ಗೋಜನ್ಯ ವಸ್ತುಗಳನ್ನು ತಿರಸ್ಕರಿಸಲು ಸ್ವಾಮೀಜಿ ಸಲಹೆ
Team Udayavani, Jul 24, 2017, 11:42 AM IST
ಬೆಂಗಳೂರು: ಗೋಜನ್ಯ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಗೋಹತ್ಯೆ ದಂಧೆಯನ್ನು ಸೋಲಿಸುವ ಬೃಹತ್ ಆಂದೋಲನಕ್ಕೆ ದೇಶ ಸಜ್ಜಾಗಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಬಸವನಗುಡಿ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಯಾಕ್ಷರ- ಹಾಲುಹಬ್ಬ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಮನೆಯಲ್ಲಿ ಗೋಪಾಲನೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಗೋಪಾಲನೆಗೆ ನೆರವು ನೀಡುವತ್ತ ಗಮನಹರಿಸಬೇಕು. ಗೋವಧೆಯಿಂದ ಬರುವ ಉತ್ಪನ್ನಗಳನ್ನು ತಿರಸ್ಕರಿಸುವ ಗೋಕಿಂಕರರಾಗಿ ಸೇವೆ ಸಲ್ಲಿಸುವ ಮೂಲಕ ಮತ್ತು ಅಭಯಾಕ್ಷರಕ್ಕೆ ಸಹಿ ಮಾಡುವ ಸಪ್ತಸೂತ್ರಗಳ ಮೂಲಕ ಗೋರಕ್ಷ$ಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಉಡುಪಿ ಫಲಿಮಾರು ಮಠದ ವಿದ್ಯಾಧೀಶ ಶ್ರೀಪಾದರು ಆಶೀರ್ವಚನ ನೀಡಿ, ಗೋವಿನ ಮೇಲೆ ಕ್ರೌರ್ಯ ಎಸಗುವವರು ಮುಂದಿನ ಜನ್ಮದಲ್ಲಿ ತಾವು ಹಸುವಾದರೆ ಏನಾಗಬಹುದು ಎಂಬ ಪ್ರಶ್ನೆ ಹಾಕಿಕೊಳ್ಳಲಿ. ಇದಕ್ಕೆ ರಾಜಕೀಯದಲ್ಲಿ ಉತ್ತರವಿಲ್ಲ ಎಂದು ಹೇಳಿದರು. ತಾಯಿಗೆ ವಯಸ್ಸಾಯಿತು ಎಂದು ವಧಾಲಯಕ್ಕೆ ಕಳುಹಿಸುತ್ತೇವೆಯೇ? ಅಂತೆಯೇ ಗೋಮಾತೆಯನ್ನು ಕಳುಹಿಸುವುದೂ ಅಪರಾಧ ಎಂದು ವಿಶ್ಲೇಷಿಸಿದರು.
ಸಾಹಿತಿ ಡಾ.ದೊಡ್ಡರಂಗೇಗೌಡ, ಸಂಗೀತ ನಿರ್ದೇಶಕ ವಿ.ಮನೋಹರ್, ಶಾಸಕ ರವಿ ಸುಬ್ರಹ್ಮಣ್ಯ, ಬಿಬಿಎಂಪಿಸದಸ್ಯ ವೆಂಕಟೇಶ್, ಶ್ಯಾಮಲಾ ಸಾಯಿಕುಮಾರ್, ಎ.ವಿ.ನಂದಿನಿ, ಜೆ.ಎಂ.ಸವಿತಾ ಮಾಯಣ್ಣ, ಕೆಂಪೇಗೌಡ, ಸಮಾಜಸೇವಕರಾದ ಇ.ಮಂಜುನಾಥ ರಾವ್, ಸಾಯಿಕುಮಾರ್, ಪಿಳ್ಳಪ್ಪ, ಉದ್ಯಮಿ ರುಕಾಗದ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಟಿ.ಎನ್.ಶಿವಾನಂದ ಶೆಟ್ಟಿ ಸಭಾಪೂಜೆ ನೆರವೇರಿಸಿದರು. ಅಭಯಾಕ್ಷ$ದಿಂದ ಪ್ರೇರಣೆ ಪಡೆದ ಮಹಿಳೆ ಝಾನ್ಸಿರಾಣಿ ಹಾಗೂ ಆಕೆಯ ಮಗ ರಾಣಾ ಪ್ರತಾಪ್ ಅವರು 200 ಹಸುಗಳನ್ನು ಸಾಕುವ ಕೈಂಕರ್ಯಕ್ಕೆ ಮುಂದಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.