ಮಠದ ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಸೋದರ ದೂರು
Team Udayavani, Oct 28, 2017, 4:15 PM IST
ಬೆಂಗಳೂರು: ಹುಣಸೆಮಾರನಹಳ್ಳಿ ಜಂಗಮಮಠದ ಸ್ವಾಮೀಜಿ ರಾಸಲೀಲೆ ಸಂಬಂಧ ದಯಾನಂದ ಸ್ವಾಮೀಜಿಯ ಸಹೋದರ ಸಚ್ಚಿದಾನಂದ ಸ್ವಾಮೀಜಿ ಟ್ರಸ್ಟಿಗಳ ವಿರುದ್ಧ ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದಾರೆ.
ಮಠದ ಮುಂದೆ ಕೆಲ ವ್ಯಕ್ತಿಗಳು ಅನಗತ್ಯವಾಗಿ ಪ್ರತಿಭಟನೆ ಹಾಗೂ ದಾಂಧಲೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಮಠದ ಬಾಗಿಲನ್ನು ಒಡೆಯಲು ಯತ್ನಿಸಿ ನಮ್ಮನ್ನು ಹೊರದೂಡಲು ಮಂದಾಗಿದ್ದಾರೆ ಎಂದು ಟ್ರಸ್ಟ್‌ನ ಸದಸ್ಯ ಮಹೇಶ್, ಬಸವರಾಜು ಮತ್ತು ರುದ್ರಾರಾಧ್ಯ ಸೇರಿದಂತೆ ಕೆಲವರ ವಿರುದ್ಧ ದೂರು ದಾಖಲಾಗಿದೆ.
ಆದರೆ, ಎಫ್ಐಆರ್ ದಾಖಲು ಮಾಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಆವರಣದಲ್ಲಿ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗೇ 50ಕ್ಕೂ ಹೆಚ್ಚು ಪೊಲೀಸ್‌ರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಕ್ತರ ಪ್ರತಿಭಟನೆ: ಹಿರಿಯ ಸ್ವಾಮೀಜಿ ಸೇರಿದಂತೆ ಇಡೀ ಕುಟುಂಬವನ್ನು ಮಠದಿಂದ ಹೊರ ಹಾಕಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಭಕ್ತರು ಮಠದ ಮಂದೆ ಪ್ರತಿಭಟನೆ ನಡೆಸಿದರು. ದಯಾನಂದಸ್ವಾಮಿ ಹಾಗೂ ಹಿರಿಯ ಸ್ವಾಮೀಜಿ ಕುಟುಂಬವನ್ನು ಮಠದಿಂದ ಹೊರಹಾಕಬೇಕು.
ಇಲ್ಲವಾದಲ್ಲಿ ವೀರಶೈವ ಸಮುದಾಯದ ಮಠದ ಆಶಯಗಳಿಗೆ, ಭಕ್ತರ ಧಾರ್ಮಿಕ ಭಾವನೆಗಳಿಗೆ ಕಳಂಕ ಎದುರಾಗಲಿದ್ದು, ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಅಸಹ್ಯವ್ಯಕ್ತಿಗಳನ್ನು ಮಠದಲ್ಲಿ ಇಟ್ಟುಕೊಳ್ಳುವುದು ಬೇಡ.
ಅಲ್ಲದೇ, ಮಠದ ಆಸ್ತಿ ಹೊಡೆಯಲು ಸ್ವಾಮೀಜಿ ಕುಟುಂಬ ಹುನ್ನಾರ ನಡೆಸಿದ್ದು, ಅವರನ್ನು ಇಲ್ಲಿಂದ ಖಾಲಿ ಮಾಡಿಸಿ ಬೇರೆಯವರನ್ನು ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಮತ್ತು ಟ್ರಸ್ಟಿಗಳು ಹಿರಿಯ ಮಠಾಧೀಶರಲ್ಲಿ ಮನವಿ ಮಾಡಿ¨ªಾರೆ.
ಈ ಹಿಂದೆಯೂ ಮಠದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೂ ಕೂಡ ದೂರು ನೀಡಿ¨ªೆವು,
ಆದರೆ, ಹಲವು ಗಣ್ಯರು ಪಂಚಾಯಿತಿ ನಡೆಸಿ ಸುಮ್ಮನಿರಿಸಿದ್ದರು. ಇದೀಗ ಸ್ವಾಮೀಜಿಯ ನೀಚ ಕೃತ್ಯಕ್ಕೆ ಇಡೀ ಗ್ರಾಮಕ್ಕೆ ಮತ್ತು ಸಮುದಾಯಕ್ಕೆ ಕೆಟ್ಟ ಹೆಸರು ಬಂತು. ತಕ್ಷಣ ವೀರಶೈವ ಸಮಾಜದ ಹಿರಿಯ ಮುಖಂಡರು, ಹಿರಿಯ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು, ಮಠದ ಟ್ರಸ್ಟಿಗಳು ಒತ್ತಾಯಿಸಿದರು.
