Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Team Udayavani, Nov 26, 2024, 10:33 AM IST

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಂಗಳೂರು: ಪ್ರವಾಸಕ್ಕಾಗಿ ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳನ್ನು ಅಪಹರಿಸಿ ಗೃಹ ಬಂಧನದಲ್ಲಿರಿಸಿ 50 ಸಾವಿರ ರೂ. ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಂದ್ರಾಲೇಔಟ್‌ ನಿವಾಸಿಗಳಾದ ನಿತಿನ್‌ (32), ಶಶಾಂಕ್‌(34) ಮತ್ತು ವಿನೋದ್‌(30) ಬಂಧಿತರು. ಆರೋಪಿಗಳಿಂದ 30 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳೆದ ವಾರ ಐವರು ವಿದ್ಯಾರ್ಥಿಗಳನ್ನು ಅಪಹರಿಸಿ 50 ಸಾವಿರ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಮನೋಜ್‌ ಬನಿವಾಲ್‌ ಎಂಬ ವಿದ್ಯಾರ್ಥಿ ದೂರು ನೀಡಿದ್ದ ಎಂದು ಪೊಲೀಸರು ಹೇಳಿದರು.

ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಮನೋಜ್‌ ಬನಿವಾಲ್‌ ಸೇರಿ ಐವರು ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗಳು, ಮಡಿಕೇರಿಗೆ ಹೋಗಲು ನ.17ರಂದು ಆರೋಪಿ ವಿನೋದ್‌ ಮೂಲಕ ದಿನಕ್ಕೆ 2500 ರೂ. ಬಾಡಿಗೆ ಹಾಗೂ 500 ರೂ. ಕಮಿಷನ್‌ ಸೇರಿ 3000 ರೂ.ಗೆ ಒಂದು ಕಾರು ಬಾಡಿಗೆ ಪಡೆದುಕೊಂಡಿದ್ದರು.

ಈ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 100 ಕಿ.ಮೀ. ವೇಗದಲ್ಲಿ ಹೋಗಬಾರದು ಎಂದು ಷರತ್ತು ವಿಧಿಸಲಾಗಿತ್ತು. ಶ್ಯೂರಿಟಿಗಾಗಿ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್‌ ಮತ್ತು ಆಧಾರ್‌ ಕಾರ್ಡ್‌ ಹಾಗೂ ಕಾಲೇಜಿನ ಗುರುತಿನ ಚೀಟಿ ಪಡೆದುಕೊಂಡಿದ್ದರು. ಷರತ್ತಿಗೆ ಒಪ್ಪಿದ ವಿದ್ಯಾರ್ಥಿಗಳು 2 ದಿನಗಳ ಕಾಲ ಪ್ರವಾಸ ಮುಗಿಸಿಕೊಂಡು ಬಂದು, ವಾಪಸ್‌ ಬರುವಾಗ ಹೆದ್ದಾರಿಯಲ್ಲಿ 120 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿದ್ದಾರೆ.

ಬಳಿಕ ಕಾರು ವಾಪಸ್‌ ಕೊಡಲು ನಾಗರಬಾವಿಯ ಮಂಜುನಾಥ ಎಂಟರ್‌ಪ್ರೈಸಸ್‌ ಕಚೇರಿಗೆ ಬಂದಿದ್ದಾರೆ. ಈ ವೇಳೆ ವಿನೋದ್‌, ನೀವುಗಳು ಆರೇಳು ಬಾರಿ 120 ಕಿ.ಮೀ. ವೇಗದಲ್ಲಿ ಕಾರು ಚಾಲನೆ ಮಾಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ. ಅದಕ್ಕಾಗಿ 1.20 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಅದನ್ನು ನಿರಾಕರಿಸಿದ ವಿದ್ಯಾರ್ಥಿಗಳು, ಅಷ್ಟೊಂದು ದಂಡ ಆಗಿಲ್ಲ. ಬೇಕಾದರೆ, ನಾಲ್ಕೈದು ಸಾವಿರ ರೂ. ಕೊಡುತ್ತೇವೆ ಸಂಚಾರ ನಿಯಮ ಉಲ್ಲಂಘನೆಗೆ ಸಾಕ್ಷಿ ತೋರಿಸುವಂತೆ ಕೇಳಿದ್ದಾರೆ. ಆಗ ವಿನೋದ್‌, ತನ್ನ ಇತರೆ ಇಬ್ಬರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಐವರು ವಿದ್ಯಾರ್ಥಿ ಗಳನ್ನು ಅಪಹರಿಸಿ ಚಂದ್ರಾಲೇಔಟ್‌ನ ಮನೆಯೊಂದರಲ್ಲಿ ಒಂದು ದಿನ ಕೂಡಿ ಹಾಕಿ, ಹಲ್ಲೆ ನಡೆಸಿದ್ದಾರೆ.

ಬಳಿಕ ಸ್ನೇಹಿತರ ಮೂಲಕ 50 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳನ್ನು ಸಮೀಪದ ಪರಿಚಯಸ್ಥ ಅಂಗಡಿಗೆ ಕರೆದೊಯ್ದು 50 ಸಾವಿರ ರೂ. ಅನ್ನು ಪಡೆದ ಆರೋಪಿಗಳು, ತಡರಾತ್ರಿ ವಿದ್ಯಾರ್ಥಿಗಳನ್ನು ಮನೆ ಬಳಿ ಡ್ರಾಪ್‌ ಮಾಡಿದ್ದರು. ಈ ವೇಳೆ ವಿದ್ಯಾರ್ಥಿಗಳ ಮೊಬೈಲ್‌, ಲ್ಯಾಪ್‌ಟಾಪ್‌ಗ್ಳನ್ನು ಕಸಿದಕೊಂಡು ಪರಾರಿಯಾಗಿದ್ದರು ಎಂದು ವಿದ್ಯಾರ್ಥಿ ಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

1-gil

450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

ನನ್ನ ನಾಯಿಗಳಿಗೆ ಕ್ರಾಸಿಂಗ್‌ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್‌‌ ಏನೇನು ಗೊತ್ತಾ?

ನನ್ನ ನಾಯಿಗಳಿಗೆ ಕ್ರಾಸಿಂಗ್‌ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್‌‌ ಏನೇನು ಗೊತ್ತಾ?

1-gil

450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.