ಎಸಿಪಿ ಬೆಂಬಲಿಸಿ ನಾಗರಿಕ ಸಂಘಟನೆಗಳ ಪ್ರತಿಭಟನೆ
Team Udayavani, Nov 23, 2017, 1:27 PM IST
ಬೆಂಗಳೂರು: ಜೆ.ಸಿ.ನಗರ ಎಸಿಪಿ ಮಂಜುನಾಥ್ ಬಾಬು ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶೆಟ್ಟಿ ಲಂಚ್ ಹೋಂ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆಯೇ ಹೊರತು ಬೇರೆ ಯಾವುದೇ ದುರುದ್ದೇಶದಿಂದ ಅಲ್ಲ. ವಿನಾ ಕಾರಣ ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಎಸಿಪಿ ವಿರುದ್ಧ ದೂರುತ್ತಿದ್ದಾರೆ ಎಂದು ಆರೋಪಿಸಿ ಹೆಬ್ಟಾಳ ವಿಧಾನಸಭಾ ನಾಗರಿಕ ಸಂಘ ಮತ್ತು ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಸೇರಿದಂತೆ ನೂರಾರು ಕಾರ್ಯಕರ್ತರು ಬುಧವಾರ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ಎಸಿಪಿ ಕಚೇರಿ ಎದುರು ಜಮಾಯಿಸಿದ್ದ ಸುಮಾರು 400ಕ್ಕೂ ಅಧಿಕ ಸಾರ್ವಜನಿಕರು ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು. ಎಸಿಪಿ ಮಂಜುನಾಥ್ ಬಾಬು ದಕ್ಷ ಅಧಿಕಾರಿಯಾಗಿದ್ದು, ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಪೇದೆಗೆ ಏಕವಚನದಲ್ಲಿ
ಸಂಭೋದಿಸಿದ್ದರಿಂದ ಕೋಪಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಆ ರೀತಿ ನಡೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇನ್ನು ಭೂಗತ ಪಾತಕಿ ರವಿಪೂಜಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ಹೋಟೆಲ್ ಮುಚ್ಚುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಕೃತ್ಯದ ಹಿಂದೆ ಎಸಿಪಿ ಮಂಜುನಾಥ್ ಬಾಬು ಇದ್ದಾರೆ ಎಂದು ರಾಜೀವ್ ಶೆಟ್ಟಿ ಆರೋಪಿಸುತ್ತಿರುವುದು ಸರಿಯಲ್ಲ. ಮಂಜುನಾಥ್ ಬಾಬು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.
ಇಂತಹ ಅಧಿಕಾರಿ ವಿರುದ್ಧ ಇಲ್ಲದ ಆರೋಪ ಸೂಕ್ತವಲ್ಲ. ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಹಲ್ಲೆಯ ಹಿಂದಿನ ಸತ್ಯಾಸತ್ಯತೆಯನ್ನು ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಬಹಿರಂಗ ಪಡಿಸಬೇಕು. ಅಷ್ಟೇ ಅಲ್ಲದೇ, ಮಂಜುನಾಥ್ ಬಾಬು ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳದೆ, ಸದ್ಯ ಇರುವ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಡಿಸಿಪಿಗೆ ಮನವಿ: ಎಸಿಪಿ ಮಂಜುನಾಥ್ ಬಾಬು ಪರನೂರಾರು ಹೋರಾಟಗಾರರು ರಸ್ತೆಗಳಿದ ಪರಿಣಾಮ
ಸ್ಥಳಕ್ಕೆ ಧಾವಿಸಿ ಡಿಸಿಪಿ ಚೇತನ್ ಸಿಂಗ್ ರಾಥೋಡ್‌ಗೆ ಪ್ರತಿಭಟನಾಕಾರರು ಎಸಿಪಿ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಮನವಿ ಪತ್ರ ನೀಡಿದರು. ರಾಜೀವ್ ಶೆಟ್ಟಿಗೆ ಬಂದ ಪ್ರಾಣಬೆದರಿಕೆ ಕರೆ ಹಿಂದೆ ಎಸಿಪಿ ಮಂಜುನಾಥ್ ಬಾಬು ಇದ್ದಾರೆ ಎಂಬ ಆರೋಪ ಸುಳ್ಳ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಸಂಘದ ಸಂಚಾಲಕ ರವಿಶಂಕರ್ ಶೆಟ್ಟಿ, ಘಟನೆಗೂ ಮುನ್ನ ಎಸಿಪಿ ಮಂಜುನಾಥ್ ಬಾಬು ಹೊಟೇಲ್ ಬಳಿ ತೆರಳುವ ಮುನ್ನವೇ ಇಬ್ಬರು ಪಿಸಿ ಹೊಟೇಲ್ ಮುಚ್ಚುವಂತೆ ತಿಳಿಸಿದ್ದರು. ನ.10 ರಂದು ಟಿಪ್ಪು
ಜಯಂತಿ ಹಿನ್ನೆಲೆ ಭದ್ರತೆ ಕೈಗೊಂಡಿದ್ದ ಎಸಿಪಿ ರಾತ್ರಿ ವೇಳೆ ಬೀಟ್‌ಗೆ ತೆರಳಿದ್ದರು. ಈ ವೇಳೆ ಹೋಟೆಲ್ ತೆರದಿರುವುದು ಗಮನಕ್ಕೆ ಬಂದಿತ್ತು. ಬಾರ್ ಪಕ್ಕವೇ ಹೊಟೇಲ್ ಇದ್ದುದರಿಂದ ಮುಚ್ಚು ವಂತೆ ಹೇಳಿದ್ದಾರೆ.
ಆಗ ಪೇದೆ ಜತೆ ರಾಜೀವ್ ಶೆಟ್ಟಿ ಅನುಚಿತವಾಗಿ ವರ್ತಿಸಿದ್ದರಿಂದ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಹೇಳಿದರು.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಎಸಿಪಿ ಮಂಜುನಾಥ್ ಬಾಬು ದಕ್ಷ ಅಧಿಕಾರಿ. ಅವರ ಮೇಲೆ ಮಾಡಿರುವ ಆರೋಪ ಸರಿಯಿಲ್ಲ. ಒಂದು ವೇಳೆ ಆವರಿಗೆ ನ್ಯಾಯ ಸಿಗದಿದ್ದರೆ ನಗರ ಪೊಲೀಸ್ ಇಲಾಖೆ ಆಯುಕ್ತರಿಗೆ ದೂರು ನೀಡಲಾಗುವುದು.
ಅಲ್ಲಿಯೂ ಸಹ ನ್ಯಾಯ ಸಿಗದಿದ್ದರೆ ಹೆಬ್ಟಾಳ ಬಂದ್ ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಿವೃತ್ತ ಕರ್ನಲ್ ವಾಸುದೇವ ರಾವ್ ಮಾತನಾಡಿ, ಎಸಿಪಿ ಮಂಜುನಾಥ್ ಬಾಬು ವಿರುದ್ಧ ಇದುವರೆಗೂ ಯಾವುದೇ ಆರೋಪಗಳಿಲ್ಲ. ರಾಜೀವ್ ಶೆಟ್ಟಿ ಕೋಪಗೊಂಡು ಆತುರದ ನಿರ್ಧಾರ ತೆಗೆದುಕೊಳ್ಳುವ ಬದಲು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.