ಮಾರುಕಟ್ಟೆಯಲ್ಲಿಗ ದೀಪಾವಳಿ ಕಳೆ…

ಹಸಿರು ಪಟಾಕಿ ಸಡಗರ „ ದೀಪಗಳ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಇಂಬು ನೀಡುತ್ತಿರುವ ಮಳಿಗೆಗಳು

Team Udayavani, Nov 1, 2021, 11:04 AM IST

ದೀಪಾವಳಿ

Representative Image used

ಬೆಂಗಳೂರು: ದೀಪಾವಳಿಯ ಹಬ್ಬಕ್ಕೆ ಮುನ್ನವೇ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಮಾರುಕಟ್ಟೆ ಯಲ್ಲಿ ಭಿನ್ನಶೈಲಿಯ ಅಲಂಕಾರಿಕ ವಸ್ತುಗಳು ಕಾಣ ತೊಡಗಿವೆ. ಇದರ ಜತೆಗೆ ದೀಪದ ಹಬ್ಬಕೆ ಕಳೆತುಂ ಬುವ ಪಟಾಕಿಗಳ ಮಾರಾಟ ಕೂಡ ಆರಂಭವಾಗಿದ್ದು ಸಡಗರ ಮತ್ತಷ್ಟು ಹೆಚ್ಚಾಗಿದೆ.

ತಮಿಳನಾಡಿನ ಹೊಸೂರು, ಅನೇಕಲ್‌, ಚಂದಾ ಪುರ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟ ಪ್ರಕ್ರಿಯೆಯ ಕಳೆ ಕಾಣತೊಡ ಗಿದೆ. ನಗರದ ಹಲವು ಕಡೆಗಳಲ್ಲಿ ಈಗಾಗಲೇ ಪಟಾಕಿ ಮಾರಾಟದ ಅಂಗಡಿಗಳು ತಲೆಎತ್ತಿದ್ದು ದೀಪದ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಇಂಬು ತಂದಿದೆ. ಕಳೆದ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿ ಗಳ ಮಾರಾಟದ ಮೇಲೆ ನಿರ್ಬಂಧಗಳ ಹೇರಿತ್ತು.

ಹಸಿರು ಪಟಾಕಿಗಳ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಈ ವರ್ಷ ಕೂಡ ಸರ್ಕಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದೆವು. ಆದರೆ ಈಗ ಸರ್ಕಾರ ಹಸಿರು ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿರುವುದು ಖುಷಿ ತಂದಿದೆ ಎಂದು ಪಟಾಕಿ ಮಾರಾಟಗಾರರು ಹೇಳುತ್ತಾರೆ.

ಹೊಸ ಪಟಾಕಿಗಳು ಇನ್ನೂ ಬಂದಿಲ್ಲ: ಕೋವಿಡ್‌ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ಕಳೆದ ಬಾರಿ ಪಟಾಕಿಗಳ ಮಾರಾಟ ಕುಸಿದಿತ್ತು.ಈ ಬಾರಿ ಕೋವಿಡ್‌ ಹತೋಟಿ ಯಲ್ಲಿ ಇರುವುದರಿಂದ ಒಂದಿಷ್ಟು ವ್ಯಾಪಾರವಾಗಬಹುದು ಕಳೆದ ವರ್ಷದ ನಷ್ಟವನ್ನು ಸರಿ ದೂ ಗಿಸ ಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಜಯನಗರದ ಧಮಾಕ ಸ್ಟೋರ್‌ನ ವ್ಯಾಪಾರಿ ಚಂದನ್‌ ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಈ ವರ್ಷ ಹೊಸ ರೀತಿಯ ಪಟಾಕಿಗಳು ಬಂದಿಲ್ಲ 50ರೂ.ದಿಂದ 5000ರೂ.ವರೆಗಿನ ಪಟಾಕಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸುರ್‌ ಸುರಬತ್ತಿ, ಹೂಕುಂಡ, ವಿಷ್ಣು ಚಕ್ರ, ಸ್ಕೈ ಶಾಟ್‌, ಮಕ್ಕಳ ಪಟಾಕಿಗಳು ಸೇರಿದಂತೆ 200ಕ್ಕೂ ಅಧಿಕ ಶೈಲಿಯ ಸಾಂಪ್ರದಾಯಿಕ ಪಟಾಕಿಗಳು ದೊರೆಯಲಿವೆ ಎಂದು ಮಾಹಿತಿ ನೀಡುತ್ತಾರೆ.

