ಬೀದಿ ದೀಪದ ಬೆಳಕು ಬದುಕು ರೂಪಿಸಿತು


Team Udayavani, Feb 18, 2018, 12:49 PM IST

bidi-deepa.jpg

ಬೆಂಗಳೂರು: “ಬೀದಿ ದೀಪದ ಕೆಳಗಿನ ಬೆಳಕಲ್ಲಿನ ಓದು ಮತ್ತು ಡಾ.ಎಚ್‌.ನರಸಿಂಹಯ್ಯ ಅವರ ಒಡನಾಟ ನನ್ನ ಬದುಕನ್ನು ರೂಪಿಸಿತು ಎಂದು ರಂಗ ಸಂಘಟಕ ಶ್ರೀನಿವಾಸ್‌ ಜಿ.ಕಪ್ಪಣ್ಣ  ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ತಮ್ಮ ಬದುಕಿನ ಕ್ಷಣಗಳ ಮೆಲುಕು ಹಾಕಿದರು. “ಕಪ್ಪಣ್ಣ ಎಂಬುವುದಕ್ಕೆ ಒಂದು ಪುಟ್ಟ ಕಥೆ ಇದೆ. ನಾನು ನೋಡಲು ಕಪ್ಪಗಿದ್ದ ಕಾರಣ ಎಲ್ಲರೂ ನನ್ನನ್ನು “ಕಪ್ಪಣ್ಣ’ ಎನ್ನುತ್ತಿದ್ದರು. ಅದೇ ಮುಂದೆ ನನ್ನ ಹೆಸರಿನ ಅವಿಭಾಜ್ಯ ಅಂಗವಾಗಿ ಅಚ್ಚಳಿಯದೆ ಉಳಿಯಿತು,’ ಎಂದು ತಮ್ಮ ನಿಕ್‌ ನೇಮ್‌ ಸ್ವಾರಸ್ಯ ಬಿಡಿಸಿಟ್ಟರು.

“ಗಾಂಧಿ ಬಜಾರ್‌ನ ಕಾರ್ಪೊರೇಷನ್‌ ಶಾಲೆಯಲ್ಲಿ ಆರಂಭವಾದ ನನ್ನ ಶೈಕ್ಷಣಿಕ ಜೀವನ ಹಲವು ಏರುಪೇರುಗಳಿಂದ ಕೂಡಿದೆ. ರಂಗ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದ ನನಗೆ ವಿಜಯಾ ಪ್ರೌಢಶಾಲೆ ಮತ್ತಷ್ಟು ಅವಕಾಶ ನೀಡಿತು. ಎಷ್ಟೇ ಬಡತನ ಇದ್ದರೂ ಅವಕಾಶಗಳನ್ನು ಕೈಚೆಲ್ಲದೆ ಅವುಗಳನ್ನು ಬೆಂಬತ್ತಿ ಹೋಗುತ್ತಿದ್ದೆ. ಬೆಳಕು ವಿನ್ಯಾಸ ಕ್ಷೇತ್ರ ನನಗೆ ಬದುಕು ಕಟ್ಟಿಕೊಟ್ಟಿದೆ. ಬೀದಿ ದೀಪದ ಕೆಳಗಿನ ಓದು ನನ್ನನ್ನು ರಂಗಭೂಮಿಯಲ್ಲಿ ಬೆಳಕು ವಿನ್ಯಾಸಕನಾಗಿ ಬೆಳೆಸಿತು.

ಗಿರೀಶ್‌ ಕಾರ್ನಾಡರ “ತುಘಲಕ್‌’ ನಾಟಕದಲ್ಲಿ ಬೆಳಕು ವಿನ್ಯಾಸಕನಾಗಲು ಸಿಕ್ಕ ಅವಕಾಶ ನನಗೆ ಮತ್ತಷ್ಟು ಹೆಸರು ತಂದುಕೊಟ್ಟಿತು. ನಂತರ ಯಶಸ್ಸಿನ ಕುದುರೆಯನ್ನೇರಿ ದೇಶ-ವಿದೇಶ ತಿರುಗಾಡಿದೆ. ನಮ್ಮ ಮನೆಗೆ ವಿದ್ಯುತ್‌ ದೀಪ ಬರುವ ಮೊದಲೇ, ನಾನು ವಿಮಾನ ಏರಿದ್ದೆ,’ ಎಂದರು.

