ವಿವಾಹ ಬೇಡವೆಂದು ಆತ್ಮಹತ್ಯೆ
Team Udayavani, Nov 24, 2017, 12:27 PM IST
ಬೆಂಗಳೂರು: ಸೆಸ್ನಾ ಟೆಕ್ ಪಾರ್ಕ್ ಆವರಣದಲ್ಲಿ ಬುಧವಾರ ಹತ್ತನೇ ಮಹಡಿಯಿಂದ ಬಿದ್ದು ಸಾವಿಗೆ ಶರಣಾದ ಟೆಕ್ಕಿ ಗೀತಾಂಜಲಿ ಆತ್ಮಹತ್ಯೆ ಹಿಂದಿನ ರಹಸ್ಯ ಇದೀಗ ಬಯಲಾಗಿದೆ. ಗೀತಾಂಜಲಿ ಶವ ಪಡೆಯಲು ಗೋವಾದಿಂದ ನಗರಕ್ಕೆ ಬಂದಿದ್ದ ಆಕೆಯ ಪೋಷಕರನ್ನು ಮಾರತ್‌ಹಳ್ಳಿ ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಬಲವಂತದ ವಿವಾಹ ಕಾರಣ ಎಂದು ತಿಳಿದು ಬಂದಿದೆ.
“ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಚಿಕ್ಕಮ್ಮನ ಜತೆ ಗೀತಾಂಜಲಿ ಗೋವಾದಲ್ಲಿನ ಮನಗೆ ಬಂದಿದ್ದಳು. ಹುಟ್ಟುಹಬ್ಬದ ಸಂಭ್ರಮದ ಜತೆಗೆ ಆಕೆಗೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದೆವು. ಆದರೆ, ಅದು ಆಕೆಗೆ ಇಷ್ಟವಿರಲಿಲ್ಲ. ಆದರೂ ಮದುವೆಗೆ ಒಪ್ಪಿಕೊಳ್ಳುವಂತೆ ನಾವು ಬಲವಂತ ಮಾಡಿದ್ದೆವು. ಈ ನಿರ್ಧಾರದಿಂದ ಆಕೆ ಮನನೊಂದಿದ್ದಳು.
ಈ ಕಾರಣಕ್ಕೇ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,’ ಎಂದು ಪೋಷಕರು ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗೀತಾಂಜಲಿ ಮತ್ತೂಬ್ಬ ಯುವಕನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಪೋಷಕರು ಗೊತ್ತು ಮಾಡಿದ್ದ ಮದುವೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ.
ಮಾರತ್‌ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಸ್ನಾ ಟೆಕ್ ಪಾರ್ಕ್‌ನಲ್ಲಿ ತನ್ನ ಕಚೇರಿ ಇದ್ದ ಬಹುಮಹಡಿ ಕಟ್ಟಡದ ಹತ್ತನೇ ಮಹಡಿಯಿಂದ ಬಿದ್ದು ಗೋವಾ ಮೂಲದ ಗೀತಾಂಜಲಿ (27) ಆತ್ಮಹತ್ಯೆ ಮಾಡಿಕೊಂಡಿದ್ದರು. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿತ್ತು. ಗೀತಾಂಜಲಿ ಬನ್ನೇರುಘಟ್ಟದಲ್ಲಿ ವಾಸವಾಗಿರುವ ತನ್ನ ಚಿಕ್ಕಮ್ಮನ ಜತೆ ಗೋವಾಕ್ಕೆ ತೆರಳಿ, ಮಂಗಳವಾರ ತನ್ನ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು, ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.