ವೇಗ ನೀಡಿದ ವರ್ಷಾರಂಭ


Team Udayavani, Feb 10, 2018, 3:01 PM IST

vega-kamagari.jpg

ತಿಂಗಳಾಂತ್ಯಕ್ಕೆ ಕೆಲ ಅಂಡರ್‌ಪಾಸ್‌ ಹಾಗೂ ಮೇಲ್ಸೇತುವೆಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ. ನಗರದ ಹೃದಯಭಾಗದಲ್ಲಿ ನಡೆಯುತ್ತಿರುವ ಓಕಳಿಪುರ ಅಷ್ಟಪಥ ಕಾರಿಡಾರ್‌ನ ಎರಡು ಪಥಗಳು ಹಾಗೂ ಅಂಡರ್‌ಪಾಸ್‌ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.

ಪಶ್ಚಿಮಕಾರ್ಡ್‌ ರಸ್ತೆಯ ಮಂಜುನಾಥ ನಗರ ಮತ್ತು ಸಿಲ್ಕ್ಬೋರ್ಡ್‌ ರಸ್ತೆಯ ದಾಲ್ಮಿಯಾ ಜಂಕ್ಷನ್‌ ಮೇಲ್ಸೇತುವೆಗಳು ಈ ಮಾಸಾಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಫ್ರೀಡಂಪಾರ್ಕ್‌ ಬಹುಮಹಡಿ ನಿಲುಗಡೆ ತಾಣದ 2 ಹಂತ ಮುಗಿದಿದೆ. ಒಟ್ಟಾರೆಯಾಗಿ ಜನವರಿ ತಿಂಗಳಲ್ಲಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ.

ಯೋಜನೆ: ನಮ್ಮ ಮೆಟ್ರೋ 2ನೇ ಹಂತ
ಒಟ್ಟಾರೆ ಯೋಜನೆ ಉದ್ದ: 72.3 ಕಿ.ಮೀ.
ವಿಸ್ತರಿಸಿದ ಮಾರ್ಗ ರೀಚ್‌-2: ಮೈಸೂರು ರಸ್ತೆ- ಕೆಂಗೇರಿ
ಮಾರ್ಗದ ಉದ್ದ: 6.46 ಕಿ.ಮೀ.
ಮಾರ್ಗದ ಒಟ್ಟಾರೆ ಯೋಜನೆ ವೆಚ್ಚ: 1,867.95 ಕೋಟಿ ರೂ. 
ಸಿವಿಲ್‌ ಕಾಮಗಾರಿ ವೆಚ್ಚ: 659 ಕೋಟಿ ರೂ. 
ಕಾಮಗಾರಿ ಆರಂಭ: 2016ರ ಫೆಬ್ರವರಿ
ಕಾಮಗಾರಿ ಪ್ರಗತಿ: ಶೇ. 40-50
ಬಾಕಿ ಇರುವ ಕಾಮಗಾರಿ: ಕಂಬಗಳ ನಿರ್ಮಾಣ ಪೂರ್ಣಗೊಂಡಿದೆ. ಹಳಿಗಳ ಜೋಡಣೆ, ವಿದ್ಯುತ್‌ ಲೈನ್‌ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.
ಪೂರ್ಣಗೊಳಿಸುವ ಗುರಿ: 2018ರ ಜುಲೈ (ಸಿವಿಲ್‌ ಕಾಮಗಾರಿ)

ವಸ್ತುಸ್ಥಿತಿ: ಒಟ್ಟಾರೆ ಎರಡನೇ ಹಂತದ “ನಮ್ಮ ಮೆಟ್ರೋ’ ಯೋಜನೆಯಲ್ಲಿ ಕಾಮಗಾರಿ ಅತಿ ವೇಗವಾಗಿ ಪ್ರಗತಿ ಸಾಧಿಸಿದ ಮಾರ್ಗ ಮೈಸೂರು ರಸ್ತೆ-ಕೆಂಗೇರಿ. ಆದರೆ, ಈಗ ಅದೇ ಮಾರ್ಗ ಆಮೆಗತಿಯಲ್ಲಿ ಸಾಗುತ್ತಿದೆ. 27 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಈ ಪೈಕಿ ಈಗಾಗಲೇ 22ರಿಂದ 24 ತಿಂಗಳು ಪೂರ್ಣಗೊಂಡಿದೆ. ಆದರೆ, ಇನ್ನೂ ಶೇ. 50ರಷ್ಟು ಪ್ರಗತಿ ಸಾಧಿಸಿಲ್ಲ.  