“ನಟರಂಗ ಮತ್ತು ಮೇಕಪ್‌ ನಾಣಿ ಜತೆಗಿನ ಕೆಲಸ, ಬಿ.ವಿ.ಕಾರಂತರೊಡಗಿನ ಒಡನಾಟ ನನ್ನ ಬದುಕಿಗೆ ತಿರುವು ನೀಡಿತು’ ಎಂದ ಕಪ್ಪಣ್ಣ, ರಂಗ ವಿನ್ಯಾಸಕ ನಾಗೇಶ್‌ ಗೆಳೆತನ ಸೇರಿದಂತೆ ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ತಮ್ಮೊಟ್ಟಿಗಿದ್ದ ಎಲ್ಲ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು. 

“ಅವಕಾಶಕ್ಕಾಗಿ ಎಂದೂ ರಾಜಕೀಯ ಲಾಬಿ ಮಾಡಿದವನು ನಾನಲ್ಲ. ಕೆಲವರಿಗೆ ನನ್ನ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳಿವೆ. ಎಲ್ಲ ರಾಜಕೀಯ ಮುಖಂಡರೊಂದಿಗೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಆದರೆ ಯಾವತ್ತೂ ಯಾರ ಮುಂದೆಯೂ ಕೈಚಾಚಿಲ್ಲ. ಇದು ಇಲಾಖಾವಾರು ಅಧಿಕಾರಿಗಳಿಗೆ ತಿಳಿದಿದೆ. ಕೈಚಾಚಿ ನಿಲ್ಲುವುದನ್ನು ರಂಗಭೂಮಿಯ ನಂಟು ಹೇಳಿಕೊಟ್ಟಿಲ್ಲ,’ ಎಂದು ನುಡಿದರು.

“ದಲಿತ ಕಲಾವಿದರನ್ನು ಅಕ್ಕ ಸಮ್ಮೇಳನ ಸೇರಿದಂತೆ ಹಲವು ಸಮ್ಮೇಳನಕ್ಕೆ ಕರೆದುಕೊಂಡು ಹೋಗಿದ್ದು, ನನ್ನ ಬದುಕಿಗೆ ಖುಷಿ ಕೊಟ್ಟಿದೆ. ಈಗಲೂ ಪೌರಕಾರ್ಮಿಕ ಮಕ್ಕಳಿಗೆ ಜಾನಪದ ಕಲಾ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದೇನೆ. ನಾನು ಒಂದು ನಿರ್ಧಿಷ್ಟ ವಾದ ಕ್ಷೇತ್ರಕ್ಕೆ ಸೀಮಿತವಾದವನಲ್ಲ,’ ಎಂದರು.

ಇದೇ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಈ ಹಿಂದೆ ಈ ಕಾರ್ಯಕ್ರಮ ಕೇವಲ ಸಾಹಿತಿಗಳಿಗೆ ಸೀಮಿತವಾಗಿತ್ತು.ಆದರೆ ಇದರಲ್ಲಿ ಬದಲಾವಣೆ ಮಾಡಿ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವರನ್ನು ಅತಿಥಿಗಳಾಗಿ ಆಹ್ವಾನಿಸುವ ಸಂಪ್ರದಾಯ ಬಂದಿದೆ. ರಂಗ ಮತ್ತು ಜಾನಪದ ಕ್ಷೇತ್ರಕ್ಕೆ ಕಪ್ಪಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಹಲೋ… ಮೈಕ್‌ ಟೆಸ್ಟಿಂಗ್‌ 1, 2, 3…: “ವಾರ್ತಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದ ನಾನು, ಇಲಾಖೆ ವರಿಯಿಂದ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆ ಮತ್ತು ಮೈಕ್‌ ಸಿದ್ಧಪಡಿಸುತ್ತಿದ್ದೆ. ಮೈಕ್‌ ಸಿದ್ಧಪಡಿಸುವಾಗ “ಹಲೋ… ಮೈಕ್‌ ಟೆಸ್ಟಿಂಗ್‌; ಹಲೋ… ಲೈಟ್‌ ಸರಿ ಇದೆಯಾ’ ಎಂದು ಕೂಗಿ ಕೇಳುವುದು ಅಭ್ಯಾಸವಾಗಿತ್ತು.

ಆಗ ಹಾಗಿದ್ದವನು, ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ,’ ಎಂದು ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ನೆನದ ಶ್ರೀನಿವಾಸ ಜಿ. ಕಪ್ಪಣ್ಣ, “36 ವರ್ಷಗಳ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ನಾಟಕ ಅಕಾಡೆಮಿಯ ಅಧ್ಯಕ್ಷನಾದೆ. ಈ ಅವಧಿಯಲ್ಲಿ ಜಾನಪದ ಜಾತ್ರೆ ಮತ್ತು ನಿತ್ಯೋತ್ಸವ ದಂತ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕೆಲಸ ಖುಷಿ ಕೊಟ್ಟಿದೆ,’ ಎಂದರು.

ಟಾಪ್ ನ್ಯೂಸ್

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.