ಎರಡು ಬಣಗಳ ಪ್ರತಿಭಟನೆ: ಪ್ರತಿಭಟನಾಕಾರರಲ್ಲೇ ಎರಡು ಬಣಗಳು ಸೃಷ್ಟಿಯಾಗಿದ್ದು, ಒಂದು ಬಣ ದಯಾನಂದ ಸ್ವಾಮೀಜಿ ಪರವಾಗಿ ಹೋರಾಟ ಮಾಡುತ್ತಿದ್ದರೆ ಮತ್ತೂಂದ ಬಣ ಸ್ವಾಮೀಜಿಯ ಇಡೀ ಕುಟುಂಬವನ್ನು ಹೊರಹಾಕಬೇಕು ಎಂದು ಒತ್ತಾಯಿಸುತ್ತಿವೆ. ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಾಮಯ್ಯ ಹಿಮಾಚಲಪತಿ ಎಂಬಾತನ ಮೇಲೆ ಹನಿಟ್ಯಾ†ಪ್ ಮಾಡಿಸಿದ್ದಿರಾ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಮಾಚಲಪತಿಯ ಪತ್ನಿ ಶಾಂತ ರಾಮಯ್ಯನ ಮೇಲೆ ತಿರುಗಿ ಬಿದ್ದು ನನ್ನ ಪತಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ನಿವೃತ್ತ ಅಧಿಕಾರಿ ಮಿರ್ಜಿ ಮಧ್ಯಸ್ಥಿಕೆ
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಅವರ ಗಮನಕ್ಕೆ ಸ್ವಾಮೀಜಿಯ ರಾಸಲೀಲೆ ಕುರಿತು ತಿಳಿದಿತ್ತು. ಎರಡು ತಿಂಗಳ ಹಿಂದಷ್ಟೇ ಮಿರ್ಜಿ ಅವರು ಮಠದ ಟ್ರಸ್ಟಿಗಳು ಹಾಗೂ ಸಮುದಾಯದ ಮುಖಂಡರ ಜತೆ ಚರ್ಚಿಸಿ ಕೆಲವ ಸಲಹೆಗಳನ್ನು ನೀಡಿದ್ದರು. ಹಾಗೇ ಯಾವುದೇ ಸಂದರ್ಭದಲ್ಲಿಯೂ ಸಿಡಿ ಬಿಡುಗಡೆ ಮಾಡುವುದು ಬೇಡ. ಇದರಿಂದ ಮಠ ಹಾಗೂ ಸಮುದಾಯ ಮರ್ಯಾದೆ ಹಾಳಾಗಲಿದೆ ಎಂದು ಸೂಚಿಸಿದ್ದರು.
ಆದಾಗ್ಯೂ ಕೆಲ ಕಿಡಿಗೇಡಿಗಳು ಹಣದಾಸೆಗೆ ಸಿಡಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ, ಮಠದ ಆಸ್ತಿ ಸಂಬಂಧ ಜಗಳ ತೆಗೆದುಕೊಂಡು ನನ್ನ ಬಳಿಗೆ ಕೆಲವರು ಬಂದಿದ್ದರು. ಆಗ ಮಠದವರು ಕೂಡ ಬಂದಿದ್ದರು. ಆಗ ಕೆಲವರು ಪೀಠಾಧ್ಯಕ್ಷರಾಗಲು ಯೋಗ್ಯತೆ ಇಲ್ಲ. ಸಂಸ್ಕೃತ ಬರಲ್ಲ.
ಅಲ್ಲದೇ ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ಕುರಿತು ಸಿಡಿ ಕೂಡ ಇದೆ. ಆದರೆ, ಸ್ವಾಮೀಜಿ ಸುಳ್ಳು ಸಿಡಿ ಸಿದ್ಧಪಡಿಸಿದ್ದು, ನಕಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆ ವೇಳೆ ಸಿಡಿಯನ್ನು ನಾನು ನೋಡಿರಲಿಲ್ಲ. ಇದೀಗ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಆದರೆ, ಆಕ್ಷೇಪಾರ್ಹ ಸಿಡಿ ಇದ್ದರೆ ಬಿಡುಗಡೆ ಮಾಡುವುದು ಬೇಡ ಎಂದು ಸಲಹೆ ನೀಡಿದ್ದೆ. ನಂತರ ಯಾರು ಬರಲಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.