ಸ್ವಚ್ಛ ಸರ್ವೇಕ್ಷಣ : ಆನ್‌ಲೈನ್ ಅಭಿಯಾನಕ್ಕೆ ಒತ್ತು
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮನೆಯಿಂದಲೇ ಅಭಿಪ್ರಾಯ ತಿಳಿಸಲು ಮರೆಯಬೇಡಿ
Team Udayavani, Dec 27, 2020, 1:24 PM IST
ಬೆಂಗಳೂರು: ಕೋವಿಡ್ ಭೀತಿಯ ನಡುವೆಯೇ ಕೇಂದ್ರ ಸರ್ಕಾರದ ಸ್ವತ್ಛ ಸರ್ವೇಕ್ಷಣ ಭಾಗವಾದ ಜನಾಭಿಪ್ರಾಯ ಸಂಗ್ರಹ 2021ರ ಜನವರಿಯಿಂದ ರಾಜ್ಯದಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಜನಗುಂಪು ಸೇರುವ ಪ್ರದೇಶದಲ್ಲಿ ಅಭಿಯಾನ ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸಾಧ್ಯವಿಲ್ಲ. ಆದರೆ, ಜನಾಭಿಪ್ರಾಯ ಸಂಗ್ರಹದಲ್ಲಿ ಹಿನ್ನಡೆಯಾದರೆ ಸ್ವಚ್ಛ ಸರ್ವೇಕ್ಷಣದಲ್ಲಿ ಅಂಕ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ, ಬೆಂಗಳೂರು, ಮೈಸೂರು ಹಾಗೂ ಹುಬ್ಬಳಿ ಮತ್ತು ಧಾರವಾಡದಂತಹ ಮಹಾನಗರ ಪಾಲಿಕೆಗಳು ಸೇರಿದಂತೆ ವಿವಿಧ ಪಾಲಿಕೆಗಳು ಆನ್‌ಲೈನ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿವೆ.
ಸ್ವಚ್ಛ ಸರ್ವೇಕ್ಷಣನಲ್ಲಿ ಕಳಪೆ ಸಾಧನೆ ಮಾಡಿದ ಬಿಬಿಎಂಪಿ ಈ ಬಾರಿ ಉತ್ತಮ ರ್‍ಯಾಂಕ್ ನಿರೀಕ್ಷಣೆಯಲ್ಲಿದೆ. ಕಡಿಮೆ ಜನ ಸಂಖ್ಯೆ ಇದ್ದರೂ ಉತ್ತಮ ಸಾಧನೆ ಮಾಡಿದ್ದ ತುಮಕೂರು ಪಾಲಿಕೆಗೆ ಈ ಬಾರಿ ಸವಾಲು ಎದುರಾಗಿದೆ. ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಮೈಸೂರು ಪಾಲಿಕೆ ಈ ಬಾರಿ 7 ಸ್ಟಾರ್ ರ್‍ಯಾಂಕಿಂಗ್‌ಗೆ ಅರ್ಜಿ ಸಲ್ಲಿಸಿದೆ. ರಾಜ್ಯದಲ್ಲಿ 5 ಸ್ಟಾರ್ (ಗಾರ್ಬೇಜಜ್ ಫ್ರೀ ಸಿಟಿ)ಯಲ್ಲಿ ಸ್ಥಾನ ಪಡೆದಿರುವ ಏಕೈಕ ನಗರ ಮೈಸೂರು. ಇದೀಗ ಏಳನೇ ಸ್ಟಾರ್‌ಗೆ ಅರ್ಜಿ ಸಲ್ಲಿಸಿದೆ.
ಆನ್‌ಲೈನ್ ಅಭಿಪ್ರಾಯಕ್ಕೆ ಒತ್ತು: ಕೋವಿಡ್ ಸೋಂಕು ಇರುವ ಹಿನ್ನೆಲೆಯಲ್ಲಿ ಈ ಬಾರಿ ಆನ್ ಲೈನ್‌ನ ಮೂಲಕ ಮಾಹಿತಿ ಸಂಗ್ರಹ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ. ಮನೆಯಲ್ಲೇ ಕಾಂಪೋಸ್ಟಿಂಗ್ ಮಾಡುವುದು, ಕಸ ಸಂಸ್ಕರಣೆವಿಧಾನ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಿಡಿಯೋ ಮೂಲಕ ಸಾರ್ವಜನಿಕರಿಗೆ ಸ್ಪರ್ಧೆ ಏರ್ಪಡಿಸಲಾಗುವುದು’ ಎನ್ನುತ್ತಾರೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ.
ಇದನ್ನೂ ಓದಿ : ವಿದೇಶಿ ವಸ್ತುಗಳ ನಿರಾಕರಣೆ; ಮೇಡ್ ಇನ್ ಇಂಡಿಯಾ ಉತ್ಪನ್ನಗಳತ್ತ ದೇಶದ ಜನರ ಚಿತ್ತ: ಪಿಎಂ ಮೋದಿ
ಈ ವಿಚಾರದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯೂ ಹಿಂದುಳಿದಿಲ್ಲ. “ಆಟೋ ಟಿಪ್ಪರ್ ಗಳಲ್ಲಿನ ಧ್ವನಿ ವರ್ಧಕ ಹಾಗೂ ರೇಡಿಯೋದ ಮೂಲಕ ಜನಾಭಿಪ್ರಾಯದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಅದೇ ರೀತಿ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತೇವೆ’ ಎಂದು ಹುಬ್ಬಳ್ಳಿ- ಧಾರವಾಡ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.
