ಉಪನಗರ ರೈಲು ಯೋಜನೆಯೇ ಪರಿಹಾರ


Team Udayavani, Mar 5, 2017, 12:03 PM IST

TRAIB.jpg

ಏರ್‌ಪೋರ್ಟ್‌ ರಸ್ತೆಯ ನಿತ್ಯದ ಟ್ರಾಫಿಕ್‌ ತಗ್ಗಿಸಲು ಉಪನಗರ ರೈಲು ಯೋಜನೆ ಪರಿಹಾರವಾಗಬಹುದು. ಈ ರೈಲು ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅಸ್ಥೆ ತೋರದಿದ್ದರೂ, ಸರ್ಕಾರವೇ ಮುತುವರ್ಜಿ ವಹಿಸಬೇಕಿದೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ. ಸೀತಾರಾಂ.

ಇನ್ನೂ ಒಟ್ಟಾರೆ ನಗರದ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಹಾಡಬೇಕಿದ್ದರೆ, ಎಲ್ಲ ರೀತಿಯ ಸಾರಿಗೆ ಮಾದರಿಗಳು (ಬಸ್‌, ರೈಲು, ಮೆಟ್ರೋ, ವಿಮಾನ ನಿಲ್ದಾಣಗಳು) ಸಮ್ಮಿಲನಗೊಳ್ಳುವ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಸ್ಟೀಲ್‌ ಬ್ರಿಡ್ಜ್ ಯೋಜನೆ ಕೈಬಿಟ್ಟಿರುವುದನ್ನು ವಿರೋಧಿಸಿರುವ ಹೆಬ್ಟಾಳ ಭಾಗದ ಕೆಲ ನಾಗರಿಕ ಸಂಘಟನೆಗಳು ಯೋಜನೆಯನ್ನು ಜಾರಿಗೆ ತರಲೇಬೇಕೆಂದು ಇಂದು ಪ್ರತಿಭಟನೆ ಹಮ್ಮಿಕೊಂಡಿವೆ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ದೂರಲೂ ನಿರ್ಧರಿಸಿವೆ. 

* ಪ್ರೊ.ಟಿ.ಜಿ. ಸೀತಾರಾಂ, ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ: ಉಪನಗರ ರೈಲು ಯೋಜನೆ ಕುರಿತು ಸರ್ಕಾರ ಸಿದ್ಧಪಡಿಸಿದ “ಸಮಗ್ರ ಯೋಜನಾ ವರದಿ’ (ಡಿಪಿಆರ್‌)ಯ ಮೊದಲ ಹಂತದ ಮೊದಲ ಮಾರ್ಗವನ್ನು ಸರ್ಕಾರ ಜಾರಿಗೊಳಿಸಿದರೆ ಸಾಕು, ಹೆಬ್ಟಾಳ ಮಾರ್ಗದ ವಾಹನದಟ್ಟಣೆಗೆ ಅರ್ಧಕ್ಕರ್ಧ ಪರಿಹಾರ  ಸಿಕ್ಕಂತೆ. 

ಯಶವಂತಪುರ-ಚಿಕ್ಕಬಳ್ಳಾಪುರ ನಡುವೆ ಇರುವ ರೈಲು ಮಾರ್ಗದಲ್ಲಿ ನಿತ್ಯ ಒಂದೇ ಒಂದು ರೈಲು ಸಂಚರಿಸುತ್ತಿದೆ. ಇದು ಹಾದುಹೋಗುವ ಚಿಕ್ಕಜಾಲ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 3ರಿಂದ 5 ಕಿ.ಮೀ. ದೂರದಲ್ಲಿದೆ. ಇದನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಿ, ವಿದ್ಯುದ್ದೀಕರಣಗೊಳಿಸಿ ರೈಲು ಓಡಿಸಲು ಸರ್ಕಾರಕ್ಕಿರುವ ತೊಂದರೆ ಏನು? ಕೇವಲ 700ರಿಂದ 800 ಕೋಟಿ ರೂ.ಗಳಲ್ಲಿ ಈ ಯೋಜನೆ ಕಾರ್ಯಗತಗೊಳಿಸಬಹುದು. ಇದು ಪರ್ಯಾಯ ಅನಿಸುತ್ತಿಲ್ಲವೇ?

