ಶೂಟಿಂಗ್‌ ಶುರು

Team Udayavani, Jun 28, 2021, 5:23 PM IST

Start shooting

ಸಾಕಷ್ಟು ಸಿನಿಮಾಗಳು ಮುಹೂರ್ತ ಆಚರಿಸಿಕೊಂಡು, ಚಿತ್ರೀಕರಣಕ್ಕೆ ಅಣಿಯಾಗಬೇಕು ಎಂಬುವಷ್ಟರಲ್ಲಿ ಕೊರೊನಾಲಾಕ್‌ಡೌನ್‌ನಿಂದಾಗಿ ಶೂಟಿಂಗ್‌ಗೆ ಹೊರಡಲುಸಾಧ್ಯವಾಗಿರಲಿಲ್ಲ. ಇನ್ನೊಂದಷ್ಟು ಸಿನಿಮಾಗಳು ಮೊದಲ ಶೆಡ್ನೂಲ್‌ ಶೂಟಿಂಗ್‌ ಮುಗಿಸಿಕೊಳ್ಳುವಷ್ಟರಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಅನಿವಾರ್ಯವಾಗಿಪ್ಯಾಕಪ್‌ ಮಾಡಬೇಕಾಗಿ ಬಂದಿತ್ತು.

ಈಗ ಈ ಎಲ್ಲಾಸಿನಿಮಾಗಳು ಚಿತ್ರೀಕರಣಕ್ಕೆ ಅಣಿಯಾಗಿವೆ. “ಕಬj’,”ಲಗಾಮ್‌’, “ಸಪ್ತಸಾಗರದಾಚೆ ಎಲ್ಲೋ’, “ಬೈ ಟುಲವ್‌’, ಪುನೀತ್‌ರಾಜ್‌ಕುಮಾರ್‌ “ಜೇಮ್ಸ್‌’, ಶಿವರಾಜ್‌ಕುಮಾರ್‌ ಹೊಸ ಚಿತ್ರ ಹೀಗೆ ಸಾಕಷ್ಟು ಸಿನಿಮಾಗಳು ಚಿತ್ರೀಕರಣಕ್ಕೆ ಹೊರಟು ನಿಂತಿವೆ. ಈಗಾಗಲೇ ಸಿನಿಮಾ ತಂಡಗಳು ಸದ್ಯ ತಮ್ಮ ಕಲಾವಿದರುಮತ್ತು ತಂತ್ರಜ್ಞರ ಡೇಟ್ಸ್‌ ಹೊಂದಾಣಿಕೆ ಮಾಡಿಕೊಂಡು, ಮತ್ತೆ ಶೂಟಿಂಗ್‌ಗೆ ಹೊರಡಲುಅಣಿಯಾಗುತ್ತಿವೆ.ಸೆಟ್‌ ವರ್ಕ್‌, ಲೊಕೇಶನ್‌ ಹುಡುಕಾಟ ಸಿನಿಮಾಗಳ ಚಿತ್ರೀಕರಣ ನಡೆಯೋದು ಆಯಾಕಥೆಗೆ ಅನುಸಾರವಾಗಿ. ಕೆಲವು ಕಥೆಗಳು ಸೆಟ್‌ ಅನ್ನುಬಯಸಿದರೆ, ಇನ್ನೊಂದಷ್ಟು ಸಿನಿಮಾಗಳು ಔಟ್‌ಡೋರ್‌ ಶೂಟಿಂಗ್‌ ಬಯಸುತ್ತವೆ.

ಈಗ ಆ ತರಹದಸಿನಿಮಾ ತಂಡಗಳು ಸೆಟ್‌ ವರ್ಕ್‌ ಹಾಗೂ ಲೊಕೇಶನ್‌ ಹುಡುಕಾಟದಲ್ಲಿ ಬಿಝಿಯಾಗಿವೆ. ಲಾಕ್‌ಡೌನ್‌ಗೂ ಮುನ್ನ “ಕಬj’ ಸೇರಿದಂತೆ ಕೆಲವು ಸಿನಿಮಾ ತಂಡಗಳು ಬೇರೆ ಬೇರೆ ಶೈಲಿಯ ಸೆಟ್‌ಗಳನ್ನು ಸಿದ್ಧಪಡಿಸಿದ್ದವು. ಆದರೆ, ಲಾಕ್‌ಡೌನ್‌ನಿಂದಾಗಿ ಆ ಸೆಟ್‌ಗಳುಸಾಕಷ್ಟು ಹಾನಿಗೊಳಗಾಗಿದ್ದವು.

