ಮುಷ್ಕರದಿಂದ ಪತ್ರ,ದಾಖಲೆ ತಲುಪದೆ ಜನ ಕಂಗಾಲು
Team Udayavani, Jun 4, 2018, 6:30 AM IST
ಬೆಂಗಳೂರು: ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ರಾಜ್ಯದ ಗ್ರಾಮೀಣ ಭಾಗದ ಅಂಚೆ ವ್ಯವಸ್ಥೆ ಸಂಪೂರ್ಣ ಸ್ತಬಟಛಿಗೊಂಡಿದೆ. ಕಮಲೇಶ್ ಚಂದ್ರ ವರದಿ ಜಾರಿಗೆ ಆಗ್ರಹಿಸಿ ಮೇ 22ರಿಂದ ದೇಶಾದ್ಯಂತ ಸುಮಾರು 3.5 ಲಕ್ಷ ಮಂದಿ ಹಾಗೂ ರಾಜ್ಯದಲ್ಲಿ 17 ಸಾವಿರ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ.
ಮುಷ್ಕರ ಆರಂಭವಾದಾಗಿನಿಂದ ಗ್ರಾಮೀಣ ಭಾಗದ 11 ಸಾವಿರ ಅಂಚೆ ಕಚೇರಿಗಳ ಟಪಾಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಲಕ್ಷಕ್ಕೂ ಅಧಿಕ ಪತ್ರಗಳು ವಿಲೇವಾರಿ ಯಾಗದೆ ಉಳಿದಿವೆ. ಮುಷ್ಕರವು ಅಂಚೆಯ ಹಣಕಾಸು ವಹಿವಾಟಿನ ಮೇಲೆಯೂ ಪರಿಣಾಮ ಬೀರಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ.60ರಷ್ಟು ಹಣಕಾಸು ವ್ಯವಹಾರ ಕುಗ್ಗಿದೆ.
ಕೈ ಸೇರುತ್ತಿಲ್ಲ ಇಲಾಖೆ ಪತ್ರಗಳು: ಸರ್ಕಾರದ ವಿವಿಧ ಇಲಾಖೆಗಳು ಸಾರ್ವಜನಿಕರ ಯಾವುದೇ ದಾಖಲೆ ಪತ್ರಗಳ ವರ್ಗಾವಣೆ ಅಥವಾ ಸಂಪರ್ಕಕ್ಕೆ ಮುಖ್ಯವಾಗಿ ಅಂಚೆ ವ್ಯವಸ್ಥೆಯನ್ನೇ ಅವಲಂಬಿಸಿವೆ. ಇಲಾಖೆಗಳಿಂದ ತುರ್ತಾಗಿ ಪಡೆಯಬೇಕಾದ ಸಾರಿಗೆ ಇಲಾಖೆಯ ಚಾಲನಾ ಪರವಾನಗಿ (ಡಿ.ಎಲ್), ಪಾಸ್‌ಪೋರ್ಟ್ ಸೇವಾ ಕೇಂದ್ರದಿಂದ ಬರುವ ಪತ್ರಗಳು, ನೌಕರಿ ಸಂದರ್ಶನಕ್ಕೆ ಆಹ್ವಾನ ಹಾಗೂ ಆದೇಶ ಪತ್ರ, ನ್ಯಾಯಾಲಯದ ಪತ್ರಗಳು… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮುಷ್ಕರದಿಂದಾಗಿ ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಇಲಾಖೆಗಳಿಂದ ಬರುತ್ತಿರುವ ಪತ್ರಗಳು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿಯೇ ಶೇಖರಣೆಯಾಗುತ್ತಿವೆ.