ಯಶವಂತಪುರದಲ್ಲಿ ಮೆಟ್ರೋ ಇದೆ. ಅದೇ ಯಶವಂತಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಹಾದುಹೋಗುವ ರೈಲು ಮಾರ್ಗವಿದೆ. ಇದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ಸರ್ಕಾರಕ್ಕೆ ಬೇಕಿದೆಯಷ್ಟೇ. 20ರಿಂದ 30 ನಿಮಿಷಕ್ಕೊಂದು ರೈಲು ಸೇವೆ ಕಲ್ಪಿಸಿದರೆ, ಆ ಮಾರ್ಗದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. 

ಬೇಕಿದ್ದರೆ ಚಿಕ್ಕಜಾಲದಿಂದ ವಿಮಾನ ನಿಲ್ದಾಣಕ್ಕೆ ಉಚಿತ ಬಸ್‌ ಸಂಪರ್ಕ ಸೇವೆ ಕಲ್ಪಿಸಲಿ. ಉಪನಗರ ರೈಲು ಯೋಜನೆಗೆ ಕೇಂದ್ರದತ್ತ ಬೊಟ್ಟು ಮಾಡಬಹುದು. ಹೌದು, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸದಿರುವುದು ಬೇಸರದ ಸಂಗತಿ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಅದನ್ನೇ ಹೇಳುತ್ತಾ ಕಾಲಹರಣ ಮಾಡುವುದಕ್ಕಿಂತ “ನಮ್ಮದೇ ಭೂಮಿ ಹಾಗೂ ನಾವೇ ಯೋಜನೆಗೆ ಶೇ. 80ರಷ್ಟು ಹಣ ಹಾಕುತ್ತೇವೆ’ ಎಂದು ರಾಜ್ಯ ಸರ್ಕಾರವೇ ಹೇಳಲಿ. ಆಗ ಕೇಂದ್ರ ಮನಸ್ಸು ಮಾಡಲೇಬೇಕಾಗುತ್ತದೆ.

ಯಶಂತಪುರದಲ್ಲಿ ರೈಲುಗಳ ನಿಲುಗಡೆಗೆ ಸಮಸ್ಯೆ ಇರುವುದರಿಂದ ಹೆಬ್ಟಾಳದಲ್ಲೇ ಒಂದು ಟರ್ಮಿನಲ್‌ ಮಾಡಲಿ. ಆಗ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿವಾದಂತಾಗಲಿದೆ. 
ಓಲಾ ಉಬರ್‌ ಮಾದರಿ ಸೇವೆ ಬೇಕು: ಇನ್ನು ನಗರದ ಮೂಲೆ-ಮೂಲೆಗೆ ಈ ರೈಲು, ಬಸ್‌ ಸಂಪರ್ಕ ಕಲ್ಪಿಸಲು ಆಗುವುದಿಲ್ಲ. ಅಂತಹ ಕಡೆಗಳಲ್ಲಿ ಸರ್ಕಾರದಡಿ ಓಲಾ-ಉಬರ್‌ ಮಾದರಿಯಲ್ಲಿ ಅಗ್ರಿಗೇಟರ್‌ ಸೇವೆ ಆರಂಭಿಸಬಹುದು. ಸರ್ಕಾರವೇ ಅಗ್ರಿಗೇಟರ್‌ಗಳನ್ನು ನಿಯೋಜಿಸುವುದರಿಂದ ಗ್ರಾಹಕರ ಸುಲಿಗೆ ಆಗುವುದಿಲ್ಲ. ಉತ್ತಮ ಸೇವೆಯೂ ದೊರೆಯುತ್ತದೆ.

ಇನ್ನೊಂದು ಉಪಾಯವಿದೆ! 
ನಗರದ ಸಂಚಾರದಟ್ಟಣೆಗೆ ಮೇಲ್ಸೇತುವೆಗಳು ಪರಿಹಾರ ಅಲ್ಲವೇ ಅಲ್ಲ. ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ ಪರ್ಯಾಯ ಒದಗಿಸಬಲ್ಲವು. ಅಂದರೆ ಮೆಟ್ರೋ, ಬಸ್‌, ರೈಲು ಒಂದಕ್ಕೊಂದು ಪೂರಕವಾಗಿ ಸಾರ್ವಜನಿಕರಿಗೆ ಸೇವೆ ಕಲ್ಪಿಸಬೇಕು. ಆದರೆ, ಈಗ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಈ ಮೂರೂ ಸಾರಿಗೆ ವ್ಯವಸ್ಥೆಗಳು ವರ್ತಿಸುತ್ತಿವೆ. ಒಂದರ ಜಾಗದಲ್ಲಿ ಮತ್ತೂಂದು ಬರುವಂತಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಬೇಕಾಗಿದೆ. 

