ದ.ಆಫ್ರಿಕಾದವರ ಮೇಲೆ ವಿಶೇಷ ನಿಗಾ..!
Team Udayavani, Dec 5, 2021, 9:44 AM IST
ಬೆಂಗಳೂರು: ಒಮಿಕ್ರಾನ್ ರೂಪಾಂತರ ವೈರಾಣುವಿನ ಮೇಲೆ ಎಚ್ಚರಿಕೆ ವಹಿಸಲಾಗಿದ್ದು ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬರುವವರ ಮೇಲೆ ವಿಶೇಷ ನಿಗಾವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಲದೆ ನವೆಂಬರ್ ಮೊದಲ ವಾರದಿಂದ ಆಫ್ರಿಕಾದಿಂದ ಬಂದಿರುವ ವ್ಯಕ್ತಿಗಳ ಗುರುತನ್ನು ಕೂಡ ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದರು. ನವೆಂಬರ್ ಮೊದಲ ವಾರದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಯಾವುದೇ ನಿರ್ಬಂಧನೆಗಳು ಇರಲಿಲ್ಲ.
ಆದರೆ, 10 ದಿನಗಳಿಂದ ಕಠಿಣ ಕ್ರಮಕೈಗೊಳ್ಳಲಾಗಿದೆ. ಹೀಗಾಗಿಯೇ ನ. 1ರಿಂದ ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು. ದಕ್ಷಿಣ ಆಫ್ರಿಕಾದಿಂದ ಬಂದವರ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದವರನ್ನು ಜಿನೋಮಿಕ್ ಸ್ವೀಕೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಇದುವರೆಗೆ ಮೂವರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಒಬ್ಬರಿಗೆ ಡೆಲ್ಟಾ ಸೋಂಕು ಮತ್ತು ಮತ್ತೂಬ್ಬರಿಗೆ ಒಮಿಕ್ರಾನ್ ಪತ್ತೆಯಾಗಿದೆ. ಪಾಸಿಟಿವ್ ಬಂದಿರುವ ಇನ್ನೊಬ್ಬರ ಗಂಟಲು ದ್ರವವನ್ನು ಜಿನೋಮಿಕ್ ಸ್ವೀಕೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದರು. ಟ್ರಾವಲ್ ಹಿಸ್ಟರಿ ಇಲ್ಲದವರನ್ನು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಬಂದಿರುವ ಪತ್ತೆ ಕಾರ್ಯ ಮಾಡಲಾಗಿದೆ.
ಇದನ್ನೂ ಓದಿ;-ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್
ಒಮಿಕ್ರಾನ್ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಅಂದಾಜು 200 ಮಂದಿಯನ್ನು ಗುರುತಿಸಲಾಗಿದೆ. ಅವರನ್ನು ಪರೀಕ್ಷೆ ಮಾಡಲಾಗುತ್ತಿದೆ. 10 ದಿನಗಳಿಂದ ಒಮಿಕ್ರಾನ್ ಪತ್ತೆ ಕಾರ್ಯ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.
ಶೇ.66 ಮಂದಿಗೆ 2ನೇ ಡೋಸ್: ಇತ್ತೀಚೆಗೆ ಪಾಲಿಕೆ ವ್ಯಾಪ್ತಿಯಲ್ಲಿ 2ನೇ ಲಸಿಕೆ ಪಡೆಯುವವರ ಸಂಖ್ಯೆ ದ್ವಿಗುಣಗೊಳಿಸಲಾಗಿದೆ. ಈ ಪ್ರತಿ ನಿತ್ಯ 30-35 ಮಂದಿ ಲಸಿಕೆ ಪಡೆಯುತ್ತಿದ್ದರು. ಆಫ್ರಿಕಾ ರಾಷ್ಟ್ರಗಳಲ್ಲಿ ಒಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾದ ನಂತರ ಇದೀಗ ಪ್ರತಿ ನಿತ್ಯ 70 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತದೆ ಎಂದು ಆಯುಕ್ತರು ಹೇಳಿದರು.
ಈಗಾಗಲೇ ಶೇ.90 ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಶೇ.66 ಮಂದಿ 2ನೇ ಡೋಸ್ ಪಡೆದಿದ್ದು, ಮುಂದಿನ ದಿನಗಳಲ್ಲಿ ಶೇ.80 ಮಂದಿ 2ನೇ ಡೋಸ್ ಪಡೆಯಲು ಕ್ರಮಕೈಗೊಳ್ಳಲಾಗುವುದು ಎಂದರು.
ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ತೀರ್ಮಾನ: ಬೂಸ್ಟರ್ ಡೋಸ್ ನೀಡುವ ಬಗ್ಗೆ ಈಗಾ ಗಲೇ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಕೇಂದ್ರದ ಅನು ಮತಿಯಿಲ್ಲದೆ ಬೂಸ್ಟರ್ ಡೋಸ್ ನೀಡು ವುದು ಅಸಾಧ್ಯ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತ ಹೇಳಿದರು.
ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಸಲಹೆ ಬಂದಿದೆ. ಈ ಬಗ್ಗೆ ನಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುತ್ತೇವೆ 2 ಡೋಸ್ ಪಡೆಯದಿರುವವರಿಗೆ ಸಾರ್ವಜನಿಕ ಪ್ರದೇಶಗಳ ಓಡಾಟಕ್ಕೆ ನಿರ್ಬಂಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ. ಈಗಾಗಲೇ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಲಾಗುವುದು ಎಂದರು.
ದಂಡ ರೂಪದಲ್ಲಿ ಲಕ್ಷಾಂತರ ರೂ. ಹಣ ಪಾಲಿಕೆಗೆ: ಓಮಿಕ್ರಾನ್ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಸಾರ್ವನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವವರ ಮೇಲೆ ಮಾರ್ಷಲ್‌ಗಳು ದಂಡ ಹಾಕುತ್ತಿದ್ದು ಕೇವಲ ಮೂರು ದಿನಗಳಲ್ಲಿ ಪಾಲಿಕೆಗೆ ಸುಮಾರು 6 ಲಕ್ಷ ರೂ.ಹಣ ಸಂಗ್ರಹವಾಗಿದೆ.
ಮಾಸ್ಕ್ ಹಾಕದೇ ಓಡಾಡುತ್ತಿದ್ದವರಿಂದ 5,32,250 ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ 28 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಇದುವರೆಗೆ ಪಾಲಿಕೆ ಬರೋಬ್ಬರಿ 14,80,96,211 ರೂ. ಗಳನ್ನು ವಸೂಲಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.