![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 27, 2023, 7:40 AM IST
ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಸೂರ್ಯನ ಅಧ್ಯಯನ, ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್-1 ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ದೇಶದ ಬಾಹ್ಯಾಕಾಶ ಸಂಸ್ಥೆ ಪೇಲೋಡ್ ವಿಎಲ್‌ಇಸಿ ಅನ್ನು ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವೀಕರಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಜ.26ರ ಗಣರಾಜ್ಯೋತ್ಸವದಂದು ವಿಸಿಬಲ್ ಲೈನ್ ಎಮಿಷನ್ ಕ್ರೋನೋಗ್ರಾಫ್ (ವಿಇಎಲ್‌ಸಿ) ಪೇಲೋಡ್ ಅನ್ನು ಇಸ್ರೋಗೆ ಹಸ್ತಾಂತರಿಸಿದೆ.
ಆದಿತ್ಯ ಒಟ್ಟು 7 ಪೇಲೋಡ್‌ಗಳನ್ನು ಹೊತ್ತು ಸಾಗಲಿದ್ದು, ಈ ಪೈಕಿ ವಿಇಎಲ್‌ಸಿ ಕೂಡ ಒಂದಾಗಿದೆ. ಆದರೆ, ಈ 7 ಪೇಲೋಡ್‌ಗಳ ಪೈಕಿ ಅತ್ಯಂತ ದೊಡ್ಡದು ಹಾಗೂ ತಾಂತ್ರಿಕ ಸವಾಲುಗಳಿದ್ದ ಪೇಲೋಡ್ ಎಂದರೆ ಅದು ವಿಇಎಲ್‌ಸಿ. ಐದು ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದ ಪೇಲೋಡ್ ಅನ್ನು ಸ್ವೀಕರಿಸಿಸಲಾಗಿದೆ. ಇನ್ನು ಅದರ ಜೋಡಣೆ, ಪರೀಕ್ಷೆ ಎಲ್ಲವನ್ನೂ ಯಶಸ್ವಿಯಾಗಿ ನೆರವೇರಿಸಿರುವುದಾಗಿ ಇಸ್ರೋ ಹೇಳಿದೆ.
ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರ ಸಮ್ಮುಖದಲ್ಲಿ ಐಐಎ ವಿಇಎಲ್‌ಸಿಯನ್ನು ಹಸ್ತಾಂತರಿಸಿದ್ದು, ಐಐಎನ ಅತಿದೊಡ್ಡ ಕಾರ್ಯಾಚಟುವಟಿಕೆಯಲ್ಲಿ ಪೇಲೋಡ್ ನಿರ್ಮಾಣವೂ ಒಂದು ಎಂದು ಸಂಸ್ಥೆ ತಿಳಿಸಿದೆ. ಮಿಷನ್ ಆದಿತ್ಯ ಸೂರ್ಯ ಗ್ರಹದ ಅಧ್ಯಯನದ ಮೇಲೆ ಬೆಳಕು ಚೆಲ್ಲುವ ಭಾರತ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.