ಈ ಹಿಂದಿನಂತೆ ಆರ್ಡರ್‌ ಬರುತ್ತಿಲ್ಲ: ಈ ಹಿಂದೆ ದೀಪಾ ವಳಿ ಆರಂಭದ ಒಂದೇರಡು ವಾರದ ಹಿಂದೆಯೇ ಪಟಾಕಿಗಳಿಗೆ ಆರ್ಡರ್‌ ಬರುತ್ತಿತ್ತು. ಆದರೆ ಈ ಬಾರಿ ಆ ರೀತಿಯ ವಾತಾವಾರಣವಿಲ್ಲ. ಹಸಿರು ಪಟಾಕಿ ಅಂತಾನೋ ಗೊತ್ತಿಲ್ಲ ಜನರು ಆರ್ಡರ್‌ ಮಾಡುತ್ತಿಲ್ಲ. ಈ ಹಿಂದೆ ಗ್ರಾಹಕರು 5 ನೂರ ರಿಂದ 5 ಸಾವಿರ ರೂ. ಮುಖ ಬೆಲೆಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಯಿಲ್ಲ ಎಂದು ಸ್ವಾತಿ ಡೀಲರ್ಸ್‌ನ ಮಾಲೀಕ ನಿತೀಶ್‌ ಹೇಳುತ್ತಾರೆ. ಹಬ್ಬದ ಕಳೆ ಈಗ ಆರಂಭವಾಗುತ್ತಿದೆ.ಇನ್ನೂ ಒಂದೆರಡು ದಿನ ಏನೂ ಹೇಳಲಾಗದು. ಕೆಲವರು ಶಿವಕಾಶಿಗೆ ಹೋಗಿ ಪಟಾಕಿ ಗಳನ್ನು ಖರೀದಿ ಮಾಡು ತ್ತಾರೆ. ಇನ್ನೂ ಕೆಲವರು ಹೊ ಸೂರಿಗೆ ಹೋಗಿ ರಾಶಿಗಟ್ಟಲೆ ಪಟಾಕಿ ಖರೀದಿಸುತ್ತಾರೆ. ಹಸಿರು ಪಟಾಕಿ ಯನ್ನು ಗ್ರಾಹಕರು ಖರೀದಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ತಿಳಿಸುತ್ತಾರೆ.‌

ಇದನ್ನೂ ಓದಿ;- ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸಮಂಜಸವಲ್ಲ: ಮುರುಗೇಶ್ ನಿರಾಣಿ

“ಬಣ್ಣ ಬಣ್ಣಗಳಿಂದ ತಯಾರಾಗುವ ಪಟಾಕಿಗಳು ಅಪಾಯಕಾರಿಗಳಾಗಿವೆ. ಹೆಚ್ಚಿನ ಪ್ರಮಾಣದ ರಾಸಾಯಿನಿಕಗಳನ್ನು ಬಳಕೆ ಮಾಡಿ ಅವುಗಳನ್ನು ತಯಾರು ಮಾಡಲಾಗುತ್ತದೆ. ಅದು ಗಾಳಿ ಮೂಲಕ ಹಾರಿಬಂದು ನೀರಿನಲ್ಲಿ ಸೇರಿರುತ್ತದೆ. ಆ ನೀರನ್ನು ಬಳಕೆ ಮಾಡುವುದರಿಂದ ಆರೋಗ್ಯದ ಮೇಲೂ ಅದು ಪ್ರಭಾವ ಬೀರು ಸಾಧ್ಯತೆ ಇರುತ್ತದೆ.” ಶ್ರೀನಿವಾಸುಲು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ

ಹಸಿರು ಪಟಾಕಿ ಯಾವುದು?

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಹೊಗೆ ಉಗುಳುವ, ಕಡಿಮೆ ಪ್ರಮಾ ಣದ ಮಾಲಿನ್ಯಕಾರಕ ಕಣಗಳನ್ನು ಹೊರಹಾಕುವ ಪಟಾಕಿಗಳನ್ನು ಹಸಿರು ಪಟಾಕಿಗಳು ಎಂದು ಹೇಳಲಾಗುತ್ತದೆ. ಮಾಲಿನ್ಯ ಮತ್ತು ಹೊಗೆಯು ಎಷ್ಟು ಪ್ರಮಾಣದಲ್ಲಿ ಕಡಿಮೆ ಇರಬೇಕು ಎಂಬು ದನ್ನು ಈಗಾಗಲೇ ರಾಷ್ಟ್ರೀಯ ಪರಿಸರ ಎಂಜನಿಯ ರಿಂಗ್‌ ಸಂಶೋಧನಾ ಸಂಸ್ಥೆ ಸ್ಪಷ್ಟಪಡಿಸಿದೆ.