ಕಳೆದ ಬಾರಿ ಜನಾಭಿಪ್ರಾಯದಲ್ಲಿ 56 ಸಾವಿರಕ್ಕೆ (ತುಮಕೂರಿಗಿಂತ ಕಳಪೆ) ಜನಾಭಿಪ್ರಾಯ ಬಿಬಿ ಎಂಪಿಯಲ್ಲಿ ದಾಖಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ)ಆಯುಕ್ತ ರಂದೀಪ್ ಅವರು, “ಕಳೆದ ಬಾರಿ ಅತೀ ಕಡಿಮೆ ಜನಾಭಿಪ್ರಾಯ ಸಂಗ್ರಹವಾಗಿತ್ತು. ಹೀಗಾಗಿ, ರ್‍ಯಾಂಕ್‌ನಲ್ಲೂ ಹಿನ್ನಡೆ ಉಂಟಾಗಿತ್ತು. ಈ ಬಾರಿ ಜನಾಭಿಪ್ರಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ವಿವಿಧ ಮಾನದಂಡಗಳ ಮೇಲೆ ರ್‍ಯಾಂಕಿಂಗ್:
ಸರ್ವೇಕ್ಷಣದಲ್ಲಿ ಒಡಿಎಫ್ ಹಾಗೂ ಗಾರ್ಬೇಜ್ ಫ್ರೀ ಸಿಟಿ ಎಂಬ ಎರಡು ಮಾನದಂಡಗಳಿದ್ದು, ಇವುಗಳಲ್ಲಿ ವಿವಿಧ ಹಂತಗಳಿವೆ. ಇದರಲ್ಲಿ ನಗರ ಬಹಿಲು ಬಹಿರ್ದೆಸೆ ಮುಕ್ತ, ಶೌಚಾಲಯಗಳ ಲಭ್ಯತೆ ಹಾಗೂ ಸ್ವಚ್ಛತೆ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.
ಸ್ವಚ್ಛ ಸರ್ವೇಕ್ಷಣದಲ್ಲಿಪರಿಶೀಲಿಸುವ ಪ್ರಮುಖ ಅಂಶಗಳು :
- ನಿರ್ದಿಷ್ಟ ನಗರದಲ್ಲಿ ಕಸ ನಿರ್ವಹಣೆ,ನೈರ್ಮಲ್ಯ, ಶೌಚಾಲಯ ವ್ಯವಸ್ಥೆ ಹಾಗೂ ಜನಾಭಿಪ್ರಾಯ
- ನಗರದಲ್ಲಿ ಒಟ್ಟು ಉತ್ಪತ್ತಿಯಾಗುವ ಕಸದ ಪ್ರಮಾಣ ಹಾಗೂ ಕಸ ಗೊಬ್ಬರವಾಗುವ ಪ್ರಮಾಣ
- ಕಸದ ಡಬ್ಬಿ ಹಾಗೂ ಸ್ವತ್ಛತೆ ಸೇರಿದಂತೆ ರಾಜ ಹಲವು ಅಂಶಗಳು ಬಗ್ಗೆ ಪರಿಶೀಲನೆ
ಜನಾಭಿಪ್ರಾಯ ಸಂಗ್ರಹದ ವೇಳೆ ಕೇಳುವ ಪ್ರಶ್ನೆಗಳು :
- ನಿಮ್ಮ ನಗರದ ಸ್ವತ್ಛತೆಗೆ 100ಕ್ಕೆ ಎಷ್ಟು ಅಂಕ ನೀಡಲು ಬಯಸುತ್ತೀರ, ನಗರ ವಾಣಿಜ್ಯ ಮತ್ತು ಸಾರ್ವಜನಿಕ ಪ್ರದೇಶಗಳು ಸ್ವಚ್ಛವಾಗಿವೆಯೇ?
- ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಿಮ್ಮ ನಗರ ಭಾಗವಹಿಸುತ್ತಿರುವ ಬಗ್ಗೆ ನಿಮಗೆ ಗೊತ್ತೆ. ಕಳೆದ ಬಾರಿಯ ರ್‍ಯಾಂಕ್ ಏನು?
- ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯ ಸ್ವತ್ಛವಾಗಿದೆಯೇ, ಗೂಗಲ್‌ನಲ್ಲಿ ಮಾಹಿತಿ ಸಿಗುತ್ತದೆಯೇ.
- ನಗರದಲ್ಲಿ ಒಣ ಮತ್ತು ಹಸಿಕಸ ಪ್ರತ್ಯೇಕ ಸಂಗ್ರಹ ಮಾಡುತ್ತಾರೆಯೇ ?
-ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.