ಸ್ವಚ್ಛ ಸರ್ವೇಕ್ಷಣ್: ಬಿಬಿಎಂಪಿಗೆ 214ನೇ ರ್ಯಾಂಕ್, ಕಳೆದ ಬಾರಿಗಿಂತ ಕಳಪೆ ಸಾಧನೆ!
Team Udayavani, Aug 20, 2020, 2:07 PM IST
ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್ ನಲ್ಲಿ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿನ್ನಡೆಯಾಗಿದೆ. ಕಳೆದ ವರ್ಷ ರ್ಯಾಂಕಿಂಗ್ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ.
ಪ್ರತಿ ವರ್ಷ ನಗರಗಳ ಸ್ವಚ್ಛತೆ ಹಾಗೂ ಕಸವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಡಿ ಪ್ರಶಸ್ತಿ ಮತ್ತು ರ್ಯಾಂಕಿಂಗ್ ನೀಡುತ್ತದೆ. ಬೆಂಗಳೂರು ಈ ಬಾರಿಯೂ ಹಿನ್ನಡೆ ಸಾಧಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ 20 ರ್ಯಾಂಕ್ ಹಿನ್ನಡೆ ಸಾಧಿಸಿದೆ.
ಇದನ್ನೂ ಓದಿ: ಮತ್ತೆ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆದ ಸಾಂಸ್ಕೃತಿಕ ನಗರಿ ಮೈಸೂರು
ಬೆಸ್ಟ್ ಸಸ್ಟೇನೆಬಲ್ ಸಿಟಿ: ಕಳೆಪೆ ಸಾಧನೆಯ ನಡುವೆಯೂ ಪಾಲಿಕೆಗೆ ಬೆಸ್ಟ್ ಸಸ್ಟೇನೆಬಲ್ ಸಿಟಿ ಎಂಬ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳನ್ನು ಪಟ್ಟಿ ಮಾಡಿ ಕಸ ವಿಲೇವಾರಿ ಹಾಗೂ ನಿರ್ವಹಣೆಗೆ ಈ ನಗರಗಳು ಅಳವಡಿಸಿಕೊಂಡಿರುವ ವಿಧಾನ ಮತ್ತು ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳಲ್ಲಿ ಪಾಲಿಕೆಗೆ 37ನೇ ರ್ಯಾಂಕ್ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.