ಈಗ ಆ ಸೆಟ್‌ಗಳಮರು ನಿರ್ಮಾಣ ಕಾರ್ಯ ನಡೆಯುತ್ತಿದೆ ಕಂಠೀರವದಲ್ಲಿ ಬಿಝಿ ಚಿತ್ರೀಕರಣ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ಲ್ರಾನ್‌ ಮಾಡಿಕೊಂಡಿರುವವರ ಮೊದಲ ಆಯ್ಕೆ ಕಂಠೀರವ ಸ್ಟುಡಿಯೋ. ವಿಶಾಲವಾದ ಈ ಸ್ಟುಡಿಯೋದಲ್ಲಿ ಔಟ್‌ಡೋರ್‌ ಜೊತೆಗೆ ಇನ್‌ಡೋರ್‌ ಫ್ಲೋರ್‌ಗಳುಕೂಡಾ ಇರುವುದರಿಂದ ಸದ್ಯ ಒಂದಷ್ಟು ಸಿನಿಮಾಗಳ,ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ನಿರ್ದೇಶಕ ಸತ್ಯಪ್ರಕಾಶ್‌ ತಮ್ಮ “ಮ್ಯಾನ್‌ ಆಫ್ ದಿ ಮ್ಯಾಚ್‌’ ಸಿನಿಮಾ ಶೂಟಿಂಗ್‌ ಆರಂಭಿಸಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸತತ ನಾಲ್ಕು ದಿನಗಳಿಂದ ನಡೆಯುತ್ತಿದೆ.

ಚಿತ್ರೀಕರಣದಲ್ಲಿ ಧಾರಾವಾಹಿಗಳುರಾಜ್ಯದಲ್ಲಿ ಚಿತ್ರೀಕರಣಕ್ಕೆ ಸರ್ಕಾರ ಅನುಮತಿಸಿಗುತ್ತಿದ್ದಂತೆ ಮೊದಲು ಚಿತ್ರೀಕರಣ ಆರಂಭಿಸಿದ್ದು ಕಿರುತೆರೆ. ಅದಕ್ಕೆ ಕಾರಣ ಎಪಿಸೋಡ್‌ಗಳು. ಸಿನಿಮಾಚಿತ್ರೀಕರಣವಾದರೆ, ಒಂದೆರಡು ವಾರ ಬಿಟ್ಟಾದರೂಆರಂಭಿಸಬಹುದು. ಆದರೆ, ಧಾರಾವಾಹಿಗಳು ತಮ್ಮಎಪಿಸೋಡ್‌ ಅನ್ನು ಸರಾಗವಾಗಿ ಟೆಲಿಕಾಸ್ಟ್‌ ಮಾಡಬೇಕಾದರೆ ಚಿತ್ರೀಕರಣದ ಅನಿವಾರ್ಯತೆ ಇದೆ.

ಅದೇ ಕಾರಣದಿಂದ ರಾಜ್ಯದಲ್ಲಿ ಶೂಟಿಂಗ್‌ ಅನುಮತಿ ರದ್ದಾಗುತ್ತಿದ್ದಂತೆ “ಜೊತೆ ಜೊತೆಯಲಿ’, “ಗೀತಾ’. “ಕನ್ನಡತಿ’ ಸೇರಿದಂತೆ ಒಂದಷ್ಟು ಚಿತ್ರತಂಡಗಳುಹೈದರಾಬಾದ್‌ಗೆ ಚಿತ್ರೀಕರಣಕೆ ತೆರಳಿದ್ದವು. ಈಗ ಆತಂಡಗಳು ಮತ್ತೆ ಬೆಂಗಳೂರಿಗೆ ಮರಳಿದ್ದು, “ಜೊತೆಜೊತೆಯಲಿ’ ಸೇರಿದಂತೆ ಇನ್ನೂ ಒಂದಷ್ಟು ಧಾರಾವಾಹಿ ತಂಡಗಳುಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿವೆ. ಇನ್ನೊಂದಷ್ಟು ಧಾರಾವಾಹಿತಂಡಗಳು ರಾಜರಾಜೇಶ್ವರಿ ನಗರ, ಕನಕಪುರ ರಸ್ತೆಯಲ್ಲಿರುವ ಫಾರ್ಮ್ಹೌಸ್‌ಗಳಲ್ಲಿ ಚಿತ್ರೀಕರಣದಲ್ಲಿ ನಿರತವಾಗಿವೆ.

