ಬಾಲಕನ ಹೆಬ್ಬೆರಳು ಯಶಸ್ವಿ ಮರುಜೋಡಣೆ: ನಾರಾಯಣ ಹೆಲ್ತ್ ಸಿಟಿಯ ವೈದ್ಯರ ಸಾಧನೆ
Team Udayavani, Jul 20, 2023, 4:46 PM IST
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯ ಅತ್ಯಂತ ಅನುಭವಿ ಮಲ್ಟಿಡಿಸಿಪ್ಲಿನರಿ ತಂಡವು 15 ವರ್ಷದ ಬಾಲಕನ ಹೆಬ್ಬೆರಳನ್ನು ಮರು ಜೋಡಣೆ ಮಾಡುವ ಮೂಲಕ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಈ ಗಮನಾರ್ಹ ಶಸ್ತ್ರಚಿಕಿತ್ಸೆಯು ಆರು ಗಂಟೆಗಳ ಕಾಲ ನಡೆದಿದ್ದು, ಇದು ಸಂಸ್ಥೆಯ ವೈದ್ಯಕೀಯ ಪರಿಣಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಬಾಲಕ ಮಂಗಿಲಾಲ್ ಮರ ಕತ್ತರಿಸುವ ಯಂತ್ರದೊಂದಿಗೆ ಆಡುವಾಗ ಅಕಸ್ಮಾತ್ತಾಗಿ ಹೆಬ್ಬೆರಳು ಕತ್ತರಿಸಿಕೊಂಡಿದ್ದ. ಮಂಗಿಲಾಲ್ ನ ಕತ್ತರಿಸಲಾದ ಹೆಬ್ಬೆರಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿ ಅದನ್ನು ನಾರಾಯಣ ಹೆಲ್ತ್ ಸಿಟಿಯ ತುರ್ತು ನಿಗಾ ವಿಭಾಗಕ್ಕೆ ತರಲಾಗಿತ್ತು. ಪರಿಣಿತ ವೈದ್ಯರ ತಂಡವು ಹೆಬ್ಬೆರಳು ಮರು ಜೋಡಣೆಗೆ ತಕ್ಷಣವೇ ಸಮಗ್ರ ಚಿಕಿತ್ಸಾ ಯೋಜನೆ ರೂಪಿಸಿತು. ಮೈಕ್ರೊಸರ್ಜಿಕಲ್ ತಂತ್ರಗಳು ಮತ್ತು ಮೈಕ್ರೊಸ್ಕೋಪ್ ಬಳಕೆಯ ಮೂಲಕ ತಂಡವು ನರಗಳು, ನಾಳಗಳನ್ನು ಮರು ಜೋಡಣೆ ಮಾಡಿದ್ದಲ್ಲದೆ ರಕ್ತದ ಪರಿಚಲನೆ ಹಾಗೂ ಕಾರ್ಯ ನಿರ್ವಹಣೆ ಸಾಧ್ಯವಾಗುವಂತೆ ಮಾಡಿದೆ.
ಶಸ್ತ್ರಚಿಕಿತ್ಸೆಯ ನಂತರ ಮಂಗಿಲಾಲ್ ಗೆ ಸತತವಾಗಿ ಆರೈಕೆ ನಡೆಸಲಾಗಿದ್ದು ಇದರಿಂದ ಸರಾಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಕೇವಲ ಐದು ದಿನಗಳಲ್ಲಿ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಆತ ಈಗ ಕೈಯಲ್ಲಿ ಹಿಡಿದುಕೊಳ್ಳುವುದು, ಗ್ರಹಿಸುವುದು ಮತ್ತು ಫೈನ್ ಮೋಟಾರ್ ಕೌಶಲ್ಯಗಳ ಮೂಲಕ ಮೊದಲಿನಂತೆ ಕೈ ಉಪಯೋಗಿಸಲು ಶಕ್ತನಾಗಿದ್ದಾನೆ.
ಈ ಹೆಬ್ಬೆರಳು ಕೈಯ ಕಾರ್ಯ ನಿರ್ವಹಣೆಯಲ್ಲಿ ಅಪಾರ ಪ್ರಾಮುಖ್ಯತೆ ವಹಿಸಿದ್ದು ಶೇ.40ರಷ್ಟು ಕೈಗಳ ಚಲನೆಗೆ ಕಾರಣವಾಗುತ್ತದೆ. ಅದರಲ್ಲಿ ಗ್ರಹಿಕೆ, ಹಿಡಿಕೆ ಮತ್ತು ಫೈನ್ ಮೋಟಾರ್ ಕೌಶಲ್ಯಗಳು ಸೇರಿವೆ. ಯಶಸ್ವಿ ಮರು ಜೋಡಣೆಯಿಂದ ಮಂಗಿಲಾಲ್ ಈ ಪ್ರಮುಖ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಮತ್ತು ಸಹಜ ಜೀವನ ನಡೆಸಬಹುದಾಗಿದೆ.
