Bengaluru: ಉಪನಗರ ರೈಲು; 32,000 ಮರಕ್ಕೆ ಕುತ್ತು: ಪರಿಸರ ಪ್ರೇಮಿಗಳ ಆಕ್ರೋಶ


Team Udayavani, Jun 12, 2024, 11:13 AM IST

Bengaluru: ಉಪನಗರ ರೈಲು; 32,000 ಮರಕ್ಕೆ ಕುತ್ತು: ಪರಿಸರ ಪ್ರೇಮಿಗಳ ಆಕ್ರೋಶ

ಬೆಂಗಳೂರು: ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಮಳೆಯ ಅವಾಂತರಕ್ಕೆ ನೂರಾರು ಮರಗಳು ಧರೆಗೆ ಉರುಳಿವೆ. ಇದೀಗ ಉಪನಗರದ ರೈಲು ಯೋಜನೆಯಿಂದ 32 ಸಾವಿರ ಮರಗಳಿಗೆ ಕುತ್ತು ಬಂದಿದೆ.

ಕರ್ನಾಟಕ – ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌)ಯು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿದೆ. ನಗರದಲ್ಲಿ 149.348 ಕಿ.ಮೀ. ರೈಲು ಸಂಪರ್ಕ ಜಾಲ ನಿರ್ಮಿಸಲಾಗುತ್ತಿದೆ. ಒಟ್ಟು ನಾಲ್ಕು ಕಾರಿಡಾರ್‌ಗಳ ನಿರ್ಮಾಣಕ್ಕೆ 32,572 ಮರ ತೆರವುಗೊಳಿಸಲು ಗುರುತಿಸ ಲಾಗಿದೆ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಉದ್ಯಾನ ನಗರಿ ಉಳಿಯಲಿದೆಯೇ ಎಂಬ ಆತಂಕ ಎದುರಾಗಿದೆ.

ಗಾಳಿ-ಮಳೆಯಿಂದ ಈಗಾಗಲೇ 400ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. “ನಮ್ಮ ಮೆಟ್ರೋ’ ಕಾರಿಡಾರ್‌ ನಿರ್ಮಿಸಲು 6,600 ಮರಗಳ ತೆರವುಗೊಳಿಸಲಾಗಿದೆ. ಬೃಹತ್‌ ಕಂಪನಿ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ನಿತ್ಯ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಲೇ ಇದೆ. ಈ ಮಧ್ಯೆ ಉಪನಗರದ ರೈಲು ಯೋಜನೆಗೆಂದು 32,572 ಮರಗಳ ತೆರವುಗೊಳಿಸಲು ಮುಂದಾಗಿರುವುದನ್ನು ಇನ್ವಿರಾನ್ಮೆಂಟಲ್‌ ಇಂಪ್ಯಾಕ್ಟ್ ಅಸೆಸ್‌ಮೆಂಟ್‌ (ಇಐಎ) ವರದಿ ತಿಳಿಸಿದೆ. 2021ರಿಂದ 23ರವರೆಗೆ ನಡೆದ ಇಐಎ ಸಮೀಕ್ಷೆಯಲ್ಲಿ, ಬಿಎಸ್‌ಆರ್‌ಪಿ ಸಂಪರ್ಕ ಜಾಲ ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳು, ಅವುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ.