ಕೆಲವೆಡೆ ತುರ್ತು ಪತ್ರ ಸೇವೆಗಳಿದ್ದಾಗ ಆ ಅಂಚೆ ಕಚೇರಿಯ ಅಧಿಕಾರಿಗಳು ಕರೆ ಮಾಡಿ ಬಂದು ಸಂಗ್ರಹಿಸಿಕೊಳ್ಳಲು
ಹೇಳುತ್ತಿದ್ದಾರೆ. ಆದರೆ, ಬಹುತೇಕ ಕಡೆ ಭದ್ರತೆಯ ವಿಷಯದಲ್ಲಿ ಹಿಂದೇಟು ಹಾಕಿ ಪತ್ರಗಳನ್ನು ಪುನಃ ಇಲಾಖೆಗಳಿಗೆ ಹಿಂದಿರುಗಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ತೊಂದರೆ: ಈಗಾಗಲೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು,
ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆ ನಕಲು ಪ್ರತಿ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ
ಸ್ವೀಕರಿಸುವ ಪರೀಕ್ಷಾ ಮಂಡಳಿಗಳು ವಿದ್ಯಾರ್ಥಿಗಳಿಗೆ ಉತ್ತರ ಪ್ರತಿ ನಕಲು ಪ್ರತಿಯನ್ನು ಅಂಚೆ ಮೂಲಕವೇ ರವಾನಿಸುತ್ತಿದ್ದು,ಮುಷ್ಕರದಿಂದ ಪ್ರತಿಗಳು ಗ್ರಾಮೀಣ ವಿದ್ಯಾರ್ಥಿಗಳ ಮನೆ ಅಥವಾ ಶಾಲೆಗೆ ತಲುಪುತ್ತಿಲ್ಲ. ಅಲ್ಲದೇ ಶಾಲೆ ಕಾಲೇಜು ಬದಲಾಯಿಸುತ್ತಿರುವ ಹಾಗೂ ಮುಂದಿನ ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವರ್ಗಾವಣಾ ಪತ್ರ ಅತ್ಯವಶ್ಯವಾಗಿದ್ದು, ಗ್ರಾಮೀಣ ಭಾಗದ ಶಾಲೆ, ಕಾಲೇಜುಗಳಿಗೆ ವರ್ಗಾವಣಾ ಪತ್ರ ಕೋರಿ ಬಂದ ಅರ್ಜಿಗಳು ಶಾಲೆ ತಲುಪುತ್ತಿಲ್ಲ.
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳು ಹಾಗೂ ವಿವಿಧ ಇಲಾಖೆಯ ನೌಕರರ ಪಿಂಚಣಿ ಪಿಂಚಣಿಯೂ ತಲುಪದೆ ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ಪ್ರತಿ ತಿಂಗಳ ಮೊದಲನೇ ವಾರ ಸರ್ಕಾರದಿಂದ ಬರುವ ಪಿಂಚಣಿಗಳನ್ನೇ ಅವಲಂಬಿಸಿ ಜೀವನ ನಡೆಸುವ ಗ್ರಾಮೀಣ ಫಲಾನುಭವಿಗಳಿಗೆ ತೊಂದರೆಯಾಗುವ ಆತಂಕ ಮೂಡಿದೆ.
ಈ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದೇವೆ. ನಗರ ಭಾಗದ ನೌಕರರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಷ್ಕರದ ಮೊರೆ ಹೋಗುವುದಿಲ್ಲ ಎಂಬ ಭರವಸೆ ಇದೆ.
– ರಾಜೇಂದ್ರ ಕುಮಾರ್,
ಮುಖ್ಯ ಅಂಚೆ ಅಧಿಕಾರಿ ದಕ್ಷಿಣ ಕರ್ನಾಟಕ ವಲಯ
ಕಮಲೇಶ್‌ಚಂದ್ರ ವರದಿ ಜಾರಿಗೆ ಆದೇಶ ಹೊರಡಿಸುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ಈಗಾಗಲೇ ರಾಜ್ಯದ 17 ಸಾವಿರ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿದ್ದು, ಜೂ.11ರಿಂದ ನಗರ ಪ್ರದೇಶಗಳ 4 ಸಾವಿರ ನೌಕರರು ಮುಷ್ಕರಕ್ಕೆ ಕೈಜೋಡಿಸಲಿದ್ದಾರೆ.
– ಕೆ.ಎಸ್.ರುದ್ರೇಶ್, ರಾಜ್ಯ ಕಾರ್ಯದರ್ಶಿ,
ಅಖೀಲ ಭಾರತ ಗ್ರಾಮೀಣ ನೌಕರರ ಸಂಘ
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.