ವಿಳಂಬಕ್ಕೆ ಕಾರಣ: ಟೆಂಡರ್‌ ಕರೆಯುವಲ್ಲಾದ ವಿಳಂಬವೇ ಕಾಮಗಾರಿ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ಮಧ್ಯೆ ಹಣಕಾಸಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕಾಮಗಾರಿ ಮತ್ತಷ್ಟು ಆಮೆಗತಿಯಲ್ಲಿ ಸಾಗಲು ಕಾರಣವಾಗಿದೆ. ವಸ್ತುಸ್ಥಿತಿ ಅವಲೋಕಿಸಿದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಮಾಡಿಮುಗಿಸುವ ಒತ್ತಡ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲಿದೆ. 

ಯೋಜನೆ – 1
ಯೋಜನೆ:
ದಾಲ್ಮಿಯಾ ಜಂಕ್ಷನ್‌ ಮೇಲ್ಸೇತುವೆ
ವಿವರ: ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿಯ ದಾಲ್ಮಿಯಾ ಜಂಕ್ಷನ್‌, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯಿಂದಾಗಿ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗಿನ ರಸ್ತೆ ಸಂಪೂರ್ಣವಾಗಿ ಸಿಗ್ನಲ್‌ ಮುಕ್ತವಾಗಲಿದೆ.

ಕಾರ್ಯಾದೇಶ ನೀಡಿದ ದಿನಾಂಕ: 01 ಸೆಪ್ಟಂಬರ್‌ 2015
ಕಾಮಗಾರಿ ಆರಂಭ ದಿನಾಂಕ: ಜನವರಿ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.98
ಅಂದಾಜು ವೆಚ್ಚ: 190 ಕೋಟಿ ರೂ.
ಯೋಜನಾ ವೆಚ್ಚ: 154.42 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2017
ಗುತ್ತಿಗೆದಾರ: ಎಂವಿಆರ್‌ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ರಸ್ತೆಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರೊಂದಿಗೆ ಬೀದಿದೀಪ ಅಳವಡಿಕೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ತಡೆಗೋಡೆಗಳಿಗೆ ಬಣ್ಣ ಹಾಕುವ ಕೆಲಸ ಬಾಕಿಯಿದೆ.

ವಸ್ತುಸ್ಥಿತಿ: ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿರುವ ಪಾಲಿಕೆಯ ಸಿಬ್ಬಂದಿ, ಮೇಲ್ಸೇತುವೆ ರಸ್ತೆಗೆ ಡಾಂಬರೀಕರಣ ಮಾಡುತ್ತಿದ್ದು, ತಡೆಗೋಡೆಗಳಿಗೆ ಬಣ್ಣ ಬಳಿಯುವ ಹಾಗೂ ಇತರೆ ಸಣ್ಣಪುಟ್ಟ ಕೆಲಗಳು ಬಾಕಿಯಿವೆ.

ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಡೆಗೋಡೆಗಳಿಗೆ ಬಣ್ಣ ಹಾಕುವುದು ಹಾಗೂ ಬೀದಿ ದೀಪಗಳ ಅಳವಡಿಕೆಯಂತಹ ಕೆಲಸಗಳು 10 ದಿನಗಳಲ್ಲಿ ಮುಗಿಯಲಿದ್ದು, ಹಿರಿಯ ಅಧಿಕಾರಿಗಳು ಶೀಘ್ರದಲ್ಲಿಯೇ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಲಿದ್ದಾರೆ.
-ಪಾಲಿಕೆ ಎಂಜಿನಿಯರ್‌
 
ಯೋಜನೆ – 2
ಯೋಜನೆ:
ಓಕಳಿಪುರ ಜಂಕ್ಷನ್‌ ಅಷ್ಟಪಥ
ವಿವರ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.