ಕಡಿಮೆ ಬೆಳಕು ಮತ್ತು ಶಬ್ಧ ಹೊರಸೂಸುವ ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋ ಜನ್‌ ಆಕ್ಸೆ„ಡ್‌,ಸೆಲ್ಫರ್ ಡೈ ಆಕ್ಸೈಡ್ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ. ಕೌನ್ಸಿಲ್‌ ಫಾರ್‌ ಸೈಂಟಿಫಿಕ್ ಆ್ಯಂಡ್‌ ಇಂಡಸ್ಟ್ರೀಸ್‌ ರಿಸರ್ಚ್‌ (ಸಿಎಸ್‌ಐಆರ್‌) ಅಭಿವೃದ್ದಿ ಪಡಿಸಿದ ಹಸಿರು ಪಟಾಕಿಗಳು ಮಾಲಿನ್ಯಕಾರಕಗಳನ್ನು ತಮ್ಮ ಸಂಪ್ರ ದಾಯಿಕ ಪ್ರತಿರೂಪಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಹೊರ ಸೂಸುತ್ತವೆ.

ಹಾಗೆಯೇ ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯಿನಿಗಳಿಂದ ತಯಾರು ಮಾಡಲಾಗಿರುತ್ತದೆ. ಈ ಹಸಿರು ಪಟಾಕಿಗಳ ಪತ್ತೆಗಾಗಿಯೇ ಹಸಿರು ಲೋಗೊ ಮತ್ತು ಕ್ಯೂ ಆರ್‌ ಕೋಡಿಂಗ್‌ ಹಾಕಲಾಗಿರುತ್ತದೆ. ಸಾಮಾನ್ಯ ಪಾಟಾಕಿಗಳಲ್ಲಿ ನೈಟ್ರೇಟ್‌ ಮತ್ತು ಬೇರಿ ಯಂಗಳು ಕಂಡುಬರುತ್ತವೆ. ಈ ರಾಸಾಯಿನಿಕ ಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಹಾಗೆಯೇ ಹಸಿರು ಪಟಾಕಿಗಳು ಸಿಡಿದಾಗಲೂ ಆವಿ ಮತ್ತು ಹೊಗೆ ಹೊರಹಾಕುವುದರನ್ನು ದುರ್ಬಲ ಮಾಡುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂ ಮಿನಿಯಂ ಮತ್ತು ಥರ್ಮೈಟ್‌ ಇರುತ್ತದೆ.

ಜತೆಗೆ ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬಲ್‌ ಧ್ವನಿ ಯನ್ನು ಹೊರಸೂಸುತ್ತವೆ. ಆದರೆ ಹಸಿರು ಪಟಾಕಿಗಳು ಹೊರಸೂಸುವಿಕೆ ಧ್ವನಿ 110ರಿಂದ 120 ಡೆಸಿಬಲ್‌ ಗಳಿಗೆ ಸೀಮಿತವಾಗಿರುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ರಾಷ್ಟ್ರೀಯ ಪರಿಸರ ಎಂಜನಿಯರಿಂಗ್‌ ಸಂಶೋ ಧನಾ ಸಂಸ್ಥೆ (ನೀರಿ) ಹಸಿರು ಪಟಾಕಿ ಏನು ಎಂಬುವು ದನ್ನು ಕೂಡ ವಿವರಿ ಸಿದೆ. ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯ ಶೇ.30ರಷ್ಟು ಕಡಿಮೆ ಆಗಬೇಕು ಎಂಬುವುದು ನೀರಿ ಮಾನದಂಡದಲ್ಲಿರುವ ಮುಖ್ಯಾಂ ಶ ವಾಗಿದೆ ಎಂದು ಹೇಳಿದ್ದಾರೆ. “ನೀರಿ’ ಪ್ರಮಾಣೀಕರಿಸಿದ ಪಟಾಕಿಗಳು ಮಾತ್ರ ಹಸಿರು ಪಟಾಕಿಗಳಾಗಿರುತ್ತವೆ ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

– ದೇವೇಶ ಸೂರಗುಪ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.