ಬೆಂಗಳೂರಿನ ನಾರಾಯಣ ಹೆಲ್ತ್ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾ ಕೇರ್ ನ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಅಂಡ್ ರಿಕನ್ಸ್ಟ್ರಕ್ಟಿವ್ ಸರ್ಜನ್ ಡಾ. ರವಿ ಡಿ.ಆರ್. ಈ ಸಂಕೀರ್ಣ ಪ್ರಕರಣದ ನೇತೃತ್ವ ವಹಿಸಿದ ಸರ್ಜನ್ ಆಗಿದ್ದು ಯಶಸ್ವಿ ಫಲಿತಾಂಶ ಕುರಿತು ಅವರು ಸಂತೃಪ್ತಿ ವ್ಯಕ್ತಪಡಿಸಿದರು. “ಹೆಬ್ಬೆರಳು ಮರು ಜೋಡಣೆ ಶಸ್ತ್ರಚಿಕಿತ್ಸೆಗಳಿಗೆ ಸೂಕ್ಷ್ಮ ಮೈಕ್ರೊಸರ್ಜಿಕಲ್ ತಂತ್ರಗಳು ಹಾಗೂ ಪರಿಣಿತ ಮಲ್ಟಿಡಿಸಿಪ್ಲಿನರಿ ತಂಡ ಅಗತ್ಯ. ಅಂತಹ ಪ್ರಕರಣಗಳಲ್ಲಿ ಮೊದಲ ಕೆಲ ಗಂಟೆಗಳು ಅತ್ಯಂತ ಮುಖ್ಯವಾಗಿವೆ. ಅಂತಹ ಪ್ರಕರಣಗಳು ನಡೆದಾಗ ಕತ್ತರಿಸಲ್ಪಟ್ಟ ಭಾಗವನ್ನು ಗಾಯಗಳನ್ನು ಸುತ್ತುವ ಬಟ್ಟೆ ಅಥವಾ ಬಟ್ಟೆಯಲ್ಲಿ ಸುತ್ತಿ ಅದನ್ನು ಪಾಲಿಥಿನ್ ಚೀಲದಲ್ಲಿರಿಸಬೇಕು. ನಂತರ ಪಾಲಿಥಿನ್ ಚೀಲವನ್ನು ಮಂಜುಗಡ್ಡೆಯಲ್ಲಿರಿಸಿ ತರಬೇಕು. ಆರು ಗಂಟೆಯ ಯಶಸ್ವಿ ಶಸ್ತ್ರಚಿಕಿತ್ಸೆಯ ಕಾರಣದಿಂದ ಮಂಗಿಲಾಲ್ ತನ್ನ ಕತ್ತರಿಸಿದ ಬೆರಳನ್ನು ಮತ್ತೆ ಪಡೆದನು” ಎಂದರು.
ಈ ಬಾಲಕನ ಪೋಷಕರು ನಾರಾಯಣ ಹೆಲ್ತ್ ಒದಗಿಸಿದ ಅಸಾಧಾರಣ ಚಿಕಿತ್ಸೆಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು, “ನಾರಾಯಣ ಹೆಲ್ತ್ ನ ವೈದ್ಯಕೀಯ ತಂಡಕ್ಕೆ ನಮ್ಮ ಮಗನ ಚಿಕಿತ್ಸೆಯ ಅವಧಿಯಲ್ಲಿ ಅವರು ತೋರಿದ ಅವರ ಪರಿಣಿತಿ, ಸಹಾನುಭೂತಿ ಮತ್ತು ಬದ್ಧತೆಗೆ ನಾವು ಆಭಾರಿಯಾಗಿದ್ದೇವೆ. ಅವರ ಅಸಾಧಾರಣ ಕೌಶಲ್ಯ ಮತ್ತು ಮಾರ್ಗದರ್ಶನದಿಂದ ಆತನಿಗೆ ಮತ್ತೆ ಸಹಜ ಜೀವನ ನಡೆಸಲು ಸಾಧ್ಯವಾಗಿದೆ” ಎಂದರು.
ಹೆಬ್ಬೆರಳು ಯಶಸ್ವಿ ಮರು ಜೋಡಣೆ ಶಸ್ತ್ರಚಿಕಿತ್ಸೆಯು ಆವಿಷ್ಕಾರಕ ವೈದ್ಯಕೀಯ ಚಿಕಿತ್ಸೆಗಳಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯಸೇವಾ ಸಂಸ್ಥೆಯಾಗಿ ನಾರಾಯಣ ಹೆಲ್ತ್ ನ ಸ್ಥಾನವನ್ನು ಮರು ದೃಢೀಕರಿಸಿದೆ. ಅಸಾಧಾರಣ ಆರೋಗ್ಯ ಸೇವೆಗಳಿಗೆ ತನ್ನ ತಡೆಯಿರದ ಬದ್ಧತೆ ಮತ್ತು ವೈದ್ಯಕೀಯ ಶ್ರೇಷ್ಠತೆಯ ಪರಿಶ್ರಮದಿಂದ ನಾರಾಯಣ ಹೆಲ್ತ್ ಜೀವನಗಳನ್ನು ಬದಲಾಯಿಸುತ್ತಿದೆ ಮತ್ತು ರೋಗಿಗಳಿಗೆ ಹೊಸ ಭರವಸೆ ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.