ಕಾಮಗಾರಿ ಆರಂಭ ದಿನಾಂಕ: 14 ಜುಲೈ 2016
ಕಾಮಗಾರಿ ಅವಧಿ: 18 ತಿಂಗಳು
ಈವರೆಗಿನ ಪ್ರಗತಿ: ಶೇ.70
ಯೋಜನಾ ವೆಚ್ಚ: 102.84 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್‌ 2017
ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಅಪ್‌ಡೇಟ್‌: ಮಲ್ಲೇಶ್ವರ ಕಡೆಯಿಂದ ರಾಜಾಜಿನಗರ ಕಡೆಗೆ ಸಂಪರ್ಕಿಸುವ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿಯಿದೆ. ಜತೆಗೆ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಲೂಪ್‌-1 ಕಾಮಗಾರಿ ಪೂರ್ಣಗೊಂಡಿದೆ.

ವಸ್ತುಸ್ಥಿತಿ: ಅಂಡರ್‌ಪಾಸ್‌ಗೆ ಅಡ್ಡಿಯಾಗಿದ್ದ ಬೃಹದಾಕಾರದ ಬಂಡೆ ತೆರವುಗೊಳಿಸಲಾಗಿದ್ದು, ಅಂಡರ್‌ ಪಾಸ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರೊಂದಿಗೆ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಲೂಪ್‌ ಕಾಮಗಾರಿ ಸಹ ಮುಗಿದಿದ್ದು, ಫೆಬ್ರುವರಿ ಅಂತ್ಯಕ್ಕೆ ಎಂಟು ಪಥಗಳ ಪೈಕಿ 4 ಪಥಗಳು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ.

ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಲೂಪ್‌ ನಿರ್ಮಾಣ ಪೂರ್ಣಗೊಂಡಿದೆ. ಆ ಹಿನ್ನೆಲೆಯಲ್ಲಿ ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್‌-2 ನಿರ್ಮಾಣ ಕಾಮಗಾರಿ ಹಾಗೂ ರೈಲ್ವೆ ಹಳಿ ಕಳೆಗೆ ಎರಡು ಎಲಿಮೆಂಟ್‌ ಅಳವಡಿಸುವ ಕಾಮಗಾರಿ ಮಾತ್ರ ಬಾಕಿಯಿದ್ದು, ನಾಲ್ಕು ತಿಂಗಳೊಳಗೆ ಯೋಜನೆ ಮುಗಿಯಲಿದೆ.
-ಪಾಲಿಕೆ ಸಹಾಯಕ ಎಂಜಿನಿಯರ್‌
 
ಯೋಜನೆ -3
ಯೋಜನೆ:
ಬಹುಮಹಡಿ ವಾಹನ ನಿಲುಗಡೆ ತಾಣ

ವಿವರ: ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

ಕಾರ್ಯಾದೇಶ ನೀಡಿದ ದಿನಾಂಕ: 24 ಜೂನ್‌ 2015
ಕಾಮಗಾರಿ ಆರಂಭ ದಿನಾಂಕ: 30 ಜೂನ್‌ 2018
ಕಾಮಗಾರಿ ಅವಧಿ: 24 ತಿಂಗಳು
ಈವರೆಗಿನ ಪ್ರಗತಿ: ಶೇ.45
ಅಂದಾಜು ವೆಚ್ಚ: 44.80 ಕೋಟಿ ರೂ.
ಯೋಜನಾ ವೆಚ್ಚ: 79.81 ಕೋಟಿ ರೂ.
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 30 ಜೂನ್‌ 2018
ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್

