ತಂತ್ರಜ್ಞರ ಪೂರೈಕೆ: ರಾಜ್ಯಕ್ಕೆ ಅಗ್ರಸ್ಥಾನ
Team Udayavani, Mar 10, 2019, 6:22 AM IST
ಯಲಹಂಕ: ಇಡೀ ವಿಶ್ವಕ್ಕೆ ಪ್ರತಿಭಾವಂತ ತಂತ್ರಜ್ಞರನ್ನು ನೀಡುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ “ಅನಾದ್ಯಂತ’; ತಂತ್ರಜ್ಞಾನ-ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಇರುವುದರಿಂದ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಹಾಗೂ ಇತರೆ ಕೈಗಾರಿಕೆಗಳಿಗೆ ಅಗತ್ಯವಿರುವ ತಂತ್ರಜ್ಞರನ್ನು ಅತ್ಯಧಿಕ ಸಂಖ್ಯೆಯಲ್ಲಿ ಒದಗಿಸಲು ಸಾಧ್ಯವಾಗಿದೆ.
ಇದರಿಂದ ಬಡ ವರ್ಗದ ಮಕ್ಕಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಪಡೆದು ಪ್ರತಿಭೆ ಅನಾವರಣ ಗೊಳಸಿಕೊಳ್ಳಲು ಸಾಧ್ಯವಾಗಿದೆ. ಇಂದು ಇಡೀ ಜಗತ್ತಿಗೆ ಪ್ರತಿಭಾವಂತ ತಂತ್ರಜ್ಞರನ್ನು ಪೂರೈಸುವ ಮಹತ್ಕಾರ್ಯವನ್ನು ಮಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದು ಹೆಮ್ಮೆಯ ವಿಷಯ” ಎಂದರು
ನಮಗೆ ಅತ್ಯಂತ ಅವಶ್ಯವಾಗಿ ಬೇಕಾಗಿರುವುದು ಅಭಿವೃದ್ಧಿಯ ಕನಸು ಕಾಣುವ ಗುಣ ಹಾಗೂ ತದೇಕಚಿತ್ತತೆಯಿಂದ ಆ ಕನಸನ್ನು ನನಸಾಗಿಸುವ ದೃಢ ಮನಸ್ಸು. ಕೇವಲ ಕೆಲವೇ ದಶಕಗಳ ಹಿಂದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂದಿನ ಉದಯೋನ್ಮುಖ ಉದ್ಯಮಿಗಳು ಕಂಡ ಕನಸುಗಳು ಇಂದು ನನಸಾಗಿರುವುದೇ ಇದಕ್ಕೆ ಸಾಕ್ಷಿ.
ಕಲೆ ಹಾಗೂ ತಂತ್ರಜ್ಞಾನಗಳು ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಪರಸ್ಪರ ಮೇಳವಿಸಿದಾಗಲೇ ಆ ವ್ಯಕ್ತಿತ್ವಕ್ಕೆ ಪರಿಪೂರ್ಣತೆಯ ಆಯಾಮ ಲಭಿಸುತ್ತದೆ ಹಾಗೂ ನಮ್ಮೊಳಗೆ ಸುಪ್ತವಾಗಿರುವ ಐದು ಸಾವಿರ ವರ್ಷಗಳ ಶ್ರೀಮಂತ ಪರಂಪರೆಯ ಶ್ರೇಷ್ಠ ಸಂಗತಿಗಳನ್ನು ಜಗತ್ತಿಗೆ ನಿವೇದಿಸಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರೀಯ ವಿವಿ ಕುಲಾಪತಿಗಳಾದ ಪ್ರೊ. ಎನ್.ಆರ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳಿ ತಾವು ಕಲಿಯುವ ವಿಷಯದ ಸ್ಪಷ್ಟನೆ ಪಡೆಯುವಂತೆ ಬೋಧನಾವಿಧಾನವನ್ನು ಬದಲಿಸಬೇಕು. ಪರಸ್ಪರ ಚರ್ಚೆಯಿಂದ, ಪರಸ್ಪರ ಕೊಡುಕೊಳೆಗಳಿಂದ ಕಲಿತ ವಿದ್ಯೆ ಶಾಶ್ವತವಾಗಿ ನೆಲೆನಿಲ್ಲುತ್ತದೆ.
ಈ ತೆರೆನ ಶೈಕ್ಷಣಿಕ ಪರಿಸರ ನಿರ್ಮಾಣವಾದರೆ ನಮ್ಮ ವಿದ್ಯಾರ್ಥಿಗಳಲ್ಲಿ ಬಹುತೇಕರು ನಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಹೊಸ ಹೊಸ ಸಂಶೋಧನೆಗಳಲ್ಲಿ ನಿಸ್ಸಂದೇಹವಾಗಿ ತೊಡಗಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಪಠ್ಯಕ್ರಮದ ಬೋಧನೆಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು’, ಎಂದರು.
ಜನಪ್ರಿಯ ಚಲನಚಿತ್ರ ಕೆಜಿಎಫ್ನ ಖಳನಾಯಕ ‘ಗರುಡ ರಾಂ’ ರಾಮಚಂದ್ರ ರಾಜು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಏರ್ ಇಂಡಿಯಾ ಶೋ ಸಂದರ್ಭದಲ್ಲಿ ನಿಟ್ಟೆ ಕಾಲೇಜಿನ ಸಮೀಪದಲ್ಲಿ ಸೂರ್ಯಕಿರಣ ಲಘು ವಿಮಾನಗಳು ಅಪಘಾತಕ್ಕೀಡಾದಾಗ, ಅಪಘಾತದ ಸ್ಥಳಕ್ಕೆ ಧಾವಿಸಿ ಈರ್ವರು ಪೈಲಟ್‌ಗಳನ್ನು ರಕ್ಷಿಸಲು ಶ್ರಮಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವೈಮಾನಿಕ ತಂತ್ರಜ್ಞಾನ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚೇತನ್ ಕುಮಾರ್ ಹಾಗೂ ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.