ಕಡಿಮೆ ಜನ ಹೆಚ್ಚುಕೆಲಸಸಾಮಾನ್ಯವಾಗಿ ಒಂದು ಚಿತ್ರೀಕರಣ ಸೆಟ್‌ಗೆಭೇಟಿ ನೀಡಿದರೆ ಅಲ್ಲಿ ಎಲ್ಲಿ ನೋಡಿದರೂ ಜನ,ಸಿನಿಮಾ ತಂಡದ ಸದಸ್ಯರು ಓಡಾಡುತ್ತಿರುತ್ತಾರೆ.ಆದರೆ, ಲಾಕ್‌ಡೌನ್‌ ಬಳಿಕದ ಚಿತ್ರೀಕರಣದಲ್ಲಿ ಆದೃಶ್ಯ ಸಿಗುವುದಿಲ್ಲ. ಏಕೆಂದರೆ ಅರ್ಧಕರ್ಧ ಮಂದಿಕಡಿಮೆಯಾಗಿದ್ದಾರೆ. ಅನಿವಾರ್ಯವಾಗಿ ಕಡಿಮೆಸದಸ್ಯರೊಂದಿಗೆ ಚಿತ್ರೀಕರಣ ಮಾಡಬೇಕಾಗಿದೆ.ಜೊತೆಗೆ ಎಲ್ಲರೂ ಲಸಿಕೆ, ಮಾಸ್ಕ್ ಹಾಕಿಕೊಂಡಿದ್ದಾರಾಎಂಬುದನ್ನು ಖಾತ್ರಿಪಡಿಸೋದು ಕೂಡಾ ಸದ್ಯದಅನಿವಾರ್ಯತೆ. ಹೀಗಾಗಿ ಸದ್ಯ ಚಿತ್ರೀಕರಣ ಸೆಟ್‌ಗೆಭೇಟಿ ನೀಡಿದರೆ ಹಿಂದಿನ ಮಜಾ, ಆ ಗಜಿಬಿಜಿ ಕಾಣಸಿಗುವುದಿಲ್ಲ

ನಮ್ಮ “ಕಬj’ ಸಿನಿಮಾದಬಹುಭಾಗ ಸೆಟ್‌ನಲ್ಲೇನಡೆಯುವುದರಿಂದ, ಅಗತ್ಯಸೆಟ್‌ಗಳನ್ನು ಮೊದಲುನಿರ್ಮಾಣ ಮಾಡಿಕೊಳ್ಳಬೇಕು. ಹಾಗಾಗಿ ಸಿನಿಮಾಸೆಟ್‌ಕೆಲಸ ಶುರುವಾಗಿದೆ.ಸೆಟ್‌ಕೆಲಸ ಮುಗಿಯುತ್ತಿದ್ದಂತೆ, ಮತ್ತೆಶೂಟಿಂಗ್‌ ಶುರು ಮಾಡಲು ಪ್ಲಾನ್‌ಹಾಕಿಕೊಂಡಿ ದ್ದೇವೆ. ಈಗಾಗಲೆ ನಮ್ಮ ಕಲಾವಿದರು, ತಂತ್ರಜ್ಞರಿಗೆ ಶೂಟಿಂಗ್‌ ಶುರುವಾಗುತ್ತಿರುವ ಮಾಹಿತಿ ನೀಡುತ್ತಿದ್ದೇವೆ.

  • ಆರ್‌. ಚಂದ್ರು, “ಕಬ್ಜ “ನಿರ್ದೇಶಕ ಮತ್ತು ನಿರ್ಮಾಪಕ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.