ಕೈಗೆ ಕಾನೂನು ವಿಪಕ್ಷ ಗುಡುಗು
Team Udayavani, Feb 21, 2018, 6:00 AM IST
ಬೆಂಗಳೂರು: ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಕೆ.ಆರ್.ಪುರಂ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ದುಂಡಾವರ್ತನೆ ಪ್ರಕರಣಗಳು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡವು. ಅಷ್ಟೇ ಅಲ್ಲ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದವು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಗೂಂಡಾರಾಜ್ಯವಾಗುತ್ತಿದೆ. ಪೊಲೀಸರ ಕೈ ಕಟ್ಟಿ ಹಾಕಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮುಖಂಡರ ದೌರ್ಜನ್ಯ-ದಬ್ಟಾಳಿಕೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂತಹ ಕೃತ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು.
ಶೆಟ್ಟರ್ ಗುಡುಗು:
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ವಿಷಯ ಪ್ರಸ್ತಾಪಿಸಿ, “”ಒಂದು ಕಡೆ ಮೊಹಮ್ಮದ್ ನಲಪಾಡ್ ಪ್ರಕರಣ, ಮತ್ತೂಂದೆಡೆ ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಮುಖಂಡ ಬಿಜೆಪಿ ನಾಯಕನ ಮೇಲೆ ನಡೆಸಿರುವ ಹಲ್ಲೆ ಪ್ರಕರಣ ಹಾಗೂ ಕೆ.ಆರ್.ಪುರಂ ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ನಡೆಸಿದ ಕೃತ್ಯಗಳು ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿಯಾಗಿವೆ. ಆಡಳಿತ ಪಕ್ಷಕ್ಕೆ ಸೇರಿದವರು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯೇ ಇದು” ಎಂದು ಪ್ರಶ್ನಿಸಿದರು.
“”ಲೈವ್‌ಬ್ಯಾಂಡ್ ನಿಷೇಧವಿದ್ದರೂ ಶಾಂತಿನಗರ ಭಾಗದಲ್ಲಿ ಅನಧಿಕೃತವಾಗಿ ಡ್ಯಾನ್ಸ್ ಬಾರ್ ನಡೆಯುತ್ತಿವೆ. ಬಾರ್ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 3 ಗಂಟೆವರೆಗೂ ತೆರೆದಿರುತ್ತವೆ. ಇವೆಲ್ಲವೂ “ಮಾಮೂಲಿ’ ಪ್ರಭಾವ. ವಿಜಯ್ ಹಡಗಲಿ ಎಂಬ ಇನ್ಸ್‌ಪೆಕ್ಟರ್ ಕಬ್ಬನ್‌ಪಾರ್ಕ್, ವಿವೇಕನಗರ, ಅಶೋಕನಗರ, ಹಲಸೂರು ಪೊಲೀಸ್ ಠಾಣೆಗಳ ನಡುವೆಯೇ ಸುತ್ತುತ್ತಾ ಇರುತ್ತಾರೆ. ಹಿಂದೆ ವಿಜಯನಗರದಲ್ಲಿದ್ದಾಗ ಕರ್ತವ್ಯಲೋಪದ ಮೇರೆಗೆ ಅಮಾನತುಗೊಂಡಿದ್ದ. ಅಂತಹ ವ್ಯಕ್ತಿಗೆ ಮತ್ತೆ ಪೋಸ್ಟಿಂಗ್ ಕೊಡಲಾಗಿದೆ. ಶಾಸಕರು, ರಾಜಕಾರಣಿಗಳು ತಮಗೆ ಸೆಲ್ಯೂಟ್ ಹೊಡೆಯುವವರಿಗೆ ಆಯಕಟ್ಟಿನ ಜಾಗ ಕೊಟ್ಟು ರಕ್ಷಣೆಗೆ ಇಟ್ಟುಕೊಂಡರೆ ಹೀಗೇ ಆಗುವುದು” ಎಂದರು.
“”ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಬೇಕು. ಮೊಹಮ್ಮದ್ ನಲಪಾಡ್ ವಿರುದ್ಧ ಇದೊಂದೇ ಪ್ರಕರಣವಲ್ಲ. ಹಿಂದೆಯೂ ಪೀಟರ್ ಹಾಗೂ ಪೂರ್ಣಿಮಾ ಎಂಬುವರು ಇದೇ ರೀತಿ ಹಲ್ಲೆಗೊಳಗಾಗಿ ಠಾಣೆಗೆ ದೂರು ಕೊಡಲು ಹೋಗಿದ್ದಾಗ ದೂರಿನ ಪ್ರತಿ ಹರಿದು ಹಾಕಿದ್ದೂ ಇದೆ. ಹಲ್ಲೆಗೊಳಗಾದ ವಿದ್ವತ್ ವಿರುದ್ಧ ಪ್ರಕರಣ ದಾಖಲಿಸಿ, ಮದ್ಯಪಾನ ಮಾಡಿದ್ದಾನೆಯೇ ಇಲ್ಲವೇ ಎಂಬ ಬಗ್ಗೆ ತಪಾಸಣೆ ನಡೆಸಲಾಗಿದೆ. ಆದರೆ, ಮೊಹಮ್ಮದ್ ನಲಪಾಡ್‌ನನ್ನು 40 ಗಂಟೆಗಳ ನಂತರ ಬಂಧಿಸಿದ್ದಾಗಿ ತೋರಿಸಲಾಗಿದೆ. ವಿದ್ವತ್ ಮೇಲಿನ ಹಲ್ಲೆಯಾದ ನಂತರವೂ ಆತನ ವಿರುದ್ಧ ರೌಡಿ ಶೀಟರ್ ಯಾಕೆ ಹಾಕಿಲ್ಲ?” ಎಂದು ಪ್ರಶ್ನಿಸಿದರು.
