ರಾಷ್ಟ್ರಗೀತೆಗೆ ಮುನ್ನವೇ ಹೊರ ನಡೆದ ಸ್ಪೀಕರ್
Team Udayavani, May 20, 2018, 7:00 AM IST
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಯಡಿಯೂರಪ್ಪ ಹೇಳಿ ಮಾತು
ಮುಗಿಸುತ್ತಿದ್ದಂತೆ ಸ್ಪೀಕರ್ ಸ್ಥಾನದಲ್ಲಿದ್ದ ಕೆ.ಜಿ.ಬೋಪಯ್ಯ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿ ಎದ್ದು
ಹೊರಟರು.
ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದಿಂದ ಹೊರನಡೆಯಲಾರಂಭಿಸಿದರು. ಅಷ್ಟರಲ್ಲಿ ರಾಷ್ಟ್ರಗೀತೆ ನುಡಿಸಲಾಯಿತಾದರೂ ಗದ್ದಲದಲ್ಲಿ ಸರಿಯಾಗಿ ಕೇಳಿಸಲಿಲ್ಲ. ಬಿಎಸ್‌ವೈ ಸೇರಿ ಅರ್ಧದಷ್ಟು ಬಿಜೆಪಿ ಸದಸ್ಯರು ಹೊರನಡೆದರು. ಈ ಮಧ್ಯೆ ರಾಷ್ಟ್ರಗೀತೆ ಹಾಡಲಾಗುತ್ತಿದೆ. ಎಲ್ಲರೂ ಎದ್ದುನಿಂತು ಗೌರವ ಸೂಚಿಸಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಹೇಳುತ್ತಿದ್ದರೂ ಕೇಳುವ ವ್ಯವಧಾನ ತೋರಲಿಲ್ಲ.
ಇದರಿಂದ ಅಸಮಾಧಾನಗೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು, ರಾಷ್ಟ್ರಗೀತೆ ಹಾಡುತ್ತಿರುವಾಗ ಸ್ಪೀಕರ್ ಹೋಗಿದ್ದಾರೆ. ಅವರನ್ನು ವಾಪಸ್ ಕರೆಯಿಸಿ ಎಂದು ದಂಡನಾಯಕರನ್ನು ಒತ್ತಾಯಿಸಿದರು. ಅಷ್ಟರಲ್ಲಿ ಒಂದು ಬಾರಿ ರಾಷ್ಟ್ರಗೀತೆ ಮುಗಿದಿತ್ತು. ಒಳಗೆ ಹೋದ ದಂಡನಾಯಕರು ಸ್ಪೀಕರ್ ಅವರನ್ನು ವಾಪಸ್ ಕರೆತರುತ್ತಿದ್ದಾರೆ ಎಂದಾಗ ಎರಡನೇ ಬಾರಿ ರಾಷ್ಟ್ರಗೀತೆ ಹಾಡಲಾಯಿತು. ಆದರೆ, ಅಷ್ಟರಲ್ಲಿ ಸ್ಪೀಕರ್ ತಮ್ಮ ಸ್ಥಾನಕ್ಕೆ ತಲುಪಲು ಸಾಧ್ಯವಾಗದೆ ಸ್ಪೀಕರ್ ಕುರ್ಚಿಯ ಹಿಂದೆ ನಿಂತು ಗೌರವ ಸಲ್ಲಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.