ವಿಷ್ಣು ಸ್ಮಾರಕಕ್ಕಾಗಿ ಪತ್ರ ಚಳವಳಿ ಆರಂಭಿಸಿ
Team Udayavani, Sep 17, 2018, 12:23 PM IST
ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿ ಸರಿಯಲ್ಲ. ಈ ಸಂಬಂಧ ವಿಷ್ಣು ಅಭಿಮಾನಿಗಳು, ಅಂಚೆ ಪತ್ರ ಚಳವಳಿ ಆರಂಭಿಸಬೇಕು ಎಂದು ಕವಿ ದೊಡ್ಡರಂಗೇಗೌಡ ತಿಳಿಸಿದ್ದಾರೆ.
ಡಾ.ವಿಷ್ಣು ಸೇನಾ ಸಮಿತಿ, ಭಾನುವಾರ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದಲ್ಲಿ ಲೇಖಕ ಜೋಗಿ ಅವರ “ಮಾತು, ಮೌನ, ಧ್ಯಾನ ವಿಷ್ಣುವರ್ಧನ’, ಮನು ಅವರ “ಸಾಹಸಸಿಂಹ’ ಹಾಗೂ ಸದಾಶಿವ ಶೆಣೈ ಅವರ “ಮುಗಿಯದಿರಲಿ ಬಂಧನ’, ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಯಾರ್ಯಾರಿಗೋ ಎಷ್ಟೆಷ್ಟೋ ಜಾಗ ನೀಡುವ ಸರ್ಕಾರ, ಅಭಿನವ ಭಾರ್ಗವನ ಪುಣ್ಯಭೂಮಿಯಲ್ಲಿ ಸ್ಮಾರಕ ನಿರ್ಮಿಸಲು ಜಾಗ ನೀಡದೇ ವಿಳಂಬ ನೀತಿ ಅನುಸರಿಸುತ್ತಿರುವ ಕ್ರಮ ಸರಿಯಲ್ಲ. ಭೂಮಿ ಕೊಡಿ ಎಂದು ಸರ್ಕಾರವನ್ನು ಕೇಳುವುದು ನಮ್ಮ ಹಕ್ಕು. ಇದು ಆಂದೋಲನ ರೂಪ ಪಡೆಯಲಿ ಎಂದು ಹೇಳಿದರು.
ವಿಷ್ಣುವರ್ಧನ್ ಅವರು ಕೇವಲ ನಟ ಅಷ್ಟೇ ಅಲ್ಲ ಅವರೊಬ್ಬ ಅಭಿಜಾತ ಕಲಾವಿದ.ಅವರ ಬಗ್ಗೆ ಅಭಿಮಾನಿಗಳು ಕವಿತೆಗಳನ್ನು ಬರೆದುಕೊಟ್ಟರೆ. ನಾನು, ಪುಸ್ತಕ ರೂಪದಲ್ಲಿ ಹೊರಬರಲು ಸಹಾಯ ಮಾಡುತ್ತೇನೆ. ವಿಷ್ಣುವರ್ಧನ್ ಅವರನ್ನು ಕಾವ್ಯರೂಪದಲ್ಲಿ ಹಿಡಿದಿಡುವ ಪ್ರಯತ್ನ ನಡೆಯಲಿ ಎಂದು ಆಶಿಸಿದರು.
ನಟ ಸುದೀಪ್ ಮಾತನಾಡಿ, “ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣದ ಸಂಬಂಧ ಈಗ ಏನನ್ನೂ ಹೇಳಲಾರೆ.
ಆದರೆ, ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ಪುಣ್ಯಭೂಮಿ ಕಾರ್ಯಕ್ಕೆ ನೀರೆರೆಯುತಗ್ತೀನೆ. ನಾನು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿರಬಹುದು. ಆದರೆ ನಮಗೆ ನಮ್ಮದೇ ಆದ ಗಡಿ ಇದೆ. ಅದನ್ನು ಮೀರದೆ ಕಾನೂನು ಪಾಲನೆ ಮಾಡಬೇಕು. ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು,’ ಎಂದರು.
ಹಿರಿಯ ಪತ್ರಕರ್ತರಾದ ರವಿ ಹೆಗಡೆ, ಜೋಗಿ, ಸದಾಶಿವ ಶೆಣೈ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಶಾಸಕ ಉದಯ ಗರುಡಾಚಾರ್, ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ರವಿ ಶ್ರೀವಾತ್ಸವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಟೌನ್‌ಹಾಲ್ ನಿಂದ ವಿವಿಪುರಂನ ಕುವೆಂಪು ಕಲಾಕ್ಷೇತ್ರದ ವರೆಗೂ ತೆರೆದ ವಾಹನದಲ್ಲಿ ವಿಷ್ಣುವರ್ಧನ್ ಅವರ ಭಾವ ಚಿತ್ರದ ಮೆರವಣೆಗೆ ನಡೆಯಿತು.
ವಿಷ್ಣು ಹೆಸರಿಡಲು ಶಿಫಾರಸು: ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುವುದು ವಿಷ್ಣುದಾದಾ ಅಭಿಮಾನಿಗಳ ಆಸೆ. ಈ ಕಾರ್ಯ ಸಾಧನೆಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಟ ಸುದೀಪ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಅಲ್ಲದೆ, ಜಯನಗರ ಮೆಟ್ರೋ ನಿಲ್ದಾಣಕ್ಕೆ ಡಾ.ವಿಷ್ಣುವರ್ಧನ್ ಅವರ ಹೆಸರಿಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.