ಪರಿಷತ್‌ನಲ್ಲೂ ಆಕ್ರೋಶ
ಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, “”ಕಾಂಗ್ರೆಸ್ ಶಾಸಕರು, ಸಚಿವರ ಮಕ್ಕಳಿಗೆ ಗೂಂಡಾಗಿರಿ ಮಾಡಲು ತುರ್ತು ಲೈಸೆನ್ಸ್ ನೀಡಲಾಗಿದೆಯೇ? ಕರ್ನಾಟಕ ಗೂಂಡಾ ರಾಜ್ಯದಂತಾಗಿದ್ದು, ನಾವು ಬದುಕಲು ಸಾಧ್ಯವಿಲ್ಲದಂತಹ ಬೆಳವಣಿಗೆಗಳು ನಡೆಯುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“”ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಅಮಾನತಿಗೆ ಕಾರಣವೇನು? ಪೊಲೀಸರ ಕೈ ಕಟ್ಟಿ ಹಾಕಬಾರದು.
ಇತ್ತೀಚೆಗೆ ಬಾಗಲಕೋಟೆಯಲ್ಲಿ ಕುರುಬ ಸಮುದಾಯದವರು ಮುಖ್ಯಮಂತ್ರಿ ಅವರಿಗೆ ಮನವಿ ನೀಡಲು ಮುಂದಾದಾಗ ಗೂಂಡಾ ಕಾಯ್ದೆ ದಾಖಲಿಸಿ, ಗಡಿಪಾರು ಮಾಡಲು ಸಿದ್ಧತೆ ನಡೆಸಲಾಯಿತು. ಆದರೆ ವಿದ್ವತ್ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿದರೂ ಮೊಹಮ್ಮದ್ ನಲಪಾಡ್‌ನನ್ನು ತಕ್ಷಣವೇ ಬಂಧಿಸಿಲ್ಲ. ಎಂಎಲ್‌ಎ ಮಗನೇನು ರಾಜಕುಮಾರನೇ? ಮೊಹಮ್ಮದ್ ನಲಪಾಡ್ ವಿರುದ್ಧ 11 ಪ್ರಕರಣವಿದ್ದರೂ ಗೂಂಡಾ ಕಾಯ್ದೆ ಏಕೆ ದಾಖಲಿಸಿಲ್ಲ. ಏಕೆ ಗಡಿಪಾರು ಮಾಡಿಲ್ಲ. ಕಾಂಗ್ರೆಸ್ ವಂಶಸ್ಥರೆಂದು ಪ್ರಕರಣ ದಾಖಲಿಸಿಲ್ಲವೇ? ನಿಮಗೆಂದೇ ಪ್ರತ್ಯೇಕ ಕಾನೂನು ತಂದುಕೊಂಡಿದ್ದೀರಾ?” ಎಂದು ಪ್ರಶ್ನಿಸಿದರು.