ಉದಾಹರಣೆಗೆ ಮೆಜೆಸ್ಟಿಕ್‌ನಲ್ಲಿ ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ಸೇರಿದಂತೆ ನಾಲ್ಕೂ ಸೇವೆಗಳಿವೆ. ಆದರೆ, ಒಂದಕ್ಕೊಂದು ಪೂರಕವಾಗಿಲ್ಲ. ಬಿಎಂಟಿಸಿಗೆ ಬಂದಿಳಿದವರು, ಮೆಟ್ರೋ ರೈಲು ಏರಲು ಹರಸಾಹಸ ಮಾಡಬೇಕು. ಅದೇ ರೀತಿ, ಯಶವಂತಪುರದಲ್ಲಿ ಮೆಟ್ರೋ ಮತ್ತು ನೈರುತ್ಯ ರೈಲ್ವೆ ಇದೆ. ಆದರೆ, ಇವೆರಡರ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಒಂದೇ ಮಾದರಿಯ ಟಿಕೆಟ್‌ ನೀಡುವಂತಾಗಬೇಕು.

ಒಂದು ಕಡೆ ಟಿಕೆಟ್‌ ತೆಗೆದುಕೊಂಡರೆ, ಅದನ್ನು ಇತರೆಡೆಯೂ ಬಳಸಿ ಸಂಚರಿಸುವಂತಿರಬೇಕು. ಹೀಗೆ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಬಸ್‌ಗಳ ಸೇವೆಯಲ್ಲೂ ಮತ್ತಷ್ಟು ಸುಧಾರಣೆ ತರುವ ಅವಶ್ಯಕತೆ ಇದೆ. ಸಕಾಲದಲ್ಲಿ ಬಸ್‌ಗಳು ಬರಬೇಕು. ಅವುಗಳ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಬಿಎಂಟಿಸಿ ಕಾರ್ಯಪ್ರವೃತ್ತವಾಗಿದೆ. ಆದರೆ, ಮತ್ತಷ್ಟು ತ್ವರಿತವಾಗಿ ಈ ಕೆಲಸ ಆಗಬೇಕಿದೆ.

ಉಕ್ಕಿನ ಸೇತುವೆ ಬೇಕೇ ಬೇಕು
ಬೆಂಗಳೂರು:
ಉಕ್ಕಿನ ಸೇತುವೆ ಯೋಜನೆಧಿಯನ್ನು ಸರ್ಕಾರ ಕೈಬಿಟ್ಟ ಬೆನ್ನಲ್ಲೇ ಆ ಭಾಗದ ನಿವಾಸಿಗಳು “ಉಕ್ಕಿನ ಸೇತುವೆ ಬೇಕು’ ಎಂದು ಒತ್ತಾಯಿಸಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. 

ಬೆಳಿಗ್ಗೆ 10ರ ಸುಮಾರಿಗೆ ಬೆಂಗಳೂರು ಉತ್ತರ ಭಾಗದ ನೂರಕ್ಕೂ ಹೆಚ್ಚು ವಿವಿಧ ಬಡಾವಣೆಗಳ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸದಸ್ಯರು, ಕಾರ್ಯಕರ್ತರು, ನಾಗರಿಕರು ಹೆಬ್ಟಾಳದ ಎಸ್ಟೀಮ್‌ ಮಾಲ್‌ ಎದುರು ಉಕ್ಕಿನ ಸೇತುವೆಗಾಗಿ ಪ್ರತಿಭಟನೆ ನಡೆಸಲಿದ್ದಾರೆ. ನಂತರ, ಸ್ಟೀಲ್‌ ಬ್ರಿಡ್ಜ್ನ ಅಗತ್ಯ ಕುರಿತು  ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮನವಿ ಸಲ್ಲಿಸಲಿದ್ದಾರೆ. 

ಮೇಕ್ರಿ ವೃತ್ತದಿಂದ ಹೆಬ್ಟಾಳ ನಡುವೆ ನಿತ್ಯ ಸಂಚಾರದಟ್ಟಣೆಯ ನರಕಯಾತನೆ ಅನುಭವಿಸುತ್ತಿರುವವರು ಇಲ್ಲಿನ ನಿವಾಸಿಗಳು. ಉಕ್ಕಿನ ಸೇತುವೆ ವಿರೋಧಿಸಿ ಹೋರಾಟ ನಡೆಸಿದವರಾರೂ ಇಲ್ಲಿ ವಾಸಿಸುತ್ತಿಲ್ಲ; ಈ ಮಾರ್ಗದ ವಾಹನದಟ್ಟಣೆ ಸಮಸ್ಯೆ ಬಗ್ಗೆಯೂ ಅವರಿಗೆ ಅರಿವೂ ಇಲ್ಲ. ಹೆಬ್ಟಾಳ ಮಾರ್ಗದಲ್ಲಿ ಉಕ್ಕಿನ ಸೇತುವೆ ಅವಶ್ಯಕತೆ ಇದೆ.