ಈ ತಿಂಗಳ ಪ್ರಗತಿ: ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿರುವ ಪಾಲಿಕೆಯ ಸಿಬ್ಬಂದಿ, 3ನೇ ಹಂತದ ಕಾಮಗಾರಿ ನಡೆಸಲು ಅಗತ್ಯ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಒಂದು ಮಹಡಿಯನ್ನು ಪಾರ್ಕಿಂಗ್‌ಗೆ ಮುಕ್ತಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಂಡಿದ್ದು, ಎರಡನೇ ಹಂತದ ಎಲ್ಲ ಮಹಡಿಗಳ ಮೇಲ್ಛಾವಣಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಒಂದು ಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ ಅವಕಾಶ ಕಲ್ಪಿಸಲು ವಾಹನಗಳು ಬಂದು ಹೋಗಲು ಅಗತ್ಯ ಸಿದ್ಧತೆ ನಡೆಸುತ್ತಿದ್ದಾರೆ.

ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಬಹುತೇಕ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ ಮಹಡಿಗಳ ನಿರ್ಮಾಣ ಹಾಗೂ ವಾಹನಗಳ ಬಂದು ಹೋಗುವ ರ್‍ಯಾಂಪ್‌ಗ್ಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. 
-ಪಾಲಿಕೆ ಎಂಜಿನಿಯರ್‌

ಯೋಜನೆ – 4
ಯೋಜನೆ:
ಪಶ್ಚಿಮ ಕಾರ್ಡ್‌ ರಸ್ತೆ ಸಿಗ್ನಲ್‌ ಫ್ರೀ ಕಾರಿಡಾರ್‌ 
ವಿವರ: ಸಿಗ್ನಲ್‌ ಮುಕ್ತ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುದ್ದು, ಯೋಜನೆಯಿಂದ ಕಾರ್ಡ್‌ ರಸ್ತೆ ಸಿಗ್ನಲ್‌ ಮುಕ್ತವಾಗಲಿದೆ. 

ಕಾರ್ಯಾದೇಶ ನೀಡಿದ ದಿನಾಂಕ: 14 ಮಾರ್ಚ್‌ 2016
ಕಾಮಗಾರಿ ಆರಂಭ ದಿನಾಂಕ: 18 ಮಾರ್ಚ್‌ 2016
ಕಾಮಗಾರಿ ಅವಧಿ: 18 ತಿಂಗಳು 
ಈವರೆಗಿನ ಪ್ರಗತಿ: ಶೇ.70
ಅಂದಾಜು ವೆಚ್ಚ: 78.64 ಕೋಟಿ ರೂ.
ಯೋಜನಾ ವೆಚ್ಚ: 89.86 ಕೋಟಿ ರೂ. 
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 17 ಸೆಪ್ಟಂಬರ್‌ 2017
ಗುತ್ತಿಗೆದಾರ: ಎಂ.ವೆಂಕಟರಾವ್‌ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌
ಈ ತಿಂಗಳ ಪ್ರಗತಿ: ಎರಡು ಮೇಲ್ಸೇತುವೆಗಳಿಗೆ ಗರ್ಡ್‌ರ್‌ಗಳ (ಪ್ರೀಕಾಸ್ಟ್‌ ಎಲಿಮೆಂಟ್‌) ಕೂರಿಸುವ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ರಸ್ತೆ ನಿರ್ಮಾಣ ಕೆಲಸ ನಡೆಸಲಾಗಿದೆ. 

ವಸ್ತುಸ್ಥಿತಿ: ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಬಸವೇಶ್ವನಗರ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿಳಂಬಗೊಳಿಸಿದ್ದಾರೆ. 

ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಫೆಬ್ರುವರಿ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಜತೆಗೆ ಬಸವೇಶ್ವರ ನಗರದ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್‌ ವೇಳೆಗೆ ಪೂರ್ಣಗೊಳಿಸಲಿದ್ದಾರೆ. ಇನ್ನು ಶಿವನಗರದಲ್ಲಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈವರೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ.
-ಸಹಾಯ ಎಂಜಿನಿಯರ್‌

ಮಾಹಿತಿ: ವೆಂ. ಸುನೀಲ್‌ ಕುಮಾರ್‌, ವಿಜಯ್‌ಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.