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಖಂಡನೆ
ಮೊಹಮ್ಮದ್ ನಲಪಾಡ್ ಬೆಂಬಲಿಗರು ಪೊಲೀಸ್ ಠಾಣೆ ಮುಂದೆಯೇ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಕೆ.ಆರ್.ಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನೊಬ್ಬ ಅಕ್ರಮ ಕೆಲಸಕ್ಕೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಅಧಿಕಾರಿ ಕಚೇರಿಗೆ ಪೆಟ್ರೋಲ್ ಹಾಕಿ ಸುಡಲು ಹೋಗಿದ್ದಾರೆ. ಇದು ರಾಜ್ಯಕ್ಕೆ ಶೋಭೆ ತರುವಂತದ್ದಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ವಿದ್ವತ್ ಮೇಲೆ ಹೋಟೆಲ್‌ನಲ್ಲಿ ಹಲ್ಲೆ ನಡೆಸುವುದು ಮಾತ್ರವಲ್ಲದೆ ಆಸ್ಪತ್ರೆಗೂ ಹೋಗಿ ಹೊಡೆದಿದ್ದಾರೆ. “ಫರ್ಜಿ ಕೆಫೆ’ಯಲ್ಲಿ ಕೋಟ್ಯಧಿಪತಿಗಳೇ ಮದ್ಯ, ಗಾಂಜಾ ಸೇವನೆಯಲ್ಲಿ ತೊಡಗುತ್ತಾರೆ. ಆ ಹೋಟೆಲ್ ವಿರುದ್ಧವೂ ಕ್ರಮ ಜರುಗಿಸಬೇಕು. ಘಟನೆ ಸಂಬಂಧ ಶಾಸಕ ಹ್ಯಾರಿಸ್ ಅವರು ವಿದ್ವತ್ ಹಾಗೂ ಜನರ ಕ್ಷಮೆ ಕೇಳಿದ್ದನ್ನು ಸ್ವಾಗತಿಸುತ್ತೇನೆ ಎಂದರು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ: ರಾಮಲಿಂಗಾರೆಡ್ಡಿ
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಮೊಹಮ್ಮದ್ ನಲಪಾಡ್ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇನ್ಸ್‌ಪೆಕ್ಟರ್ ಅಮಾನತುಗೊಳಿಸಿ, ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ. ಕೆ.ಆರ್.ಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ವಿರುದ್ಧ ಸ್ವಯಂ ಪ್ರೇರಣೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಎರಡೂ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳುವುದು ಸರ್ಕಾರ ಸಹಿಸುವುದಿಲ್ಲ. ಪ್ರೋತ್ಸಾಹಿಸುವುದೂ ಇಲ್ಲ. ಒಂದೆರಡು ಘಟನೆಗಳು ನಡೆದ ಮಾತ್ರಕ್ಕೆ ಇಡೀ ನಗರದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಹೇಳಬೇಡಿ. ಇಂತಹ ಘಟನೆಗಳು ಬಿಜೆಪಿ ಸರ್ಕಾರ ಇದ್ದಾಗಲೂ ನಡೆದಿವೆ, ಮುಂದೆಯೂ ನಡೆಯುತ್ತವೆ. ಅಪರಾಧ ಪ್ರಕರಣ ತಡೆಯಲಾಗುವುದಿಲ್ಲ. ಆದರೆ, ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಡೆದ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಇಳಿಮುಖವಾಗಿವೆ ಎಂದು ಸಮರ್ಥಿಸಿಕೊಂಡರು.
ಸದನದಲ್ಲೂ ಹ್ಯಾರಿಸ್ ಕ್ಷಮೆ
ಮಗನ ಕೃತ್ಯದಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ಶಾಸಕ ಎನ್. ಎ.ಹ್ಯಾರಿಸ್ ಮಂಗಳವಾರ ಸದನದಲ್ಲೇ ಕೈಮುಗಿದು ಕ್ಷಮೆಯಾಚಿಸಿದರು. ಪ್ರಕರಣದ ಬಗ್ಗೆ ನನಗೆ ತೀವ್ರ ನೋವಿದೆ. ನಾನು ಈ ಮನೆಯ (ವಿಧಾನಸಭೆ) ಸದಸ್ಯ, ಜತೆಗೆ ಒಬ್ಬ ತಂದೆ ಕೂಡ. ನನ್ನ ಮಗ ತಪ್ಪು ಮಾಡಿದ್ದು, ಆತನನ್ನು ಶರಣಾಗತಿ ಮಾಡಿಸಿದ್ದೇನೆ. ಯಾವುದೇ ತಂದೆಗೆ ಇಂತಹ ಸ್ಥಿತಿ ಬರಬಾರದು ಎಂದು ಭಾವುಕರಾದರು.
ಸದನದಲ್ಲಿರುವವರಿಗೂ ಮಕ್ಕಳಿದ್ದಾರೆ. ತಪ್ಪು ಮಾಡಿದಾಕ್ಷಣ ಸಂಬಂಧವಿಲ್ಲ ಎಂದು ಹೇಳಲಾಗದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ನನ್ನ ಮಗನೂ ಹೊರತಲ್ಲ. ತಪ್ಪು ತಪ್ಪೇ. ನನ್ನ ಮಗನಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರುತ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಕೈ ಮುಗಿದರು. ಮಾಧ್ಯಮದವರ ಮೇಲಿನ ಹಲ್ಲೆಗೂ ನನ್ನ ಮಗನಿಗೂ ಸಂಬಂಧವಿಲ್ಲ. ಆದರೂ ಆ ಬಗ್ಗೆಯೂ ನಾನು ಕ್ಷಮೆಯಾಚಿಸುತ್ತೇನೆ. ಮೃತ ದೇಹಕ್ಕೆ ಮತ್ತೆ ಚಾಕುವಿನಿಂದ ಚುಚ್ಚುವುದು ಬೇಡ ಎಂದು ಮನವಿ ಮಾಡಿದರು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಮೊಹಮ್ಮದ್ ನಲಪಾಡ್ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇನ್ಸ್‌ಪೆಕ್ಟರ್ ಅಮಾನತುಗೊಳಿಸಿ, ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ.
– ರಾಮಲಿಂಗಾರೆಡ್ಡಿ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.