“ನಮ್ಮ ನಡಿಗೆ ತ್ಯಾಜ್ಯ ಮುಕ್ತಕಡೆಗೆ”
Team Udayavani, Jan 23, 2021, 11:54 AM IST
ಬೆಂಗಳೂರು: “ಸ್ವತ್ಛಭಾರತ್ ಮಿಷನ್’ ಯೋಜನೆಯಡಿ ತ್ಯಾಜ್ಯ ಮುಕ್ತ ಗ್ರಾಮ ಪಂಚಾಯ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ “ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ’ ಆಂದೋಲನ ರೂಪಿಸಿದೆ.
ಹಳ್ಳಿಗಳನ್ನು ಸಂಪೂರ್ಣವಾಗಿ ಸ್ವತ್ಛ ಮತ್ತು ಸುಂದರವಾಗಿಟ್ಟು ಕೊಳ್ಳುವುದು ಈ ಆಂದೋಲನದ ಮುಖ್ಯ ಧ್ಯೇಯವಾಗಿದೆ. ನಗರ ಜಿಲ್ಲಾ ಪಂಚಾಯ್ತಿ ಯಲ್ಲಿ 93 ಗ್ರಾಮ ಪಂಚಾಯ್ತಿಗಳಿವೆ. ಈ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 700ಕ್ಕೂ ಅಧಿಕ ಹಳ್ಳಿಗಳಿವೆ. ಈ ಎಲ್ಲಾ ಹಳ್ಳಿಗಳಲ್ಲೂ “ನಮ್ಮ ಗ್ರಾಮ ನಮ್ಮ ಜವಾಬ್ದಾರಿ’ ಎಂಬ ಧ್ಯೇಯೋದ್ದೇಶದೊಂದಿಗೆ ಹಾಗೂ “ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ಎಂಬ ಘೋಷ ವಾಕ್ಯದಡಿಯಲ್ಲಿ ಫೆ. 15ರ ವರೆಗೆ ಒಂದು ತಿಂಗಳ ಕಾಲ ಜಾಗೃತಿ ಆಂದೋಲನ ನಡೆಯಲಿದೆ. ಈ ವೇಳೆ ತ್ಯಾಜ್ಯ ನಿರ್ವಹಣೆ ಬಗ್ಗೆ ಜನರಲ್ಲಿ ಅರಿವಿನ ಬೀಜ ಬಿತ್ತಲಾಗುತ್ತದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೂಡ ಈ ಆಂದೋಲನಕ್ಕೆ ಕೈ ಜೋಡಿಸಿದೆ. ಈ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯ್ತಿಯನ್ನು ತ್ಯಾಜ್ಯ ಮುಕ್ತ ವಾಗಿಸಲು ಹಲವಾರು ಜಾಗೃತಿ ಕಾರ್ಯ ಕ್ರಮಗಳನ್ನು ರೂಪಿಸಲಾಗುತ್ತಿದೆ. ಹಾಗೆಯೇ ಪ್ರತಿಯೊಂದು ಗ್ರಾಮಗಳಲ್ಲಿ ಎರಡು ತಿಂಗಳ ಕಾಲ ವಿಶೇಷ ಆಂದೋಲನ ಹಮ್ಮಿಕೊಳ್ಳುವ ಆಲೋಚನೆ ಕೂಡ ನಡೆದಿದೆ ಎಂದು ನಗರ ಜಿಲ್ಲಾ ಪಂಚಾಯ್ತಿಯ ಸ್ವತ್ಛ ಭಾರತ್ ಮಿಷನ್ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬ್ರೆಜಿಲ್ ತಲುಪಿದ ಭಾರತದ ಕೋವಿಡ್ ‘ಸಂಜೀವಿನಿ’
ತ್ಯಾಜ್ಯ ಸಂಪನ್ಮೂಲ ಘಟಕಗಳ ಸ್ಥಾಪನೆ: “ನಮ್ಮ ಗ್ರಾಮ ನಮ್ಮ ಜವಾಬ್ದಾರಿ’ ಪರಿಕಲ್ಪನೆಯಂತೆ ಹಳ್ಳಿ ಗಳನ್ನು ಕಸಮುಕ್ತ ಮಾಡುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಗ್ರಾಮಗಳನ್ನು ತ್ಯಾಜ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹಂತ-ಹಂತವಾಗಿ “ಸ್ವತ್ಛ ಸಂಕೀರ್ಣ’ (ತ್ಯಾಜ್ಯ ಸಂಪನ್ಮೂಲ ಘಟಕ)ಗಳನ್ನು ಸ್ಥಾಪಿಸಲಾ ಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಸಿದ್ದರಾಮಯ್ಯ ಹೇಳಿದ್ದಾರೆ.ಘಟಕ ಸ್ಥಾಪನೆ ನಂತರ ಗ್ರಾಮ, ಮನೆ, ಹೋಟೆಲ್, ಅಂಗಡಿ- ಮುಗಟ್ಟು, ಸಂತೆ ಜಾತ್ರೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನಾಗಿ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇ ವಾರಿ ಮಾಡುವ ಕಾರ್ಯ ನಡೆಯಲಿದೆ. ಹಾಗೆಯೇ ಗ್ರಾಮೀಣ ಜನರು ಸ್ವಯಂ ಪ್ರೇರಿತರಾಗಿ ತ್ಯಾಜ್ಯ ವಿಂಗಡನೆಯ ಅಭ್ಯಾಸವನ್ನು ರೂಢಿಸಿ ಕೊಳ್ಳುವಕುರಿತಂತೆ ಪ್ರರೇಪಿಸಲಾಗುವುದು ಎಂದು ತಿಳಿಸಿದ್ದಾರೆ.
ಹಳ್ಳಿಗಳನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಸ್ವತ್ಛ ಭಾರತ್ ಮಿಷನ್ ಅಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ ಇಲಾಖೆ “ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ಕಾರ್ಯಕ್ರಮ ರೂಪಿಸಿದೆ. ಈಗಾಗಲೇ ಆರಂಭವಾಗಿರುವ ಈ ಜಾಗೃತಿ ಆಂದೋಲನ ಫೆ.15ರ ವರೆಗೂ ನಡೆಯಲಿದೆ.
ಕೆ.ಶಿವರಾಮೇಗೌಡ, ಸಿಇಒ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ
ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.