ಹೆಜ್ಜೆ-ಗೆಜ್ಜೆಯ ನೃತ್ಯ ನಿನಾದ
Team Udayavani, Jan 29, 2018, 12:28 PM IST
ಬೆಂಗಳೂರು: ಅಲ್ಲಿ ಗಂಧರ್ವ ಲೋಕವೊಂದು ಮೇಳೈಸಿತ್ತು. ಸಂಗೀತದ ಜತೆ ತಾಳ ಮೇಳ ಮತ್ತಷ್ಟು ಕಳೆ ತಂದಿತ್ತು. ನಡು ನಡುವೆ ನೃತ್ಯಾರಾಧಕರ ಪುಳಕ ಹೇಳತೀರದಾಗಿತ್ತು. ಪುಟಾಣಿ ಕಲಾವಿದರ ಹೆಜ್ಜೆಯೊಂದಿಗಿನ ಗೆಜ್ಜೆಯ ಸದ್ದು, ಇಡೀ ಕಾರ್ಯಕ್ರಮಕ್ಕೆ ಅಂದ ನೀಡಿತು.
ಹೆಸರಾಂತ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರ ಪರಿಕಲ್ಪನೆಯಲ್ಲಿ, ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಶಂಕರ ಫೌಂಡೇಷನ್‌ನಲ್ಲಿ ನಡೆದ ಎರಡು ದಿನಗಳ ನೃತ್ಯ ಮೇಳ “ಡ್ಯಾನ್ಸ್ ಜಾತ್ರೆ-2018′ ಕಲಾರಾಧಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಜತೆಗೆ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಗಮನಸೆಳೆಯಿತು.
ಶನಿವಾರ ಬೆಳಗ್ಗೆಯಿಂದ ಭಾನುವಾರ ರಾತ್ರಿವರೆಗೂ ನಡೆದ ನೃತ್ಯ ಜಾತ್ರೆಯಲ್ಲಿ ಹೆಸರಾಂತ ಭರತನಾಟ್ಯ ಕಲಾವಿದೆ ಪದ್ಮಿನಿ ರವಿ, ಡ್ರಮ್ಸ್ ಕಲಾವಿದ ಅರುಣ್ ಕುಮಾರ್, ಹಿರಿಯ ನಾಟ್ಯ ಕಲಾವಿದೆ ರಾಧಾ ಶ್ರೀಧರ್, ಭುವನೇಶ್ವರದ ರತಿಕಾಂತ್ ಮಹಾಪಾತ್ರ, ಶ್ರೀವಿದ್ಯಾ ಮುರಳೀಧರ್ ಸೇರಿ ಹೆಸರಾಂತ ಕಲಾವಿದರ ದಂಡೇ ಪಾಲ್ಗೊಂಡಿತ್ತು.
ಬಾಂಗ್ಲಾದೇಶ, ಚೀನಾ, ಕೋಲ್ಕತ್ತಾ, ದೆಹಲಿ, ಮುಂಬೈ ಸೇರಿದಂತೆ ರಾಜ್ಯದ ಪುಟಾಣಿ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು. ಸುಮಾರು ಆರು ನೂರು ಕಲಾವಿದರು ವಿವಿಧ ಪ್ರಕಾರದ ನಾಟ್ಯಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಲಾರಾಧಕರ ಪ್ರಶಂಸೆಗೆ ಪಾತ್ರರಾದರು.
ಎರಡು ವೇದಿಕೆಗಳಲ್ಲಿ ಹಿರಿಯ ಮತ್ತು ಕಿರಿಯರ ನೃತ್ಯ ಸ್ಪರ್ಧೆ ನಡೆದರೆ ಮತ್ತೂಂದೆಡೆ ಕಥಕ್, ಭರತನಾಟ್ಯ, ಕಾರ್ಯಗಾರ, ಸಂವಾದ ಕಾರ್ಯಕ್ರಮಗಳು ಕೂಡ ನಡೆದವು. ಇದರ ಜತೆ ನೃತ್ಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶ ಕೂಡ ನೋಡುಗರ ಗಮನಸೆಳೆಯಿತು.
ಡ್ಯಾನ್ಸ್ ಜಾತ್ರೆಯ ಬಗ್ಗೆ ಯುವ ನೃತ್ಯಕಲಾವಿದರಾದ ಕೆ.ಆರ್.ಪುರಂನ ಚಂದನ್ ಮತ್ತು ದೇವಸಂದ್ರದ ಮಧುಸೂದನ್ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಶ್ರೇಷ್ಠ, ದಿಗ್ಗಜ ನೃತ್ಯ ಕಲಾವಿದರು ಭಾಗವಹಿಸಿರುವ ಮೇಳದಲ್ಲಿ ಪಾಲ್ಗೊಂಡಿರುವುದೇ ಒಂದು ಹೆಮ್ಮೆ ಎಂದರು.
ನೃತ್ಯ ಹಬ್ಬದ ಪರಿಕಲ್ಪನೆ: “ಊರಿನಲ್ಲಿ ಜಾತ್ರೆ, ಹಬ್ಬ ಮಾಡಿದಂತೆ ನೃತ್ಯ ಹಬ್ಬ ಯಾಕೆ ಮಾಡಬಾರದು ಎಂಬ ಪರಿಕಲ್ಪನೆ ನನ್ನಲ್ಲಿ ಮೂಡಿತು. ಹೀಗಾಗಿ ಇದೇ ಮಾದರಿಯಲ್ಲಿ ನಾವು ನೃತ್ಯ ಹಬ್ಬವನ್ನು ಆಚರಿಸಬೇಕು ಎಂದು ಆಲೋಚಿಸಿ “ಡ್ಯಾನ್ಸ್ ಜಾತ್ರೆ’ಗೆ ಚಾಲನೆ ನೀಡಲಾಯಿತು,’ ಎಂದು ಕಾರ್ಯಕ್ರಮದ ಮುಖ್ಯ ರೂವಾರಿ ಹಾಗೂ ಪ್ರಸಿದ್ಧ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಹೇಳಿದರು.
“7 ವರ್ಷಗಳಿಂದ ಈ ಜಾತ್ರೆ ನಡೆಯುತ್ತಿದೆ. ಕಳೆದ ಭಾರಿ ಧಾರವಾಡದಲ್ಲಿ ಡಾನ್ಸ್ ಜಾತ್ರೆ ನಡೆದಿತ್ತು.ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಆಯೋಜಿಸಿದ್ದು ಇಲ್ಲಿಯೂ ಕಲಾರಾಧಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕಲಾವಿದರಿಗೂ ತಮ್ಮ ಪ್ರತಿಭೆಯನ್ನು ಸಭಿಕರ ಮುಂದೆ ಪ್ರದರ್ಶಿಸಲು ದೊಡ್ಡ ವೇದಿಕೆಯಾಯಿತು,’ ಎಂದು ಖುಷಿಪಟ್ಟರು.
ನೃತ್ಯಕಲಾವಿದರಿಗೆ ಇದೊಂದು ದೊಡ್ಡ ವೇದಿಕೆ.ದೇಶ ವಿದೇಶಗಳಿಂದಲೂ ಹಲವು ಪ್ರತಿಭಾನ್ವಿತ ನೃತ್ಯ ಕಲಾವಿದರು ಇಲ್ಲಿ ಪಾಲ್ಗೊಂಡಿದ್ದಾರೆ.ಅವರೊಂದಿಗೆ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ.
-ಧಾನ್ಯಶ್ರೀ ಜಯನಗರ, ಯುವ ಭರತನಾಟ್ಯ ಕಲಾವಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.