ಬರೀ ಕಾರಿಡಾರ್‌ಗಳಿಗೆ 15,000 ಮರ ತೆರವು: ಕಾರಿಡಾರ್‌-1 (ಕೆಎಸ್‌ಆರ್‌, ಬೆಂಗಳೂರು ನಗರ- ಯಲಹಂಕ-ದೇವನಹಳ್ಳಿ)ರಲ್ಲಿ 7,198 ಮರ, ಕಾರಿಡಾರ್‌ -2 (ಬೈಯಪ್ಪನಹಳ್ಳಿ ಟರ್ಮಿನಲ್‌ – ಚಿಕ್ಕಬಾಣಾವರ) 3,469 ಮರ, ಕಾರಿಡಾರ್‌-3 (ಕೆಂಗೇರಿ- ಕಂಟೋನ್ಮೆಂಟ್‌- ವೈಟ್‌μàಲ್ಡ್‌) 2,072 ಮರ ಹಾಗೂ ಕಾರಿಡಾರ್‌-4 (ಹೀಲಲಿಗೆಯಿಂದ ರಾಜಾನುಕುಂಟೆ) 2,306 ಮರಗಳು. ಒಟ್ಟು ನಾಲ್ಕು ಕಾರಿಡಾರ್‌ಗಳಿಂದ 15,045 ಮರಗಳನ್ನು ತೆರವುಗೊಳಿಸಲು ಗುರುತಿಸಿದರೆ, ಕಾರಿಡಾರ್‌-1ಕ್ಕೆ ಅಕ್ಕುಪೇಟೆಯಲ್ಲಿ ಡಿಪೋ ನಿರ್ಮಿಸಲು 18.6 ಹೆಕ್ಟೇರ್‌ ಅರಣ್ಯ ಭೂಮಿ ಬಳಸಲಾಗುತ್ತಿದೆ. ಇಲ್ಲಿಯ 17,505 ಮರಗಳು, ಸೋಲದೇವನಹಳ್ಳಿ ಡಿಪೋ ನಿರ್ಮಾಣಕ್ಕೆ 22 ಮರ ಸೇರಿ ಒಟ್ಟು 32,572 ಮರಗಳ ತೆರವುಗೊಳಿಸಲು ಗುರುತಿಸಲಾಗಿದೆ.
ಇದರಲ್ಲಿ ಅರಳಿ ಮರ, ರೈನ್‌ಟ್ರೀ, ಇಂಡಿಯನ್‌ ಕಾರ್ಕ್‌, ಗುಲ್‌ಮೊಹರ್‌, ಕಾಪರ್‌ ಪಾಡ್‌ ಸೇರಿ ವಿವಿಧ ಜಾತಿಯ ಮರಗಳು ಒಳಗೊಂಡಿದ್ದು, ಈ ಮರಗಳ ಪೈಕಿ ಹೆಚ್ಚಿನವು ಭಾರತೀಯ ರೈಲ್ವೆ ಇಲಾಖೆ ಜಾಗದಲ್ಲಿವೆ. ಜತೆಗೆ ಖಾಸಗಿ, ಬಿಬಿಎಂಪಿ ಮತ್ತು ಸರ್ಕಾರಿ ಜಾಗದಲ್ಲಿವೆ. ಕೇವಲ ಮರಗಳಿಗೆ ಮಾತ್ರ ತೊಂದರೆ ಆಗುವುದಲ್ಲದೇ, ಬೆಂಗಳೂರು ಗ್ರಾಮಾಂತರದ ಅರಣ್ಯ ಭಾಗದಲ್ಲಿನ ಸ್ಲಾಟ್‌ ಬೇರ್‌, ಪ್ಯಾಂಥರ್‌, ಬ್ಲಾಕ್‌ಬಕ್‌, ಜಿಂಕೆ, ಮೊಲ, ನರಿ, ಮುಳ್ಳುಹಂದಿ, ವಿವಿಧ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂದು ವರದಿ ವಿವರಿಸಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿನ ಪರಿಸರ ಹಾಳು ಮಾಡಲಾಗುತ್ತಿದೆ. ಇದರ ಪರಿಣಾಮ ಭೀಕರ ಬರ, ಅಂತರ್ಜಲ ಕುಸಿತ, ನೀರಿನ ಅಭಾವ ಸೃಷ್ಟಿಯಾಗಿದೆ. ಅಭಿವೃದ್ಧಿಯು ಸುಸ್ಥಿರವಾಗಿರಬೇಕು. ಮರ ಕಡಿಯುವ ಮುನ್ನ ಸೂಕ್ತ ಜಾಗದಲ್ಲಿ ಸಸಿಗಳನ್ನು ನೆಡಬೇಕು ಎಂದು ಪರಿಸರ ತಜ್ಞ ವಿಜಯ್‌ ನಿಶಾಂತ್‌ ಹೇಳುತ್ತಾರೆ.

ಸರ್ಕಾರವು ನಗರದಲ್ಲಿನ ಮರಗಳ ಗಣತಿ ಮಾಡಲು ಅವಕಾಶ ನೀಡುತ್ತಿಲ್ಲ. ವರ್ಷಕ್ಕೆ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ 1 ಲಕ್ಷ ಸಸಿಗಳಲ್ಲಿ ಎಷ್ಟು ಬೆಳೆದು, ಆರೋಗ್ಯವಾಗಿ ನಿಂತಿವೆ ಎಂಬ ಅಂಕಿ-ಅಂಶ ಸಿಗುತ್ತಿಲ್ಲ.

ಸಸಿ ನೆಡುವುದಕ್ಕಿಂತ, ಇರುವ ಗಿಡ-ಮರಗಳನ್ನು ಸಂರಕ್ಷಿಸಿ, ಬೆಳೆಸುವುದಕ್ಕೆ, ಕಾಪಾಡಿಕೊಳ್ಳುವುದ್ದಕ್ಕೆ ಮೊದಲು ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಜಾರಿಗೆ ಜನ ಬಿಡುವುದಿಲ್ಲ. ●ವಿಜಯ್‌ ನಿಶಾಂತ್‌, ಪರಿಸರ ತಜ್ಞ.

ಭಾರತಿ ಸಜ್ಜನ್‌

 

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

10-bng

Bengaluru: ಇಬ್ಬರು ಡ್ರಗ್ಸ್‌ ಪೆಡ್ಲರ್ ಸೆರೆ: 51 ಕೆ.ಜಿ. ಗಾಂಜಾ ಜಪ್ತಿ

9–bng

Bengaluru: ಮೋಜಿನ ಜೀವನಕ್ಕೆ ಸರ ಕದೀತಿದ್ದ ಯುವಕನ ಸೆರೆ

8-bng

Bengaluru: ವಾಹನ ಕಳ್ಳನ ಬಂಧನ: 30 ದ್ವಿಚಕ್ರ ವಾಹನ ಜಪ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.