬೇಕಿದ್ದು, ಅದನ್ನುಕೂಡಲೆ ಇತ್ಯರ್ಥಪಡಿಸಲು ಮುಖ್ಯ ಆಯುಕ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಇರ್ತಥ್ಯಪಡಿಸಿಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಿವಾನಂದ ವೃತ್ತದಲ್ಲಿ ನಡೆಯುತ್ತಿ ರುವ ಮೇಲುಸೇತುವೆಯ ರ್‍ಯಾಂಪ್‌ ಕೆಲಸ ಹಾಗೂ ತಡೆಗೋಡೆಯ ಕಾಮಗಾರಿ ಬಾಕಿ ಯಿದ್ದು, ಭೂಸ್ವಾಧೀನ ಪಡೆಸಿಕೊಳ್ಳಬೇಕಿರುವ ಸ್ಥಳ ವನ್ನು
ತ್ವರಿತವಾಗಿ ಸ್ವಾಧೀನ ಪಡಿಸಿಕೊಂಡು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಂಗೇರಿ ಮೆಟ್ರೋ ಮಾರ್ಗ ಪರಿಶೀಲನೆ ಪೂರ್ಣ
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮೈಸೂರು ರಸ್ತೆ-ಕೆಂಗೇರಿ ನಡುವಿನ ವಿಸ್ತರಿಸಿದ ಮಾರ್ಗದ ಪರಿಶೀಲನೆಯನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್‌)ರ ತಂಡ ಗುರುವಾರ ಪೂರ್ಣಗೊಳಿಸಿದೆ. 7.53ಕಿ.ಮೀ. ಮಾರ್ಗ ಹಾಗೂ ಅದರಲ್ಲಿ ಬರುವ ಎಲ್ಲ ಆರು ನಿಲ್ದಾಣಗಳ ಭೌತಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಎರಡು ದಿನಗಳು ಸುದೀರ್ಘ‌ ಪರಿಶೀಲನೆ ನಡೆಸಿದ ತಂಡ, ಹಲವು ಮಾಹಿತಿಗಳನ್ನು ದಾಖಲಿಸಿಕೊಂಡಿತು. ಸಿಗ್ನಲಿಂಗ್‌ ವ್ಯವಸ್ಥೆ, ಹಳಿ, ರೈಲುಕಾರ್ಯಾಚರಣೆ, ತುರ್ತು ನಿರ್ಗಮನ, ರೈಲು ಮತ್ತು ನಿಲ್ದಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನುಕೂಲಂಕಷವಾಗಿ ತಪಾಸಣೆ ನಡೆಸಿತು.

ಮುಂದಿನ10-15 ದಿನಗಳಲ್ಲಿ ಸಿಎಂಆರ್‌ಎಸ್‌ ತನ್ನ ವರದಿಯೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ಕ್ಕೆ ಪ್ರತಿಕ್ರಿಯೆ ನೀಡಲಿದೆ. ಎಲ್ಲವೂ ಸರಿಯಾಗಿದ್ದರೆ, ಸಾರ್ವಜನಿಕ ಸೇವೆ ಆರಂಭಿಸಲು ಅನುಮತಿಯೂ ದೊರೆಯಲಿದೆ. ಈ ಮಧ್ಯೆ ಕೊರೊನಾ ಮೂರನೇ ಅಲೆ ಮುನ್ಸೂಚನೆ ಇದ್ದು, ರಾತ್ರಿ ಕರ್ಫ್ಯೂ ಜಾರಿ ಬಗ್ಗೆಯೂ ಚರ್ಚೆಗಳು ನಡೆದಿವೆ. ಆದ್ದರಿಂದ ಮತ್ತೆ ಕೋವಿಡ್‌ ಹಾವಳಿ ಶುರುವಾಗುವ
ಮುನ್ನವೇ ಕೆಂಗೇರಿ ಮಾರ್ಗವನ್ನು ಲೋಕಾರ್ಪಣೆ ಮಾಡುವ ಉದ್ದೇಶ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

2-kambala

Moodbidri: ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆ: ನಿಯಮ ಉಲ್ಲಂಘಿಸಿದರೆ ನಿಷೇಧ

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.