ಮಹಾರಾಷ್ಟ್ರಮಾದರಿಯಲ್ಲಿ ಮೌಡ್ಯ ನಿಷೇಧ ಕಾಯ್ದೆ- ಕಾಗೋಡು
Team Udayavani, Sep 16, 2017, 7:50 AM IST
ಬೆಂಗಳೂರು:ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲು ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಮೌಡ್ಯ ನಿಷೇಧ ವಿಧೇಯಕ ಪರಾಮರ್ಶೆ ಸಮಿತಿ ಅಧ್ಯಕ್ಷರೂ ಆಗಿರುವ ಅವರು, ಈಗಾಗಲೇ ವಿಧೇಯಕ ಕರಡು ಸಿದ್ಧಗೊಂಡು ಕಾನೂನು ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಸಾಕಷ್ಟು ಮೌಡ್ಯಗಳಿದ್ದು ಎಲ್ಲವನ್ನು ನಿಷೇಧ ಕಷ್ಟ. ಕೋಳಿ, ಕುಡಿ ಕಡಿಯೋದು ಬೇಡ ಎಂದರೆ ಒಪ್ಪಲ್ಲ. ಕೆಲವೊಂದು ಜೀವನದ ಭಾಗಗಳಾಗಿ ಹೋಗಿವೆ. ಆದರೆ, ಆಮಾಯಕರ ಶೋಷಣೆ ಮಾಡುವ ಮೌಡ್ಯದ ಹೆಸರಿನಲ್ಲಿ ಮೋಸ ಮಾಡುವ, ಮೌಡ್ಯದ ಹೆಸರಿನಲ್ಲಿ ಜನರ ಜೀವನ ದುಸ್ತರಗೊಳಿಸುವ ಆಚರಣೆಗಳು ನಿಲ್ಲಬೇಕು ಎಂದು ತಿಳಿಸಿದರು.
ಭ್ರಮೆಗಳು ಇರಬಾರದು
ಜಾತಿ ಇಲ್ಲದ ಹೊಸ ಧರ್ಮಕ್ಕೆ ಹೋರಾಟ ನಡೆಯಬೇಕು. ಬಸವಣ್ಣನವರ ನಿಜವಾದ ಆಶಯ ಜಾತಿರಹಿತ ಸಮಾಜ. ಬಗ್ಗೆ ಸಂಘಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಡೆಸಬೇಕು. ಆದರೆ, ಪ್ರಸ್ತುತ ನಡೆಯುತ್ತಿರುವ ಹೋರಾಟ ಜಾತಿಯನ್ನು ಒಳಗೊಂಡ ಹೊಸ ಧರ್ಮದ ಹೋರಾಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಯಿಸಿದರು.
ಸಚಿವರ ಕಚೇರಿಯಲ್ಲಿ ಬಸವೇಶ್ವರ ಚಿತ್ರ ಇನ್ನೂ ಅಳವಡಿಸದ ಬಗ್ಗೆ ಕೇಳಿದಾಗ, ತರಲು ಹೇಳಿದೆ. ಆದರೆ, ಚಿತ್ರ ಹಾಕುವುದರಿಂದ ಅವರನ್ನು ಮೆಚ್ಚಿಸುವ ಬದಲು ಅವರ ಆಶಯ ಜಾರಿ ಮಾಡುವುದು ಮುಖ್ಯ. ನಾವೆಲ್ಲಾ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಪ್ರಭಾವಕ್ಕೆ ಒಳಗಾದವರು. ಜಾತಿವಿನಾಶ ಮತ್ತು ಭೂ ರಹಿತರಿಗೆ ಭೂಮಿ ಹಕ್ಕು ನಮ್ಮ ಹೋರಾಟದ ಗುರಿಯಾಗಿತ್ತು. ಬಸವಣ್ಣನವರು ಜಾತಿ ಹೋಗಲಾಡಿಸಲು ಹೋರಾಟ ಮಾಡಿದವರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಿರಂತರ ಹೋರಾಟ, ಸಂಘಟನೆ, ಜಾಗೃತಿ ಅಗತ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.