ಹಾಗೂ ಸರ್ಕಾರ ತೆಗೆದುಕೊಂಡ ನಿರ್ಧಾರವೂ ಅದಕ್ಕೆ ಪೂರಕವಾಗಿತ್ತು. ಆದರೆ, ಒತ್ತಡಕ್ಕೆ ಮಣಿದು ನಿರ್ಧಾರ ಕೈಬಿಟ್ಟಿರುವುದು ಸರಿ ಅಲ್ಲ. ಆದ್ದರಿಂದ ತಕ್ಷಣ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಉತ್ತರ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಡಾ.ಎಚ್‌.ಸ್ಯಾಮ್ಯುಯಲ್‌ ತಿಳಿಸಿದ್ದಾರೆ. 

ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಸಿಮೆಂಟ್‌ ಮೇಲ್ಸೇತುವೆ ನಿರ್ಮಾಣಕ್ಕೆ ಕನಿಷ್ಠ ಏಳು ವರ್ಷ ಬೇಕಾಗುತ್ತದೆ. ಅದೇ ರೀತಿ, ಮೆಟ್ರೋ ನಿರ್ಮಾಣಕ್ಕೆ ಹತ್ತು ವರ್ಷ ಬೇಕು. ಕಾಮಗಾರಿ ಮುಗಿಯುವವರೆಗೂ ಸಂಚಾರದಟ್ಟಣೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಹಾಗಾಗಿ, ಉಕ್ಕಿನ ಸೇತುವೆ ಸೂಕ್ತ ಎಂದು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ನಿಲುವು ಬದಲಿಸಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರಕ್ಕೆ ಮತ್ತೂಮ್ಮೆ ಉಕ್ಕಿನ ಸೇತುವೆ ಅಗತ್ಯತೆಯನ್ನು ಮನದಟ್ಟು ಮಾಡಲು ಪ್ರತಿಭಟನೆ ನಡೆಸಲಾಗುತ್ತಿದೆ. ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದೂ ಹೋರಾಟಗಾರರು ಹೇಳಿದ್ದಾರೆ.

ಟಾಪ್ ನ್ಯೂಸ್

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

Middle Class Family Tulu movie

Middle Class Family: ಮತ್ತೆ ರಂಜಿಸಲು ಬರುತ್ತಿದ್ದಾರೆ ಸೌಂಡ್‌ ಲೈಟ್ಸ್‌ ಹುಡುಗರು

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBMP: ಬಿಬಿಎಂಪಿಯಲ್ಲಿ 2067 ಕೋಟಿ ರೂ. ಅಕ್ರಮ: ಎನ್‌.ಆರ್‌.ರಮೇಶ್‌

BBMP: ಬಿಬಿಎಂಪಿಯಲ್ಲಿ 2067 ಕೋಟಿ ರೂ. ಅಕ್ರಮ: ಎನ್‌.ಆರ್‌.ರಮೇಶ್‌

4

Kannada Pustaka Habba: ನಾಡಿದ್ದಿನಿಂದ ಡಿ.1ರವರೆಗೆ ಕನ್ನಡ ಪುಸ್ತಕ ಹಬ್ಬ

Blackmail: ಅಶ್ಲೀಲ ವಿಡಿಯೋ; ಅಕ್ಕನಿಂದ ತಂಗಿಯ ಬ್ಲ್ಯಾಕ್‌ಮೇಲ್ ‌

Blackmail: ಅಶ್ಲೀಲ ವಿಡಿಯೋ; ಅಕ್ಕನಿಂದ ತಂಗಿಯ ಬ್ಲ್ಯಾಕ್‌ಮೇಲ್ ‌

Bengaluru Rain: ದ್ವೀಪದಂತಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳು!

Bengaluru Rain: ದ್ವೀಪದಂತಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳು!

Bengaluru Rain: ರಾಜಧಾನಿಯ ಹಿಂಡಿ ಹಿಪ್ಪೆ ಮಾಡಿದ ಹಿಂಗಾರು  

Bengaluru Rain: ರಾಜಧಾನಿಯ ಹಿಂಡಿ ಹಿಪ್ಪೆ ಮಾಡಿದ ಹಿಂಗಾರು  

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

Zee Kannada Kutumba Awards-2024

Kutumba Awards-2024: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.