ಲಂಬಾಣಿ ಸಮುದಾಯಕ್ಕೆ ಸ್ಥಾನಮಾನ
Team Udayavani, Jun 18, 2018, 11:49 AM IST
ಬೆಂಗಳೂರು: ಲಂಬಾಣಿ ಸಮಾಜದ ನೋವು ಏನು ಎಂಬುದು ತಿಳಿದಿದೆ. ರಾಜಕೀಯವಾಗಿ ಈ ಸಮುದಾಯದ ಪ್ರಾತಿನಿಧ್ಯದ ಬಗ್ಗೆಯೂ ಅರಿವಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಾ.ಎಂ.ಶಂಕರ್ ನಾಯ್ಕ ಸ್ಮಾರಕ ಟ್ರಸ್ಟ್‌ವತಿಯಿಂದ ಭಾನುವಾರ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ದಿ.ಡಾ.ಶಂಕರ್ ನಾಯ್ಕ ಅವರ 71ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಲಂಬಾಣಿ ಸಮಾಜದೊಂದಿಗೆ ನಾವಿದ್ದೇವೆ. ಸಮಾಜದ ಶಾಸಕರಾದ ರಾಜೀವ್, ಜಾಧವ್ ಮೊದಲಾದವರು ಸಮಾಜದ ನೋವನ್ನು ಹೇಳಿಕೊಳ್ಳುತ್ತಿರುತ್ತಾರೆ. ಯಾರು ಕೂಡ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಲಂಬಾಣಿ ಸಮಾಜ ನಂಬಿಕೆಗೆ ಅರ್ಹವಾದ ಸಮಾಜ. ಪ್ರೀತಿ ತೋರಿಸುವ ಪ್ರತಿಯೊಬ್ಬರು ನಮ್ಮವರೇ ಎಂದು ಹೇಳಿದರು.
ಶಂಕರ್ ನಾಯ್ಕ ಅವರ ಮಕ್ಕಳು ಮುಂಚೆಯೇ ಸಂಪರ್ಕಿಸಿದ್ದರೆ ಯಾವುದಾದರೂ ಒಂದು ಹುದ್ದೆ ಕೊಡಬಹುದಿತ್ತು. ಆದರೆ, ಈಗ ಅವಕಾಶ ಕೇಳಿರುವುದು ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತಾಗಿದೆ. ಮುಂದೆ ಯಾವುದಾದರೂ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದರು.
ಶಂಕರ್ ನಾಯ್ಕ ಒಳ್ಳೆಯ ಸ್ನೇಹಿತರಾಗಿದ್ದರು. ನಾವಿಬ್ಬರು ಒಟ್ಟಿಗೆ ಜಿಪಂ ಸದಸ್ಯರಾಗಿದ್ದೆವು. ರಾಜಕಾರಣದಲ್ಲಿ ಭಿನ್ನಾಪ್ರಯವಿದ್ದರೂ ಸ್ನೇಹಿತರಾಗಿ ಚೆನ್ನಾಗಿದ್ದೆವು. ಭಕ್ತ-ಭಗವಂತನ ಸ್ನೇಹ ನಮ್ಮದಾಗಿತ್ತು. ಇಬ್ಬರು ಒಟ್ಟಿಗೆ ಶಾಕರಾಗಿದ್ದೆವು ಎಂಬುದನ್ನು ನೆನಪಿಸಿಕೊಂಡರು.
ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಶಂಕರ್ ನಾಯ್ಕ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು. ಗ್ರಾಮೀಣ ಜನರ ಸೇವೆಗೆ ಮುಂದಾಗಿದ್ದರು. ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ದೇಶಾದ್ಯಂತ ಸಂಚಾರ ಮಾಡಿ ಸಂಘಟನೆ ಮಾಡಿದ್ದರು. ರಾಜ್ಯದಲ್ಲಿ ಲಂಬಾಣಿ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ್ದರೂ, ದೇಶದಲ್ಲಿ ಈ ಸ್ಥಿತಿ ಇಲ್ಲ. ಎಲ್ಲ ರಾಜ್ಯಗಳಲ್ಲೂ ಲಂಬಾಣಿಗಳು ಎಸ್ಸಿ ಪಟ್ಟಿಗೆ ಸೇರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಥಾಕರ್ ನಾಯ್ಕ ಅವರಿಗೆ ಡಾ.ಶಂಕರ್ ನಾಯ್ಕ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾಮಂತ್ರಿ ಭಾರತ್ ಸಾಧು ಸಮಾಜ್ ಬೋಲಗಿರಿ ಆಶ್ರಮದ ಚೇತನ್‌ಗಿರಿ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ, ವಿಶ್ರಾಂತ ಕುಲಪತಿ ಡಾ.ರವೀಂದ್ರ, ಶಾಸಕರಾದ ಪಿ.ರಾಜೀವ್, ಡಾ.ಉಮೇಶ್ ಜಿ.ಜಾಧವ್, ಟ್ರಸ್ಟ್‌ನ ಪ್ರಮುಖರಾದ ಸಪ್ತಗಿರಿ ಮೊದಲಾದವರು ಉಪಸ್ಥಿತರಿದ್ದರು.
ಶಂಕರ್ ನಾಯ್ಕ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಹೀಗಾಗಿ ಮೂಡಬಿದರೆಯಲ್ಲಿ ಸಿದ್ಧವಾಗುತ್ತಿರುವ 250 ಹಾಸಿಗೆಗಳ ಆಸ್ಪತ್ರೆಗೆ ಅವರ ಹೆಸರನ್ನು ನಾಮಕರಣ ಮಾಡಲಿದ್ದೇವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅವರ ಹೆಸರಿನಡಿ ಪ್ರತಿ ವರ್ಷ 5 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದ್ದೇವೆ.
-ಡಾ.ಎಂ.ಮೋಹನ್ ಆಳ್ವ, ಮುಖ್ಯಸ್ಥ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.