ಪ್ರತಿ ಹೆಕ್ಟೇರ್ ತೆಂಗಿಗೆ 18 ಸಾವಿರ ರೂ. ಪರಿಹಾರ
Team Udayavani, Oct 5, 2018, 6:45 AM IST
ಬೆಂಗಳೂರು: ರಾಜ್ಯದಲ್ಲಿ 2015-16 ಹಾಗೂ 2016-17ರಲ್ಲಿ ಬರಗಾಲಕ್ಕೆ ತುತ್ತಾಗಿ ನಾಶವಾಗಿರುವ ತೆಂಗು ಬೆಳೆಗೆ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ,ರಾಜ್ಯದಲ್ಲಿ 44,547 ಹೆಕ್ಟೇರ್ ತೆಂಗು ಬೆಳೆ ಹಾನಿಯಾಗಿದ್ದು, 44 ಲಕ್ಷ 55 ಸಾವಿರ ತೆಂಗಿನ ಮರಗಳು ಹಾನಿಗೊಳಗಾಗಿವೆ. ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ 178 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ.
ಪ್ರತಿ ಹೆಕ್ಟೇರ್‌ಗೆ 18 ಸಾವಿರ ಅಥವಾ ಪ್ರತಿ ತೆಂಗಿನಮರಕ್ಕೆ 400 ರೂ. ಪರಿಹಾರ ಕೊಡಬೇಕೆಂದು ಚರ್ಚಿಸಲಾಗಿದೆ. ಈ ಬಗ್ಗೆ ಜಿಲ್ಲಾಮಟ್ಟದ ಸಮಿತಿಗಳಲ್ಲಿ ಚರ್ಚಿಸಿ ತೋಟಗಾರಿಕೆ ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ತೆಂಗು ಬೆಳೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಕೇಂದ್ರದಿಂದ ಯಾವುದೇ ರೀತಿಯ ಸ್ಪಂದನೆ ದೊರೆಯದಿರುವುದರಿಂದ ರಾಜ್ಯ ಸರ್ಕಾರವೇ ರೈತರ ನೆರವಿಗೆ ಬಂದಿದ್ದು, ತೆಂಗು ಬೆಳೆಗಾರರಿಗೆ ಹೊಸದಾಗಿ ಬೆಳೆ ಬೆಳೆಯಲು ಸರ್ಕಾರ ಪರ್ಯಾಯ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.
ಅದೇ ರೀತಿ ದಾಳಿಂಬೆ, ಮಾವು ಹಾಗೂ ತರಕಾರಿ ಬೆಳೆಗಳ ಸಂರಕ್ಷಣೆಗೆ ಬಾಗಲಕೋಟೆ, ಕೋಲಾರ, ಶಿವಮೊಗ್ಗ, ಹಾಸನ, ಧಾರವಾಡ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಉತ್ಕೃಷ್ಠ ಕೇಂದ್ರಗಳಲ್ಲಿ ಉತ್ತಮ ತಂತ್ರಜ್ಞಾನ ಅಳವಡಿಸಿಕೊಳ್ಳಲು 60 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಪರಿಹಾರದ ಜತೆಗೆ ಮಾಸಾಶನ:ವನ್ಯಪ್ರಾಣಿಗಳಿಂದ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದರ ಜತೆಗೆ ಐದು ವರ್ಷದವರೆಗೆ 2 ಸಾವಿರ ಮಾಸಾಶನ ನೀಡಲು ಸರ್ಕಾರ ನಿರ್ಧರಿಸಿದೆ. ಇದುವರೆಗೂ ವನ್ಯ ಜೀವಿಗಳಿಂದ ಮೃತರಾದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ.ಮಾತ್ರ ಪರಿಹಾರ ನೀಡಲಾಗುತ್ತಿತ್ತು. ಜತೆಗೆ ಐದು ವರ್ಷಗಳವರೆಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಪುಟದ ಪ್ರಮುಖ ನಿರ್ಣಯಗಳು
– ಹಾಸನ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಹಾಸ್ಟೆಲ್, ಗ್ರಂಥಾಲಯ ಸೌಲಭ್ಯ ಕಲ್ಪಿಸಲು 50 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ
– ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 50 ಕೋಟಿ
– ಬೀದರ್, ಶಿವಮೊಗ್ಗ ಜಿಲ್ಲಾಸ್ಪತ್ರೆಗಳಲ್ಲಿ ಹೃದ್ರೋಗ ಘಟಕ ಸ್ಥಾಪನೆಗೆ ತಲಾ 7.25 ಕೋಟಿ ರೂ. ಹಾಗೂ 7.81 ಕೋಟಿ
– ಹೊಸ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವವರೆಗೂ ಒಂದು ವರ್ಷ ಜಿವಿಕೆ ಸಂಸ್ಥೆಯ 108 ಆಂಬ್ಯುಲೆನ್ಸ್ ಸೇವೆ
ಮುಂದುವರಿಸಲು ನಿರ್ಧಾರ.
– ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣ ಸೇರಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ರೈತರು, ಕನ್ನಡ ಪರ ಹೋರಾಟಗಾರರ ವಿರುದಟಛಿ ದಾಖಲಾಗಿದ್ದ 14 ಪ್ರಕರಣಗಳನ್ನು ಕೈ ಬಿಡಲು ಒಪ್ಪಿಗೆ.
– ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹೈ.ಕ. ಭಾಗದ ಯಾದಗಿರಿ,ಹುಮನಾಬಾದ್, ಹೊಸಪೇಟೆ ಹಾಗೂ ಲಿಂಗಸುಗೂರುಗಳಲ್ಲಿ ಜಿಟಿಟಿಸಿ ಕೇಂದ್ರಗಳಲ್ಲಿ 224 ಕೋಟಿ ವೆಚ್ಚದಲ್ಲಿ ಅಟೊಮೊಬೈಲ್, ಏರೋಸ್ಪೇಸ್ ಕುರಿತು ಉನ್ನತ ಮಟ್ಟದ ತರಬೇತಿ
– ಶ್ರೀರಂಗಪಟ್ಟಣ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸಲು ಒಪ್ಪಿಗೆ
– ನಿವೃತ್ತ ಐಎಎಸ್‌ಅಧಿಕಾರಿ ಎಸ್. ಉಮೇಶ್ ಅವರನ್ನು ಕೆಎಟಿ ಸದಸ್ಯರನ್ನಾಗಿ ನೇಮಕ ಮಾಡುವ ಪ್ರಸ್ತಾಪವನ್ನು
ಹಿಂಪಡೆಯಲು ನಿರ್ಧಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.