ಕೆರೆಗೆ ಮರಳಿ ಬಂದ ಬಾನಾಡಿಗಳು!
Team Udayavani, Mar 24, 2017, 11:45 AM IST
ಬೆಂಗಳೂರು: ಅಲ್ಲಿದ್ದ ಹತ್ತಾರು ದೇಶಗಳ ಪಕ್ಷಿಗಳನ್ನು ಕಂಡ ಜನರು ಮೂಕ ವಿಸ್ಮಿತರಾಗಿದ್ದರು. ಜತೆಗೆ ವಿದೇಶಿ ಗೆಳೆಯರನ್ನು ಕಂಡ ಗುಬ್ಬಚ್ಚಿಗಳು ತಾವೇನು ಕಡಿಮೆಯಿಲ್ಲ ಎಂಬಂತೆ ತಮ್ಮ ಚಿಲಿಪಿಲಿ ಮೂಲಕ ಒಂದು ಮರದಿಂದ ಮತ್ತೂಂದು ಮರಕ್ಕೆ ಹಾರುವ ಮೂಲಕ ಅಲ್ಲಿದ್ದವರಿಗೆ ಸಂತೋಷ ಉಂಟು ಮಾಡಿದವು.
ಇವೆಲ್ಲ ದೃಶ್ಯಗಳು ಕಂಡಿದ್ದು ಐತಿಹಾಸಿಕ ಯಡಿಯೂರು ಕೆರೆ ಅಂಗಳದಲ್ಲಿ. ಬಿಬಿಎಂಪಿಯಿಂದ “ಬಾನಾಡಿ ಮರಳಿ ಬಾ ಗೂಡಿಗೆ’ ಎಂಬ ಕಾರ್ಯಕ್ರಮದಡಿಯಲ್ಲಿ ಎರಡು ವರ್ಷಗಳ ನಿರಂತರ ಪ್ರಯತ್ನದಿಂದ ಯಡಿಯೂರು ಕೆರೆಗೆ 121 ಪ್ರಭೇದದ ಪಕ್ಷಿಗಳನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಮೊಬೈಲ್ ಟವರ್‌ಗಳಿಂದ ಕಣ್ಮರೆಯಾಗಿದ್ದ ನೂರಾರು ಪ್ರಭೇದದ ಹಕ್ಕಿಗಳನ್ನು ಮರಳಿ ಯಡಿಯೂರು ಕೆರೆಗೆ ತರಲು ಪಕ್ಷಿ ತಜ್ಞರಾದ ಡಾ.ಸುದರ್ಶನ್ ಹಾಗೂ ತಂಡದವರು ಅವಿತರವಾಗಿ ದುಡಿದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆರೆ ಅಂಗಳದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ.
ಪರಿಣಾಮ ಯಡಿಯೂರು ಕೆರೆಗೆ ಬ್ರೆಜಿಲ್, ಚಿಲಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನೇಪಾಳ, ಶ್ರೀಲಂಕಾ, ಸೇರಿದಂತೆ ದೇಶದ ಹಿಮಾಲಯ, ಕಾಶ್ಮೀರ, ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಪಕ್ಷಿಗಳು ಯಡಿಯೂರು ಕೆರೆಗೆ ಬಂದಿವೆ.
ಗುರುವಾರ ಯಡಿಯೂರು ಕೆರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಜನೆಗೆ ಮೇಯರ್ ಜಿ.ಪದ್ಮಾವತಿ ಅವರು ಅಧಿಕೃತವಾಗಿ ಚಾಲನೆ ನೀಡಿದರು. “ನಗರದಲ್ಲಿರುವ ಕೆರೆಗಳ ಬಳಿ ಇಂತಹ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜನೆ ರೂಪಿಸಲಾಗುವುದು.
ಜತೆಗೆ ಬಜೆಟ್‌ನಲ್ಲಿ ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಇರಿಸಲಾಗುವುದು” ಎಂದು ಭರವಸೆ ನೀಡಿದರು. ಮಾಜಿ ಡಿಸಿಎಂ ಆರ್.ಅಶೋಕ್, ಬಿಬಿಎಂಪಿ ಸದಸ್ಯೆ ಪೂರ್ಣಿಮಾ ರಮೇಶ್, ಮಾಜಿ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್, ನಟಿ ಸಂಯುಕ್ತಾ ಹೊರನಾಡು ಮತ್ತಿತರರು ಪಾಲ್ಗೊಂಡಿದ್ದರು.
ಕೃತಕ ಗೂಡುಗಳ ನಿರ್ಮಾಣ: ಯಡಿಯೂರು ಕೆರೆಯಲ್ಲಿ ಹೆಚ್ಚಿನ ಪ್ರಭೇದದ ಪಕ್ಷಿಗಳು ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಜೈವಿಕ ವೈವಧ್ಯಮಯ ಪಕ್ಷಿಗಳ ಗೋಡೆ ಮತ್ತು ಜೈವಿಕ ವೈವಿಧ್ಯಮಯ ಪಕ್ಷಿ ವೀಕ್ಷಕ ಗೋಪುರವನ್ನು ನಿರ್ಮಿಸಲಾಗಿದೆ. ಈ ಗೋಡೆ ಮತ್ತು ಗೋಪುರಗಳಲ್ಲಿ ಕೃತಕವಾಗಿ ನಿರ್ಮಿಸಿರುವ ಗೂಡುಗಳಲ್ಲಿ ವಿವಿಧ ಬಗೆಯ ಪಕ್ಷಿಗಳು ಇಲ್ಲಿಯೇ ಶಾಶ್ವತವಾಗಿ ನೆಲೆ ನಿಲ್ಲಲಿ ಎಂಬುದು ಇದರ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.